ಗುಜರಾತ್‌ ಚುನಾವಣೆ ಫಲಿತಾಂಶ: ಅತಿ ಹೆಚ್ಚು ಸ್ಥಾನ ಗೆದ್ದು 37 ವರ್ಷಗಳ ಹಿಂದಿನ ದಾಖಲೆ ಸಾರ್ವಕಾಲಿಕ ದಾಖಲೆ ಮುರಿಯುವತ್ತ ಬಿಜೆಪಿ

ನವದೆಹಲಿ:  ದಾಖಲೆ ಸ್ಥಾನಗಳನ್ನು ಗೆಲ್ಲುವ ಮೂಲಕ ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷವು ಸತತ ಏಳನೇ ಅವಧಿಯೊಂದಿಗೆ ದಾಖಲೆ ಸೃಷ್ಟಿಸಲು ಸಜ್ಜಾಗಿದೆ.
ಕೇಸರಿ ಪಕ್ಷವು ಕಾಂಗ್ರೆಸ್ ಜೊತೆಗಿನ ಮತ್ತೊಂದು ದಾಖಲೆ ಮುರಿಯುವ ಸಾಧ್ಯತೆಯಿದೆ. ಬಿಜೆಪಿಯು ಗುಜರಾತ್ ರಾಜಕೀಯದ ಪ್ರಾಬಲ್ಯದಲ್ಲಿದ್ದರೂ, 1985 ರ ಗುಜರಾತ್ ಚುನಾವಣೆಯಲ್ಲಿ 149 ಸ್ಥಾನಗಳನ್ನು ಗೆದ್ದ ಮಾಜಿ ಮುಖ್ಯಮಂತ್ರಿ ಮಾಧವಸಿಂಹ ಸೋಲಂಕಿ ಅವರು ಈವರೆಗೆ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ನ ದಾಖಲೆ ಮುರಿಯುವ ಸಾಧ್ಯತೆ ನಿಚ್ಚಳವಾಗಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ), ಗುಜರಾತ್‌ನಲ್ಲಿ ಸತತ ಏಳನೇ ಅವಧಿಗೆ ದಾಖಲೆ ಬರೆದಿದ್ದು, ಸೋಮವಾರ ಪ್ರಮಾಣ ವಚನ ಸಮಾರಂಭ ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ಬಿಜೆಪಿ 158 ಸ್ಥಾನಗಳಲ್ಲಿ (ಕಳೆದ ಚುನಾವಣೆಗಿಂತ 59 ಸ್ಥಾನಗಳು ಹೆಚ್ಚು) ಮುನ್ನಡೆ ಸಾಧಿಸಿದೆ. ಕೇವಲ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನ ಮಾಡಿದೆ. ಬಹುತೇಕ ಮತ ಎಣಿಕೆ ಕೊನೆ ಹಂತದಲ್ಲಿದ್ದು ಇನ್ನು ಮುನ್ನಡೆ ಬದಲಾಗುವ ಸಾಧ್ಯತೆ ತೀರ ಕಡಿಮೆ.

ಗುಜರಾತ್‌ನಲ್ಲಿ, ಭಾರತೀಯ ಜನತಾ ಪಕ್ಷವು ಇದುವರೆಗೆ 53 ಪ್ರತಿಶತದಷ್ಟು ಮತಗಳನ್ನು ಗಳಿಸಿದೆ, ಬಿಜೆಪಿ 2017ರ ವಿಧಾನಸಭೆ ಚುನಾವಣೆಯಲ್ಲಿ 99 ಸ್ಥಾನಗಳನ್ನು ಗೆದ್ದು ಸರ್ಕಾರವನ್ನು ರಚಿಸಿದಾಗ 49.1 ರಿಂದ ಹೆಚ್ಚಾಗಿದೆ. ಕಾಂಗ್ರೆಸ್ ಶೇಕಡಾ 27 ಮತ ದಾಟಲು ಹೆಣಗಾಡುತ್ತಿದೆ, ಕಳೆದ ಬಾರಿ ಶೇಕಡಾ 41.4ಕ್ಕೆ ಹೋಲಿಸಿದರೆ ಭಾರಿ ಕುಸಿತವಾಗಿದೆ. ಕಳೆದ ಬಾರಿ ಕಾಂಗ್ರೆಸ್ 77 ಸ್ಥಾನ ಗಳಿಸಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ 62.21 ಶೇಕಡಾ ಮತಗಳನ್ನು ಗಳಿಸಿ ಎಲ್ಲಾ 26 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿತ್ತು, ಕಾಂಗ್ರೆಸ್‌ 32.11 ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಯಾವುದೇ ಸ್ಥಾನ ಗೆಲ್ಲಲು ವಿಫಲವಾಗಿತ್ತು. ಆದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅದಕ್ಕಿಂತ ಕಡಿಮೆ ಮತಗಳನ್ನು ಪಡೆದು ಆಡಳಿತ ವಿರೋಧಿ ಅಲೆ ಲಾಭ ಪಡೆಯಲು ಸಂಪೂರ್ಣ ವಿಫಲವಾಗಿದೆ. ಆಮ್‌ ಆದ್ಮಿ ಪಕ್ಷವು ಶೇಕಡಾ 13 ರಷ್ಟು ಮತ ಪಡೆದಿದೆ.
2022ರ ಗುಜರಾತ್‌ ವಿಧಾನಸಭೆ ಚುನಾವಣೆಗೆ ಅಮಿತ್ ಶಾ ಅವರು 140 ಸ್ಥಾನಗಳ ಗುರಿ ಹೊಂದಿದ್ದರು, ಅದನ್ನು ಪಕ್ಷವು ಅದನ್ನು ಮುರಿದು 1985ರಲ್ಲಿ ಗೆದ್ದಿದ್ದ 149 ಸ್ಥಾನಗಳ ಕಾಂಗ್ರೆಸ್‌ನ ದಾಖಲೆಯನ್ನು ಮುರಿದು ಸಾರ್ವಕಾಲಿಕ ಅತ್ಯುತ್ತಮ ಸಾಧನೆ ಮಾಡುವ ಹಾದಿಯಲ್ಲಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಗುಜರಾತ್‌ನಲ್ಲಿ ಮೊದಲ ಬಾರಿಗೆ ತ್ರಿಕೋನ ಸ್ಪರ್ಧೆಯನ್ನು ಮಾಡಲು ಆಕ್ರಮಣಕಾರಿ ಪ್ರಚಾರವನ್ನು ಪ್ರಾರಂಭಿಸಿದ ಆಮ್ ಆದ್ಮಿ ಪಕ್ಷ ಅಥವಾ ಎಎಪಿ, ಮುಖ್ಯಮಂತ್ರಿ ಮುಖ ಇಸುದನ್ ಗಧ್ವಿ ಸೇರಿದಂತೆ ಮೂವರು ಪ್ರಮುಖ ಎಎಪಿ ಅಭ್ಯರ್ಥಿಗಳು ಸೋಲನುಭವಿಸಿದ್ದಾರೆ.
ಆದಾಗ್ಯೂ, ಐದು ಗಂಟೆಗಳ ಮತ ಎಣಿಕೆಯ ನಂತರ ತೀವ್ರ ಹಣಾಹಣಿಯಿಂದ ಕೂಡಿರುವ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶವು ಮುಖ ಉಳಿಸಿದೆ. ಹಿಮಾಚಲ ಚುನಾವಣಾ ಫಲಿತಾಂಶವು ಈಗ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮಾತ್ರ ಅಧಿಕಾರ ಹೊಂದಿರುವ ಹಳೆಯ ಪಕ್ಷಕ್ಕೆ ಸಮಾಧಾನ ನೀಡುವ ಫಲಿತಾಂಶವಾಗಿದೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಗೆಲುವನ್ನು ದಾಖಲಿಸಲು ಸಜ್ಜಾಗಿರುವ ಬಿಜೆಪಿ ಡಿಸೆಂಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನೂತನ ಸರ್ಕಾರದ ಸಚಿವರ ಪ್ರಮಾಣ ವಚನ ಸ್ವೀಕರಿಸಲಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟ್ಲೋಡಿಯಾ ಕ್ಷೇತ್ರದಿಂದ 1,92,000 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಹಾರ್ದಿಕ್ ಪಟೇಲ್ ವಿರಾಮಗಾಂ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಇಸುಧನ್ ಗಧ್ವಿ ಖಂಭಾಲಿಯಾ ಕ್ಷೇತ್ರದಲ್ಲಿ 18745 ಮತಗಳಿಂದ ಸೋತಿದ್ದಾರೆ.
182 ಸದಸ್ಯ ಬಲದ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆದಿತ್ತು.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement