ಅಂಕೋಲಾ: ಹೊಸವರ್ಷದ ಮೊದಲ ದಿನವೇ ಭೀಕರ ಅಪಘಾತ, ನಾಲ್ವರು ಸಾವು

ಅಂಕೋಲಾ: ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವಿಗೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಹೊರವಲಯದ ಬಾಳೆಗುಳಿ ಕ್ರಾಸ್‌ ಸಮೀಪದ ವರದರಾಜ ಹೊಟೇಲ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು  ಮೃತಪಟ್ಟವರು ತಮಿಳುನಾಡು ಮೂಲದವರು. ಮೃತರನ್ನು ಅರುಣ ಪಾಂಡ್ಯನ್, ನಿಫುಲ್, ಶ್ರೇಕರನ್, ಮಹ್ಮದ್ ಬಿಲ್ಲಾಲ್ ಎಂದು ಗುರುತಿಸಲಾಗಿದೆ. ಹೊಸ ವರ್ಷಾಚರಣೆ ಮುಗಿಸಿ ಗೋವಾದಿಂದ (Goa) ಕಾರಿನಲ್ಲಿ ಐವರು ವಾಪಸ್ಸಾಗುತ್ತಿದ್ದರು. ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡಿದೆ ಎಂದು ಹೇಳಲಾಗಿದೆ.ಕಾರವಾರ ಕಡೆಯಿಂದ ಅಂಕೋಲಾ ಕಡೆಗೆ ಕಾರು ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದೆ. ಕಾರು ರಸ್ತೆ ಡಿವೈಡರ್ ದಾಟಿ ಅಂಕೋಲಾ ಕಡೆಯಿಂದ ನವಲಗುಂದಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ಬಸ್ಸಿಗೆ ಜೋರಾಗಿ ಗುದ್ದಿದೆ ಎನ್ನಲಾಗಿದೆ. ಗುದಿದ್ದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು,  ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡು ಮೂಲದ ಇವರು ಗೋವಾದಲ್ಲಿ ನ್ಯೂ ಇಯರ್‌ ಪಾರ್ಟಿ ಮುಗಿಸಿ ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.. ನುಜ್ಜುಗುಜ್ಜಾದ ಕಾರಿನಲ್ಲಿ ಸಿಲುಕಿಕೊಂಡಿದ್ದ ಕೆಲವರನ್ನು ಪೊಲೀಸರು ಕಬ್ಬಿಣದ ಸಲಾಕೆ ಬಳಸಿ ಕಾರಿನ ಬಾಗಿಲು ಒಡೆದು ಹೊರ ತೆಗೆದಿದ್ದಾರೆ ಎಂದು ಹೇಳಲಾಗಿದೆ. ಮೃತರ ವಿವರಗಳು ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆ ಪೋಲೀಸ್ ಇಲಾಖೆ ಸಿಬ್ಬಂದಿ, ಐಆರ್‌ಬಿ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಲ್ಲಿ ಮೃತದೇಹಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement