ಟಿಆರ್​​ಎಫ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪಾಕಿಸ್ತಾನ ಮೂಲದ ಟಿಆರ್​​ಎಫ್ (The Resistance Front) ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಮಾತ್ರವಲ್ಲದೆ, ಈ ಸಂಘಟನೆಯ ಕಮಾಂಡರ್ ಶೇಖ್ ಸಜ್ಜದ್ ಗುಲ್‌ನನ್ನು ಭಯೋತ್ಪಾದಕನೆಂದು ಕೇಂದ್ರ ಗೃಹ ಇಲಾಖೆ ಘೋಷಿಸಿದೆ.
ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ನೆರಳು ಸಂಘಟನೆ(shadow organisation)ಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಕಾಶ್ಮೀರದಲ್ಲಿ ಪತ್ರಕರ್ತರಿಗೆ ಬೆದರಿಕೆ ಹಾಕಿದ ಮೂರು ತಿಂಗಳ ನಂತರ, ಗೃಹ ಸಚಿವಾಲಯವು ಗುರುವಾರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, ಭಯೋತ್ಪಾದಕ ಚಟುವಟಿಕೆಗಳು, ಭಯೋತ್ಪಾದಕರ ನೇಮಕಾತಿ, ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ಕಾಯಿದೆ ಅಡಿಯಲ್ಲಿ ಅದನ್ನು “ಭಯೋತ್ಪಾದಕ ಸಂಘಟನೆ” ಎಂದು ಘೋಷಿಸಿದೆ.
ಕೇಂದ್ರ ಗೃಹ ಸಚಿವಾಲಯ (MHA) ಹೊರಡಿಸಿದ ಅಧಿಸೂಚನೆಯ ಪ್ರಕಾರ, ಟಿಆರ್‌ಎಫ್‌ (TRF) 2019 ರಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್‌ಇಟಿ (LeT)ಯ ಪ್ರಾಕ್ಸಿ ಭಯೋತ್ಪಾದಕ ಸಂಘಟನೆಯಾಗಿ ಅಸ್ತಿತ್ವಕ್ಕೆ ಬಂದಿತು. “ಟಿಆರ್‌ಎಫ್‌ ಭಯೋತ್ಪಾದಕ ಚಟುವಟಿಕೆಗಳ ಮುಂದುವರಿಕೆಗಾಗಿ ಆನ್‌ಲೈನ್ ಮಾಧ್ಯಮದ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿದೆ ಮತ್ತು ಭಯೋತ್ಪಾದಕ ಚಟುವಟಿಕೆಗಳು, ಭಯೋತ್ಪಾದಕರ ನೇಮಕಾತಿ, ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಪಾಕಿಸ್ತಾನದಿಂದ J&K ಗೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದೆ. ಭಾರತದ ವಿರುದ್ಧ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ಜೆ & ಕೆ ಜನರನ್ನು ಪ್ರಚೋದಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟಿಆರ್‌ಎಫ್‌ (TRF) ಮಾನಸಿಕ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

ಎಲ್‌ಇಟಿಗೆ ಪಾಕಿಸ್ತಾನ ನೀಡಿದ ಹೊಸ ಹೆಸರು ಟಿಆರ್‌ಎಫ್ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಲಷ್ಕರ್ ಮತ್ತು ಜೈಶ್-ಎ-ಮೊಹಮ್ಮದ್ ಧಾರ್ಮಿಕ ಅರ್ಥಗಳನ್ನು ಹೊಂದಿದ್ದವು ಮತ್ತು ಪಾಕಿಸ್ತಾನವು ಅದನ್ನು ಬಯಸಲಿಲ್ಲ. ಅವರು ಕಾಶ್ಮೀರ ಉಗ್ರಗಾಮಿತ್ವವನ್ನು ಸ್ಥಳೀಯವಾಗಿ ತೋರಿಸಲು ಬಯಸಿದ್ದರು. ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗೃಹ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಟಿಆರ್‌ಎಫ್ ಕಮಾಂಡರ್ ಶೇಖ್ ಸಜ್ಜದ್ ಗುಲ್ ಅವರನ್ನು ಯುಎಪಿಎಯ ನಾಲ್ಕನೇ ಶೆಡ್ಯೂಲ್ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ.
“ಟಿಆರ್‌ಎಫ್‌ನ ಚಟುವಟಿಕೆಗಳು ಭಾರತದ ಭದ್ರತೆ ಮತ್ತು ಸಾರ್ವಭೌಮತೆಗೆ ಹಾನಿಕಾರಕವಾಗಿದೆ. J&K ನ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರನ್ನು ಕೊಲ್ಲುವ ಯೋಜನೆ, ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸಲು ಶಸ್ತ್ರಾಸ್ತ್ರಗಳನ್ನು ಸಮನ್ವಯಗೊಳಿಸುವುದು ಮತ್ತು ಸಾಗಿಸುವ ಯೋಜನೆಗೆ ಸಂಬಂಧಿಸಿದಂತೆ ಟಿಆರ್‌ಎಫ್‌ನ ಸದಸ್ಯರು/ಸಹವರ್ತಿಗಳ ವಿರುದ್ಧ ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಲಾಗಿದೆ…” ಎಂದು ಎಂಎಚ್‌ಎ ಹೇಳಿದೆ.
ಈ ಭಯೋತ್ಪಾದಕ ಗುಂಪು ಕಣಿವೆಯ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಅವರ ಬೆದರಿಕೆಗಳನ್ನು ಹಾಕಿತ್ತು.
ಟಿಆರ್‌ಎಫ್‌ (TRF) ಕರಾಚಿಯಿಂದ ಸಾಮಾಜಿಕ ಮಾಧ್ಯಮ ಕಾರ್ಯಾಚರಣೆಯಾಗಿ ಪ್ರಾರಂಭವಾಯಿತು, ಸಂಘಟನೆ ಆನ್‌ಲೈನ್‌ನಲ್ಲಿ ಗಣನೀಯ ಉಪಸ್ಥಿತಿ ಪಡೆದಾಗ, ವರ್ಚುವಲ್ ಘಟಕವು ಭೌತಿಕ ಘಟಕವಾಗಿ ರೂಪಾಂತರಗೊಂಡಿತು ಎಂದು ಹೇಳಲಾಗಿದೆ. ಅದು ಮೊದಲು ಕೆರಾನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿತು ಮತ್ತು ತೆಹ್ರೀಕ್-ಎ-ಮಿಲ್ಲತ್ ಇಸ್ಲಾಮಿಯಾ ಮತ್ತು ಘಜ್ನವಿ ಹಿಂದ್‌ನಂತಹ ಸಂಘಟನೆಗಳು ಟಿಆರ್‌ಎಫ್ ಛತ್ರಿಯಡಿಯಲ್ಲಿ ನಡೆಯುತ್ತಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement