ಭೀಕರ ಅಪಘಾತ: ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳುತ್ತಿದ್ದ ಆರು ಭಕ್ತರ ದುರ್ಮರಣ

ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ವಾಹನ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಭಕ್ತರು ಮೃತ ಪಟ್ಟಿದ್ದಾರೆ.
ಚಿಂಚನೂರು ವಿಠ್ಠಲ ದೇವಸ್ಥಾನದ ಹತ್ತಿರ ಈ ಅಪಘಾತ ಸಂಭವಿಸಿದೆ. ಮಹೀಂದ್ರಾ ವಾಹನ ಆಲದ ಮರಕ್ಕೆ ಗದಿದ್ದ ರಭಸಕ್ಕೆ ಇವರು ಮೃತಪಟ್ಟಿದ್ದಾರೆ.
ರಾಮದುರ್ಗ ತಾಲೂಕಿನ ಹುಲಕುಂದ ನಿವಾಸಿಗಳು ಮೃತಪಟ್ಟಿದ್ದು ಮಧ್ಯರಾತ್ರಿ ಸವದತ್ತಿಯ ಯಲ್ಲಮ್ಮ ಗುಡ್ಡಕ್ಕೆ ತೆರಳುತ್ತಿದ್ದರು. ಮೃತರನ್ನು ಹನುಮವ್ವ ನಾಕಾಡಿ (25) , ದೀಪಾ (32), ಸವಿತಾ (17 ), ಸುಪ್ರೀತಾ (11), ಮಾರುತಿ (42), ಇಂದಿರವ್ವ (24) ಎಂದು ಗುರುತಿಸಲಾಗಿದೆ. ಕಟಕೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದುಕೊಂಡು ಹೋಗುತ್ತಿದ್ದವರಿಗೆ ಯಮನಂತೆ ಎದುರಾದ ವಾಹನ
ಮೃತ ಯಾತ್ರಾರ್ಥಿಗಳು ನಡೆದುಕೊಂಡು ಯಲ್ಲಮ್ಮ ದೇವಸ್ಥಾನಕ್ಕೆ ಹೊರಟ್ಟಿದ್ದರು. ಈ ವೇಳೆ ಪಾದಯಾತ್ರೆ ಹೊರಟವರನ್ನ ನಿಲ್ಲಿಸಿ ಬೊಲೆರೊ ವಾಹನದ ಚಾಲಕ ಡ್ರಾಪ್ ಕೊಡುವುದಾಗಿ ಹೇಳಿ ವಾಹನ ಹತ್ತಿಸಿಕೊಂಡಿದ್ದಾನೆ. ವಾಹನ ಹತ್ತಿದ ಕೆಲವೇ ನಿಮಿಷಗಳಲ್ಲಿ ರಸ್ತೆ ಅಪಘಾತವಾಗಿ ಆರು ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ತಲಾ ಐದು ಲಕ್ಷ ಪರಿಹಾರ ಘೋಷಣೆ ..
ಅಪಘಾತದಲ್ಲಿ ಮೃತಪಟ್ಟ ಆರು ಜನರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರಧನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಮಹೀಂದ್ರ ವಾಹನದಲ್ಲಿ ಹೋಗುತ್ತಿದ್ದ ಆರು ಜನ ಪಟ್ಟಿದ್ದಾರೆ. ಇವರ ಕುಟುಂಬಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement