ಬದುಕಿರುವಾಗಲೇ ಸಾವಿನ ದಿನ ಆಚರಣೆಯ ಆಮಂತ್ರಣ ಪತ್ರಿಕೆ…!. ಮಾಜಿ ಸಚಿವರ ಡೆತ್‌ ಡೇ ಆಮಂತ್ರಣ ಪತ್ರಿಕೆ ವೈರಲ್…!

ವಿಜಯವಾಡ : “ನನ್ನ ಸಾವಿನ ದಿನದ ಆಚರಣೆಗೆ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತೇನೆ.. ಇಷ್ಟು ವರ್ಷ ಆಚರಿಸಿಕೊಂಡು ಬಂದ ಜನ್ಮದಿನ ಅರ್ಥಹೀನವಾದ ಕಾರಣ ನನ್ನ ಸಾವಿನ ದಿನವನ್ನು ಆಚರಿಸಲು ಬಯಸುತ್ತೇನೆ.. ನನ್ನ ಸಾವಿನ ವರ್ಷವನ್ನು 2034 ಎಂದು ನಿರ್ಧರಿಸಿದ್ದೇನೆ.. ನನಗೆ ಸಾಯಲು ಇನ್ನೂ 12 ವರ್ಷಗಳಿವೆ. ಹೀಗಾಗಿ ಇಂದಿನಿಂದ 12ನೇ ಪುಣ್ಯತಿಥಿಯನ್ನು ಆಚರಿಸುತ್ತಿದ್ದೇನೆ. ಆದ್ದರಿಂದ ನೀವೆಲ್ಲರೂ ಬಂದು ನನ್ನನ್ನು ಆಶೀರ್ವದಿಸಿ” ಎಂದು ಮಾಜಿ ಸಚಿವ ಪಾಲೇಟಿ ರಾಮರಾವ್ ಅವರು ತಮ್ಮ ನಿಧನದ ದಿನದ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಅಭಿಮಾನಿಗಳಿಗೆ ಕಳುಹಿಸಿದ್ದಾರೆ. ಸದ್ಯ ಈ ವೈವಿಧ್ಯಮಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
2034ಕ್ಕೆ ನನ್ನ ಸಾವು ಖಚಿತ. ಬನ್ನಿ ಸಂಭ್ರಮಿಸೋಣ ಎಂದು ಆಂಧ್ರಪ್ರದೇಶದ ಮಾಜಿ ಸಚಿವ ಹಂಚಿರುವ ಆಹ್ವಾನ ಪತ್ರಿಕೆಗೆ ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ದೇವರು ಎಷ್ಟೇ ಕಲಿಸಿದರೂ ಮನುಷ್ಯರು ತಮ್ಮ ಜೀವನ ಕ್ರಮವನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಲಾರರು ಎಂದು ಮಾಜಿ ಸಚಿವ ಪಾಲೇಟಿ ರಾಮರಾವ್ ಅಭಿಪ್ರಾಯಪಟ್ಟಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

1959ರಲ್ಲಿ ಜನಿಸಿರುವ ಪಾಲೇಟಿ ರಾಮರಾವ್ ಅವರು ಎಷ್ಟು ದಿನ ಬದುಕಿದ್ದೇನೆ ಎಂಬುದನ್ನು ತಿಳಿದುಕೊಂಡು ಎಷ್ಟು ಸಮಯ ಉಳಿದಿದೆ ಎಂದು ಸಾವಿನ ದಿನದ ಲೆಕ್ಕ ಹಾಕಿದ್ದಾರೆ. ಅವರು ಇನ್ನೂ 12 ವರ್ಷ ಬದುಕುವ ನಿರೀಕ್ಷೆಯಿರುವುದರಿಂದ ಅವರು ಈಗ ತಮ್ಮ 12 ನೇ ಪುಣ್ಯತಿಥಿಯನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಆಗಮಿಸಿ ಆಶೀರ್ವದಿಸಬೇಕೆಂದು ಕೋರಿದ್ದಾರೆ. 75 ವರ್ಷ ಬದುಕಬೇಕು ಅಂದುಕೊಂಡಿರುವ ಅವರು ಈಗ 63 ವರ್ಷ ಪೂರೈಸಿದ್ದಾರೆ. ಪಾಲೇಟಿ ರಾಮರಾವ್ ಅವರು ಇನ್ನೂ 12 ವರ್ಷ ಬದುಕಬೇಕಿರುವ ಕಾರಣ ಈಗ 12ನೇ ಪುಣ್ಯತಿಥಿ ಆಚರಿಸಲು ವ್ಯವಸ್ಥೆ ಮಾಡಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಚಿರಾಳ ಐಎಂಎ ಸಭಾಂಗಣದಲ್ಲಿ ನಡೆಯುವ ಸಮಾರಂಭಕ್ಕೆ ಅಭಿಮಾನಿಗಳು ಆಗಮಿಸುವಂತೆ ಪಾಲೇಟಿ ರಾಮರಾವ್ ವಿನಂತಿಸಿದ್ದಾರೆ.
ಆಂಧ್ರದಲ್ಲಿ ಹಿಂದಿನ ಟಿಡಿಪಿ ಸರ್ಕಾರದಲ್ಲಿ ಸಚಿವರಾಗಿದ್ದ ಪಲೇಟಿ ರಾಮರಾವ್ ಅವರು ಈ ರೀತಿ ಡೆತ್ ಡೇ (ಸಾವಿನ ದಿನ) ಆಚರಿಸಲು ಆಮಂತ್ರಣ ಪತ್ರಿಕೆ ಮುದ್ರಿಸಿ ಹಂಚಿಕೆ ಮಾಡಿ ಸುದ್ದಿಯಲ್ಲಿದ್ದಾರೆ. ಎರಡು ಬಾರಿ ಶಾಸಕರಾಗಿ ಬಳಿಕ ಸಚಿವರಾಗಿದ್ದ 63 ವರ್ಷದ ರಾಮರಾವ್ ಅವರು 2034ಕ್ಕೆ ನನ್ನ ಸಾವು ಖಚಿತ. ನಾನು ನಿಧನವಾಗುವುದಕ್ಕೆ ಇನ್ನೂ 12 ವರ್ಷ ಇರುವುದರಿಂದ ಜನ್ಮದಿನ ಆಚರಿಸಿದಂತೆ ಸಾವಿನ ದಿನವನ್ನೂ ಪ್ರತಿ ವರ್ಷ ಸಂಭ್ರಮಿಸಬೇಕು ಎಂಬುದಕ್ಕೆ ಈ ಆಹ್ವಾನ ನೀಡಿದ್ದೇನೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ನಳಂದಾದಲ್ಲಿ 1200 ವರ್ಷಗಳಷ್ಟು ಪುರಾತನವಾದ ಎರಡು ವಿಗ್ರಹಗಳು ಪತ್ತೆ

ಆಹ್ವಾನ ಪತ್ರಿಕೆಯಲ್ಲೇನಿದೆ?
ಇದುವರೆಗೆ ಜನ್ಮದಿನ ಆಚರಿಸಿಕೊಂಡಿದ್ದೇನೆ. ಆದರೆ ಅದಕ್ಕೆ ಅರ್ಥವಿಲ್ಲ. 2034ಕ್ಕೆ ನಾನು ಸಾಯಲಿದ್ದೇನೆ. ಇನ್ನು ಮುಂದೆ ನಾನು ಡೆತ್ ಡೇ (ಸಾವಿನ ದಿನ) ಆಚರಿಸಿಕೊಳ್ಳುತ್ತೇನೆ. ನಿಮ್ಮೆಲ್ಲರನ್ನೂ ನಾನು ನನ್ನ ಸಾವಿನ ದಿನದ ಸಂಭ್ರಮಕ್ಕಾಗಿ ಆಹ್ವಾನಿಸುತ್ತೇನೆ. ನಾನು ಸಾಯಲು ಇನ್ನೂ 12 ವರ್ಷ ಸಮಯವಿದ್ದು, ಅಲ್ಲಿವರೆಗೆ ಪ್ರತಿ ವರ್ಷ ಈ ಸಂಭ್ರಮ ನಡೆಯುತ್ತದೆ. ನೀವೆಲ್ಲರೂ ನನ್ನ ಡೆತ್ ಡೇ ಆಚರಣೆಗೆ ಬಂದು ನನ್ನನ್ನು ಆಶೀರ್ವದಿಸಬೇಕು ಎಂದು ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಸದ್ಯ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಸಚಿವರ ವಿಚಿತ್ರ ವರ್ತನೆಗೆ ಜನರು ಬೆಚ್ಚಿಬಿದ್ದಿದ್ದಾರೆ.
ದೇವರು ಮನುಷ್ಯನಿಗೆ ಎಷ್ಟೇ ಕಲಿಸಿದರೂ ಮಾನವ ಬುದ್ಧಿ ಕಲಿತುಕೊಳ್ಳುತ್ತಿಲ್ಲ. ಜನ್ಮತಾಳಿದ ಪ್ರತಿ ಜೀವಿಯೂ ಒಂದಲ್ಲ ಒಂದು ದಿನ ಸಾಯಬೇಕೆಂದು ಭಗವಂತ ಹೇಳಿದ್ದಾನೆ. ಯಾರಿಗೂ ಕೆಟ್ಟದ್ದನ್ನು ಬಯಸಬಾರದು, ಪರೋಪಕಾರಿಯಾಗಿರಬೇಕು ಎಂದು ದೇವರು ಹೇಳಿದ್ದಾನೆ. ಮನುಷ್ಯ ತನ್ನ ಜೀವಿತಾವಧಿ ಮತ್ತು ಮರಣದ ದಿನಾಂಕ ತಿಳಿಯಲು ಬಯಸುತ್ತಾನೆ. ತನ್ನ ಜೀವಿತಾವಧಿ ಎಷ್ಟೆಂದು ಅರಿವಾದ ನಂತರ ಆತ ಜೀವಿಯ ಹಂತದಿಂದ ಮಾನವನಾಗಲು ಬಯಸುತ್ತಾನೆ. ಈ ಸಿದ್ಧಾಂತ ಕಾರ್ಯಗತಗೊಳಿಸುವ ಮೊದಲ ಪ್ರಯತ್ನವಾಗಿ ನಾನು ಎಷ್ಟು ದಿನ ಬದುಕಬೇಕೆಂದು ಯೋಚಿಸಿ, 2034ಕ್ಕೆ ಬದುಕು ಸಾಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.
ಮಾಜಿ ಶಾಸಕ ಪಾಲೇಟಿ ರಾಮರಾವ್ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದರು. 1994 ಮತ್ತು 1999 ರಲ್ಲಿ, ಅವರು ಟಿಡಿಪಿ ಪರವಾಗಿ ಚಿರಾಲದಿಂದ ಎರಡು ಬಾರಿ ಗೆದ್ದರು ಮತ್ತು ಎನ್‌ಟಿಆರ್ ಅವರ ಸಂಪುಟದಲ್ಲಿ ಸಚಿವ ಸ್ಥಾನವನ್ನು ಪಡೆದರು. 1994ರಲ್ಲಿ ಕೊನಿಜೇಟಿ ರೋಸಯ್ಯ ಅವರನ್ನು ಸೋಲಿಸಿ ಎನ್‌ಟಿಆರ್‌ ಸಂಪುಟದಲ್ಲಿ ಸ್ಥಾನ ಪಡೆದರು. 2004 ರಲ್ಲಿ, ಅವರು ರೋಸಯ್ಯ ವಿರುದ್ಧ ಸೋತರು ಮತ್ತು 2009 ರಲ್ಲಿ ಪ್ರಜಾರಾಜ್ಯಂ ಪಕ್ಷಕ್ಕೆ ಸೇರಿದರು, ನಂತರ ಅವರು ವೈಸಿಪಿಗೆ ಸೇರಿ 2019 ರ ಚುನಾವಣೆಗೆ ಮೊದಲು ಟಿಡಿಪಿಗೆ ಸೇರಿದರು. ಕೆಲ ಸಮಯದ ನಂತರ ವೈಸಿಪಿ ವೈಸಿಪಿ ಮತ್ತೆ ಸೇರಿದರು.

ಇಂದಿನ ಪ್ರಮುಖ ಸುದ್ದಿ :-   ದೆಹಲಿ ಗುರುಗ್ರಾಮದಲ್ಲಿ ಬೈಕನ್ನು 4 ಕಿಮೀ ಎಳೆದೊಯ್ದ ಕಾರು; ಎಳೆದೊಯ್ಯುವಾಗ ರಸ್ತೆಯಲ್ಲಿ ಬೆಂಕಿ ಕಿಡಿ ಹಾರುವ ವೀಡಿಯೊ ವೈರಲ್ | ವೀಕ್ಷಿಸಿ

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement