ನನ್ನ ಮರಣದ ನಂತರ ನನ್ನ ದೇಹವನ್ನು ಶಿಗ್ಗಾಂವಿ ಕ್ಷೇತ್ರದ ಮಣ್ಣಿನಲ್ಲೇ ಹೂಳಬೇಕು: ಸಿಎಂ ಬೊಮ್ಮಾಯಿ ಭಾವುಕ ಮಾತು

ಹಾವೇರಿ: ಯಾವ ಜನ್ಮದ ಋಣವೋ ನನಗೆ ಗೊತ್ತಿಲ್ಲ, ನಾನು ಬಂದಾಗ ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ನಾನು ಸತ್ತ ಮೇಲೆ ನನ್ನ ಅಂತ್ಯಕ್ರಿಯೆ ಇದೇ ಕ್ಷೇತ್ರದಲ್ಲಿ ಮಾಡಬೇಕು, ನನ್ನನ್ನು ಇದೇ ಮಣ್ಣಿನಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಮಾತನಾಡಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯ ಬಾಡ ಗ್ರಾಮದಲ್ಲಿ ನಡೆದ ಕಂದಾಯ ಸಚಿವ ಆರ್‌. ಅಶೋಕ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದ ಜನರ ಆಶೀರ್ವಾದಿಂದ ಇಂದು ನಾನು ಈ ಹುದ್ದೆಯಲ್ಲಿದ್ದೇನೆ. ಶಿಗ್ಗಾಂವಿ ಕ್ಷೇತ್ರದ ಜನ ನನ್ನನ್ನು ಮನೆ ಮಗನಂತೆ ನೋಡುತ್ತಾರೆ. ಇಲ್ಲಿಯ ಜನ ಕೊಟ್ಟ ರೊಟ್ಟಿ ಬುತ್ತಿಯನ್ನು ನಾನು ಎಂದಿಗೂ ಮರೆಯವುದಿಲ್ಲ. ನಾನು ಸತ್ತ ನಂತರ ನನ್ನ ಶರೀರವನ್ನು ಶಿಗ್ಗಾಂವಿ ಕ್ಷೇತ್ರದಲ್ಲಿಯೇ ಮಣ್ಣು ಮಾಡಬೇಕು ಎಂದು ಬೊಮ್ಮಾಯಿ ಭಾವುಕರಾಗಿ ಹೇಳಿದರು.
ಈಗಾಗಲೇ ಶಿಗ್ಗಾಂವಿ ಕ್ಷೇತ್ರದಲ್ಲಿ ಆಯುರ್ವೇದ ಕಾಲೇಜು, ಟೈಕ್ಸ್‌ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಮನೆ-ಮನೆಗೆ ಹೋಗಿ ಕಂದಾಯ ದಾಖಲೆ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್.ಅಶೋಕ್ ಗ್ರಾಮದ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಒಂದು ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ

ನಾನು ದಿನನಿತ್ಯ ಎರಡ್ಮೂರು ಕ್ಷೇತ್ರಗಳಿಗೆ ಹೋಗುತ್ತಿರುತ್ತೇನೆ. ಅಲ್ಲಿ ಜನ ಬಹಳ ಪ್ರೀತಿಯಿಂದ ಸ್ವಾಗತ ಕೋರುತ್ತಾರೆ. ಆಗ ನನಗೆ ನೀವೇ ನೆನಪಾಗುತ್ತೀರಿ. ಈ ಸ್ಥಾನ, ಗೌರವ ನನಗೆ ಸೇರಬೇಕಾದ್ದದಲ್ಲ, ಈ ಕ್ಷೇತ್ರದ ಜನರಾದ ನಿಮಗೆ ಸೇರಬೇಕು. ನಾನು ನಿಮ್ಮ ಋಣದಲ್ಲಿದ್ದೇನೆ. ನನ್ನ ಜೀವನದ ಕೊನೆಯ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುತ್ತೇನೆ.ನಾನು ದೂರ ಆಗಿಬಿಟ್ಟೆ ಎಂದು ನಿಮಗೆ ಅನ್ನಿಸಿರಬಹುದು. ಆದರೆ ನನ್ನ ಹೃದಯ ಇಲ್ಲೇ ಇರುತ್ತದೆ ಎಂದು ಬೊಮ್ಮಾಯಿ ಹೇಳುತ್ತ ಭಾವುಕರಾದರು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ತಾವೆಲ್ಲಾ ಸೇರಿದ್ದೀರಿ. ಎಲ್ಲಾ ಕಾರ್ಯಕ್ರಮಗಳ ಫಲಾನುಭವಿಗಳು ಇಂದು ಇಲ್ಲಿ ಬಂದಿದ್ದೀರಿ. ಎಲ್ಲಾ ಫಲಾನುಭವಿಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ಇಂದು 30 ಸಾವಿರ ಜನರಿಗೆ ಸರ್ಕಾರದ ಪರಿಹಾರದ ಹಣ, ಪ್ರಮಾಣ ಪತ್ರ ಕೊಡುತ್ತಿದ್ದೇವೆ. 6 ಸಾವಿರ ಮನೆಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದೇವೆ. ಒಂದೇ ದಿನ 30 ಸಾವಿರ ಜನರಿಗೆ ಕೊಡುತ್ತಿದ್ದೇವೆ. ಕನಕದಾಸರ ಮಹಿಮೆ ಪ್ರಾರಂಭವಾಗಿದ್ದೇ ಈ ಬಾಡ ಗ್ರಾಮದಲ್ಲಿ. ಇದು ಪರಿವರ್ತನೆಯ ಭೂಮಿ, ಪುಣ್ಯ ಭೂಮಿ. ಇಲ್ಲಿಂದ ಶಿಗ್ಗಾಂವಿಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂದು ಹಾರೈಸಿದರು.
ಡಿಸೆಂಬರ್ 31ರೊಳಗೆ ಮನೆ ಕಳೆದುಕೊಂಡ ಬಡವರಿಗೆ ನಾನೇ ಬಂದು ಧನಸಹಾಯ ಕೊಡುತ್ತೇನೆ. ಶಾಲೆಯ ಮಕ್ಕಳಿಗಾಗಿಯೇ ವಿಶೇಷ ಬಸ್ ಕೊಡುತ್ತೇವೆ. ನನ್ನ ಕ್ಷೇತ್ರದ ಪ್ರತಿ ಹಳ್ಳಿಯ ಹೊಲಗಳಿಗೆ ಹೋಗುವ ಎಲ್ಲಾ ರಸ್ತೆಗಳನ್ನು ನಿರ್ಮಿಸಲು ಆದೇಶ ಮಾಡುತ್ತೇನೆ. ನಮ್ಮ ಸರ್ಕಾರ ಒಂದೇ ವರ್ಷದಲ್ಲಿ 8 ಸಾವಿರ ಶಾಲೆಗಳನ್ನು ನಿರ್ಮಾಣ ಮಾಡುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನ ನಿರ್ಮಾಣ ಮಾಡುತ್ತಿದೆ. ಶಿಗ್ಗಾಂವಿಯಲ್ಲಿ 250 ಬೆಡ್‌ಗಳ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ. ಹಿಂದಿನ ಯಾವ ಸರ್ಕಾರಗಳೂ ಈ ಕೆಲಸ ಮಾಡಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement