ಚಂದ್ರಬಾಬು ನಾಯ್ಡು ರೋಡ್‌ ಶೋ ವೇಳೆ ನೂಕಾಟದಲ್ಲಿ ಕನಿಷ್ಠ 8 ಮಂದಿ ಸಾವು, ಹಲವರಿಗೆ ಗಾಯ

ನೆಲ್ಲೂರು: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ರೋಡ್‌ಶೋ ವೇಳೆ ಓರ್ವ ಮಹಿಳೆ ಸೇರಿ ಎಂಟು ಜನರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ.
ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಚಂದ್ರಬಾಬು ನಾಯ್ಡು ಅವರು ತಮ್ಮ “ಇದೇಮಿ ಖರ್ಮ ಮನ ರಾಷ್ಟ್ರಿಕಿ ಅಭಿಯಾನದ ಭಾಗವಾಗಿ ಕಂದುಕೂರು ಪಟ್ಟಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ನಾಯ್ಡು ಅವರ ಬೆಂಗಾವಲು ಪಡೆ ಸಂಜೆ ಪ್ರದೇಶವನ್ನು ತಲುಪುವಾಗ ವಿಪರೀತ ನೂಕುನುಗ್ಗಲು ಪ್ರಾರಂಭವಾಯಿತು. ನೆರೆದಿದ್ದ ಅಪಾರ ಜನಸ್ತೋಮ ನಾಯಕನ ದರ್ಶನಕ್ಕೆ ಮುಂದಾದರು. ಈ ನೂಕು ನುಗ್ಗಲಿನಲ್ಲಿ ಅನೇಕರು ತೆರೆದ ಒಳಚರಂಡಿ ಕಾಲುವೆಯಲ್ಲಿ ಬಿದ್ದರು, ಅವರಲ್ಲಿ ಎಂಟು ಜನರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದರು. ಗಾಯಗೊಂಡ ಕೆಲವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾರೀ ನೂಕಾಟದಿಂದ ಸಾಕಷ್ಟು ಮಂದಿ ಚರಂಡಿಗೆ ಬಿದ್ದು ಪ್ರಾಣಹಾನಿ ಸಂಭವಿಸಿದೆ. ಘಟನೆಯ ನಂತರ ನಾಯ್ಡು ಅವರು ತಮ್ಮ ಭಾಷಣವನ್ನು ನಿಲ್ಲಿಸಿದರು ಮತ್ತು ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿದರು.
ಮೃತಪಟ್ಟ 8 ಮಂದಿಯಲ್ಲಿ ಆರು ಮಂದಿಯನ್ನು ಡಿ ರವೀಂದ್ರಬಾಬು, ಕೆ ಯಾನಾಡಿ, ವೈ ವಿಜಯಾ, ಕೆ ರಾಜಾ, ಎಂ ಚಿನಕೊಂಡಯ್ಯ ಮತ್ತು ಪುರುಷೋತ್ತಮ್ ಎಂದು ಗುರುತಿಸಲಾಗಿದೆ.

ಪ್ರಮುಖ ಸುದ್ದಿ :-   1 ಕೋಟಿ ಕುಟುಂಬಗಳಿಗೆ ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವ ಸೌರ ಯೋಜನೆಗೆ ಕೇಂದ್ರ ಸರ್ಕಾರದ ಒಪ್ಪಿಗೆ : ಏನಿದು ಯೋಜನೆ..?

ಸಭೆಯನ್ನು ತಕ್ಷಣವೇ ರದ್ದುಪಡಿಸಿದ ನಾಯ್ಡು, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ₹ 10 ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲ ನೀಡುವುದಾಗಿ ಹೇಳಿದ ಅವರು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ನೆರವು ನೀಡುವಂತೆ ಪಕ್ಷದ ಮುಖಂಡರನ್ನು ಕೋರಿದರು. ಅವರ ಪುತ್ರ ಹಾಗೂ ಟಿಡಿಪಿ ಮುಖಂಡ ನಾರಾ ಲೋಕೇಶ್ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. “ನಮ್ಮ ಕುಟುಂಬದ ಸದಸ್ಯರಾದ ಟಿಡಿಪಿ ಕಾರ್ಯಕರ್ತರ ಸಾವು ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬಗಳಿಗೆ ನನ್ನ ತೀವ್ರವಾದ ಸಂತಾಪಗಳು. ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ತೆಲುಗು ದೇಶಂ ಪಕ್ಷದ ಮುಖ್ಯಸ್ಥರು ರಾಜ್ಯಾದ್ಯಂತ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ, 2024 ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
2019 ರಲ್ಲಿ ಜಗನ್ ಮೋಹನ್ ರೆಡ್ಡಿಯವರ ವೈಎಸ್‌ಆರ್ ಕಾಂಗ್ರೆಸ್‌ನಿಂದ ಸೋಲಿಸಲ್ಪಟ್ಟ ಪಕ್ಷವು ನಾಯ್ಡು ಅವರ ಮಹಾನಾಡು ವಾರ್ಷಿಕ ಪಕ್ಷದ ಸಮಾವೇಶದ ಭಾರೀ ಯಶಸ್ಸಿನೊಂದಿಗೆ ಪುನರುತ್ಥಾನವನ್ನು ಎದುರು ನೋಡುತ್ತಿದೆ.
ಜನವರಿಯಲ್ಲಿ, ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು 4,000 ಕಿಮೀ ಪಾದಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ, ಅದು ಯುವ ವೇದಿಕೆಯಾಗುವ ಸಾಧ್ಯತೆಯಿದೆ. “ಯುವ ಗಲಮ್” ಎಂಬ ಶೀರ್ಷಿಕೆಯು ರಾಜ್ಯದ ಯುವಜನರು ತಮ್ಮ ಧ್ವನಿ ಎತ್ತಲು ಮತ್ತು ಹಕ್ಕಿಗಾಗಿ ಹೋರಾಡಲು ಉತ್ತೇಜಿಸುತ್ತದೆ.
“ಕ್ವಿಟ್ ಜಗನ್, ಸೇವ್ ಎಪಿ” ಘೋಷಣೆಯನ್ನು ರೂಪಿಸಿದ ನಾಯ್ಡು, ಜನರು ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರದಿದ್ದರೆ 2024 ರ ಚುನಾವಣೆ ತನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಾಂಗ್ಲಾದೇಶ : ಬಹುಮಹಡಿ ಕಟ್ಟದಲ್ಲಿ ಅಗ್ನಿ ಅನಾಹುತ ; 43 ಮಂದಿ ಸಾವು, ಅನೇಕರಿಗೆ ಗಾಯ

2.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement