ಎರಡನೇ ಬಾರಿಗೆ ಐರ್ಲೆಂಡ್ ಪ್ರಧಾನಿಯಾಗಲಿರುವ ಭಾರತೀಯ ಮೂಲದ ಲಿಯೋ ವರದ್ಕರ್

ಡಬ್ಲಿನ್ (ಐರ್ಲೆಂಡ್) : ಮೂರು ಪಕ್ಷಗಳ ಆಡಳಿತದ ಒಕ್ಕೂಟದ ಎರಡು ಪ್ರಮುಖ ರಾಜಕೀಯ ಪಾಲುದಾರ ಪಕ್ಷಗಳ ನಡುವಿನ ಅಧಿಕಾರ ಹಸ್ತಾಂತರದಲ್ಲಿ ಈ ವಾರಾಂತ್ಯದಲ್ಲಿ ಭಾರತೀಯ ಮೂಲದ ಲಿಯೋ ವರದ್ಕರ ಅವರು ಎರಡನೇ ಬಾರಿಗೆ ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಲಿದ್ದಾರೆ.
ಬಹಿರಂಗವಾಗಿ ಘೋಷಿಸಿಕೊಂಡ ಸಲಿಂಗಕಾಮಿ ಮತ್ತು ಐರ್ಲೆಂಡ್‌ನ ಅತ್ಯಂತ ಕಿರಿಯ ನಾಯಕರಲ್ಲಿ ಒಬ್ಬರಾಗಿರುವ ವರದ್ಕರ್ ಅವರು ಎರಡನೇ ಬಾರಿಗೆ ಐರ್ಲೆಂಡ್‌ನ ಪ್ರಧಾನ ಮಂತ್ರಿಯಾಗಿದ್ದಾರೆ. 43 ವರ್ಷ ವಯಸ್ಸಿನ ವರದ್ಕರ್ ಅವರ ಫೈನ್ ಗೇಲ್ ಮತ್ತು ಪ್ರಸ್ತುತ ಪ್ರಧಾನಿ ಮೈಕೆಲ್ ಮಾರ್ಟಿನ್ ಅವರ ಫಿಯಾನಾ ಫೇಲ್ ಪಾರ್ಟಿಗಳ ನಡುವಿನ ಅಧಿಕಾರದ ಹಸ್ತಾಂತರದ ಒಪ್ಪಂದದಂತೆ ಪ್ರಧಾನಿಯಾಗಿದ್ದಾರೆ.
2017ರಲ್ಲಿ ಫೈನ್ ಗೇಲ್ ಆಡಳಿತದ ಚುಕ್ಕಾಣಿ ಹಿಡಿದಾಗ ಪ್ರಧಾನಿಯಾಗಿದ್ದ ವರದ್ಕರ್ ಹೊಸ ಮುಖವಾಗಿ ಕಾಣಿಸಿಕೊಂಡರು.
ಐರ್ಲೆಂಡ್‌ನ ಸಂಡೇ ಇಂಡಿಪೆಂಡೆಂಟ್‌ ಡಿಸೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ 43 ಪ್ರತಿಶತದಷ್ಟು ಜನರು ಈಗ ಪ್ರಧಾನಿಯಾಗಿದ್ದ ಮಾರ್ಟಿನ್ ಅಧಿಕಾರದಲ್ಲಿ ಉಳಿಯುವ ಪರವಾಗಿದ್ದಾರೆ ಮತ್ತು ವರದ್ಕರ್‌ ಪರವಾಗಿ 34 ಪ್ರತಿಶತದಷ್ಟು ಜನರು ಇದ್ದಾರೆ. ಆದರೆ ವರದ್ಕರ್ ಅವರ ಬೆಂಬಲಿಗರು ಕೊರೊನಾ ವೈರಸ್ ಸಾಂಕ್ರಾಮಿಕದ ಮೂಲಕ ರಾಷ್ಟ್ರವನ್ನು ಮುನ್ನಡೆಸುವ ಅವರ ಅನುಭವವನ್ನು ಮತ್ತು ಯುರೋಪಿಯನ್ ಒಕ್ಕೂಟವನ್ನು ತೊರೆಯಲು ಬ್ರಿಟನ್‌ನ 2016 ರ ಮತದಾನದ ನಂತರದ ಫಲಿತಾಂಶವನ್ನು ಸೂಚಿಸುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಕಳೆದ ಶತಮಾನದ ಉತ್ತರಾರ್ಧದಲ್ಲಿ ಕಟ್ಟುನಿಟ್ಟಾದ, ಸಂಪ್ರದಾಯವಾದಿ ಕ್ಯಾಥೋಲಿಕ್ ನೈತಿಕತೆಯ ಪ್ರಾಬಲ್ಯವಿರುವ ದೇಶದಲ್ಲಿ ವರದ್ಕರ್ ಐರಿಶ್ ರಾಜಕೀಯದ ಉನ್ನತ ಸ್ಥಾನಕ್ಕೆ ಏರಿದ್ದು ಗಮನಾರ್ಹವಾಗಿದೆ. 38ನೇ ವಯಸ್ಸಿನಲ್ಲಿ, ಅವರು ದೇಶದ ಕಿರಿಯ ಟಾವೊಸೆಚ್ ಮತ್ತು ಅದರ ಮೊದಲ ಸರ್ಕಾರದ ಮುಖ್ಯಸ್ಥರಾದರು (ಪ್ರಧಾನಿಯಾದರು) ಮತ್ತು ಭಾರತೀಯ ಮೂಲದ ಮೊದಲ ಪ್ರಧಾನಿಯಾದರು.
ವರದ್ಕರ್ ಅವರು ಡಬ್ಲಿನ್‌ನಲ್ಲಿ ದಾದಿಯಾಗಿ ಕೆಲಸ ಮಾಡಿದ ಐರಿಶ್ ತಾಯಿಗೆ ಮತ್ತು ವೈದ್ಯರಾಗಿದ್ದ ಭಾರತೀಯ ವಲಸಿಗ ತಂದೆಗೆ ಜನಿಸಿದರು.ತಂದೆಯ ಹೆಸರು ಡಾ.ಅಶೋಕ್ ವರದ್ಕರ್, ತಾಯಿ ಮಿರಿಯಮ್. ಟ್ರಿನಿಟಿ ಕಾಲೇಜ್ ಡಬ್ಲಿನ್‌ನಿಂದ ವೈದ್ಯಕೀಯ ಪದವಿಯನ್ನು ಪಡೆದ ನಂತರ, ಅವರು ವೈದ್ಯಕೀಯ ಪ್ರಾಕ್ಟೀಸ್‌ ಮಾಡಿದರು. 2007 ರಲ್ಲಿ ಡಬ್ಲಿನ್ ವೆಸ್ಟ್‌ನಲ್ಲಿ ಫೈನ್ ಗೇಲ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು.
2015 ರಲ್ಲಿ, ಐರ್ಲೆಂಡ್‌ನ ಜನಾಭಿಪ್ರಾಯ ಸಂಗ್ರಹಣೆಯು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮೊದಲು, ವರದ್ಕರ್ ಸಾರ್ವಜನಿಕವಾಗಿ ಸಲಿಂಗಕಾಮಿ ಎಂದು ಘೋಷಿಸಿಕೊಂಡರು. ಅವರ ಸಲಿಂಗಿ ಪಾರ್ಟ್ನರ್‌ ಮ್ಯಾಥ್ಯೂ ಬ್ಯಾರೆಟ್ ಹೃದ್ರೋಗ ತಜ್ಞ.
ವರದ್ಕರ್ ಅವರ ಮೊದಲನೇ ಅಧಿಕಾರಾವಧಿಯು ಬ್ರೆಕ್ಸಿಟ್ ಮತ್ತು ಸಾಂಕ್ರಾಮಿಕ ರೋಗದ ಮಧ್ಯೆ ಮುಗಿದುಹೋಗಿತ್ತು.
ದೇಶವನ್ನು ಅದರ ಮೊದಲ ಲಾಕ್‌ಡೌನ್‌ಗೆ ಕರೆದೊಯ್ಯುವ ಪರಿಣಾಮಕಾರಿ ಸಂವಹನಕಾರ ಎಂದು ಅವರು ವ್ಯಾಪಕವಾಗಿ ನಿರ್ಣಯಿಸಲ್ಪಟ್ಟರು. ಅವರು ವೈದ್ಯರಾಗಿ ಪುನಃ ನೋಂದಾಯಿಸಿಕೊಂಡರು, ದೇಶವನ್ನು ಮುನ್ನಡೆಸುತ್ತಲೇ ವಾರಕ್ಕೊಮ್ಮೆ ಕೆಲಸಕ್ಕೆ ಮಾಡಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement