ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ನುಂಗಿ ಹಾಕಿದ ಹಿಂಸಾತ್ಮಕ ಸುಂಟರಗಾಳಿ…ಕ್ಷಣಾರ್ಧದಲ್ಲಿ ಕಾರು ಕಣ್ಮರೆ | ವೀಕ್ಷಿಸಿ

ರಸ್ತೆಯಲ್ಲಿ, ವಾಹನ ಚಾಲನೆ ಮಾಡುವಾಗ, ನಾವು ಕೆಲವು ವಿಚಿತ್ರವಾದ, ವಿಲಕ್ಷಣವಾದ ಅಥವಾ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುತ್ತೇವೆ ವಾಹನ ಅಪಘಾತವಾಗಿರಬಹುದು, ಪಾದಚಾರಿಗಳನ್ನು ಒಳಗೊಂಡ ಯಾವುದೇ ಅಪಘಾತವಾಗಿರಬಹುದು ಅಥವಾ ಸ್ವಲ್ಪದರಲ್ಲೇ ಅಪಅಯದಿಂದ ಪಾರಾಗಿರುವ ಘಟನೆಯಾಗಿರಬಹುದು, ಕೆಲವೊಮ್ಮೆ ಅದು ಹವಾಮಾನವಾಗಿರಬಹುದು. ಹಾಗೂಭಾರೀ ಮಳೆ, ಧೂಳಿನ ಬಿರುಗಾಳಿಗಳು, ಮಿಂಚು, ಅಥವಾ ಮೇಘಸ್ಫೋಟ. ಪ್ರಪಂಚದ ಹಲವಾರು ಭಾಗಗಳು ನಿರ್ದಿಷ್ಟ ಪ್ರದೇಶಕ್ಕೆ ಸಹಜವಾದ ಹವಾಮಾನ … Continued

ಉಪಗ್ರಹ ಸಮೀಕ್ಷೆಯ ನಂತರ ʼಮುಳುಗುತ್ತಿರುವʼ ಜೋಶಿಮಠದಿಂದ 4,000 ಜನರ ಸ್ಥಳಾಂತರ

ನವದೆಹಲಿ: ಉಪಗ್ರಹಗಳ ಮೂಲಕ ಸಮೀಕ್ಷೆ ನಡೆಸಿದ ನಂತರ ಉತ್ತರಾಖಂಡದ ಜೋಶಿಮಠದ “ಮುಳುಗುತ್ತಿರುವ” ಪಟ್ಟಣದಲ್ಲಿ ಆರು ನೂರು ಮನೆಗಳನ್ನು ಸ್ಥಳಾಂತರಿಸಲಾಗಿದೆ. “ಸದ್ಯದಂತೆ, 600 ಮನೆಗಳನ್ನು ಸ್ಥಳಾಂತರಿಸಲಾಗಿದೆ ಎಂದು ನಮಗೆ ತಿಳಿದಿದೆ ಮತ್ತು ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ಗೃಹ ಸಚಿವಾಲಯದ ಹಿರಿಯ ಕಾರ್ಯಕಾರಿಯೊಬ್ಬರು ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ. ಸೇನೆ ಮತ್ತು … Continued

5 ವರ್ಷಗಳಿಂದ ನಮ್ಮ ಕಂಪನಿಯ ಯಾವುದೇ ಉದ್ಯೋಗಿಯೂ ಕಂಪನಿ ತೊರೆದಿಲ್ಲ ಎಂದು ಹೇಳಿದ ಈ ಕಂಪನಿ ಸಿಇಒ..!

ಸಾಮೂಹಿಕ ವಜಾಗಳು ಮತ್ತು ರಾಜೀನಾಮೆಗಳು ಸಾಮಾನ್ಯವಾಗಿರುವ ಈ ಸಮಯದಲ್ಲಿ, ನ್ಯೂಯಾರ್ಕ್ ಮೂಲದ AiDigital ನ ಸಹ-ಸಂಸ್ಥಾಪಕ ಮತ್ತು ಸಿಇಒ (CEO) ಸ್ಟೀಫನ್ ಮ್ಯಾಗ್ಲಿ ಅವರು ಕಳೆದ 5 ವರ್ಷಗಳಲ್ಲಿ ಯಾವುದೇ ಉದ್ಯೋಗಿ ತಮ್ಮ ಜಾಹೀರಾತು ಕಂಪನಿಯನ್ನು ತೊರೆದಿಲ್ಲ ಎಂದು ಹೇಳಿದ್ದಾರೆ. ಸ್ಟೀಫನ್ ಮ್ಯಾಗ್ಲಿ ಅವರು ತಮ್ಮ ಜಾಹೀರಾತು ಕಂಪನಿಯಲ್ಲಿ ಆರೋಗ್ಯಕರ ಕೆಲಸದ ಸಂಸ್ಕೃತಿಯನ್ನು ನಿರ್ಮಿಸುವತ್ತ ಗಮನಹರಿಸಿರುವುದಾಗಿ … Continued

ಸಾಗರ: ಬಜರಂಗದಳ ಸಂಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಯತ್ನ, ಸ್ವಲ್ಪದರಲ್ಲೇ ಅಪಾಯದಿಂದ ಪಾರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ್ದು, ಆದರೆ, ಯತ್ನ ವಿಫಲವಾಗಿದೆ. ಹಿಂದೂ ಕಾರ್ಯಕರ್ತ ಸ್ವಲ್ಪದರಲ್ಲೇ ಬಚಾವಾಗಿದ್ದಾನೆ. ಬಜರಂಗದಳ ಸಾಗರ ನಗರ ಸಹ ಸಂಚಾಲಕ ಸುನೀಲ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ಈ ಹತ್ಯೆಯ ನಡೆದಿದೆ. ಭಾನುವಾರ ಶಿವಮೊಗ್ಗದಲ್ಲಿ ನಡೆದಿದ್ದ ಶೋಭಾ ಯಾತ್ರೆಯಲ್ಲಿ ಸುನೀಲ ಭಾಗವಹಿಸಿದ್ದ. ಅದರ ಮರುದಿನವೇ ಅವರ ಮೇಲೆ ದಾಳಿ ನಡೆದಿದೆ … Continued

ಕೋಲಾರದಿಂದ ಸ್ಪರ್ಧಿಸುತ್ತೇನೆ : ಸಿದ್ದರಾಮಯ್ಯ ಘೋಷಣೆ

ಕೋಲಾರ: ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ನಾನು ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸೋಮವಾರ ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಯಾವುದೇ ಕ್ಷೇತ್ರ ಇಲ್ಲ, ಇನ್ನು ಕೂಡಾ ಕ್ಷೇತ್ರಕ್ಕಾಗಿ ಹುಡುಕಾಟ ಮಾಡುತ್ತಿರುವುದಾಗಿ ಹೇಳಿ ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ನನಗೆ ವರುಣಾ ಕ್ಷೇತ್ರದಲ್ಲಿ ಬೇಡಿಕೆ ಇದ್ದರೂ ಕೋಲಾರದಲ್ಲಿ ಶಾಸಕ ಶ್ರೀನಿವಾಸ್ … Continued

ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಕೋರ್ಟ್

ಬೆಂಗಳೂರು: ಸಿದ್ದು ನಿಜ ಕನಸುಗಳು” ಪುಸ್ತಕ ಬಿಡುಗಡೆಗೆ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ. ” ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು (Siddaramaiah) ಗುರಿಯಾಗಿಸಿಕೊಂಡು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಲು ಬಿಜೆಪಿ ಮುಂದಾಗಿತ್ತು. ಆದರೆ ಬಿಜೆಪಿಯ ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆಗೆ ಬೆಂಗಳೂರಿನ 60ನೇ ಸಿಸಿಹೆಚ್​ … Continued

ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್ ಬಂಧನ ಕಾನೂನಿಗೆ ಅನುಗುಣವಾಗಿಲ್ಲ: ಹೈಕೋರ್ಟ್

ನವದೆಹಲಿ: ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಕಳೆದ ತಿಂಗಳು ಬಂಧಿಸಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯವು ಇಂದು, ಸೋಮವಾರ ಹೇಳಿದ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಚಂದಾ ಕೊಚ್ಚರ್ ಖಾಸಗಿ ವಲಯದ ಬ್ಯಾಂಕ್‌ನ ಮುಖ್ಯಸ್ಥರಾಗಿದ್ದಾಗ ವಿಡಿಯೋಕಾನ್ ಗ್ರೂಪ್‌ಗೆ ನೀಡಲಾದ ₹ 3,000 ಕೋಟಿ ಸಾಲದಲ್ಲಿನ ಅಕ್ರಮಗಳಿಗೆ … Continued

ಜನವರಿ 12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗಿ: ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ಮೋದಿಯವರು ಜನವರಿ 12 ರ ಮಧ್ಯಾಹ್ನದಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು, ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಏಳು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳಿಂದ ಹಾಗೂ 8 ಕೇಂದ್ರೀಯ ಪ್ರಾಂತ್ಯದಿಂದ ಯುವಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. … Continued

ಸಿಎಂ ಸ್ಟಾಲಿನ್ ಅವರೊಂದಿಗೆ ಮಾತಿನ ಚಕಮಕಿಯ ನಂತರ ವಿಧಾನಸಭೆಯಿಂದ ಹೊರನಡೆದ ತಮಿಳುನಾಡು ರಾಜ್ಯಪಾಲ| ವೀಕ್ಷಿಸಿ

ಚೆನ್ನೈ: ಸದನದ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಸರ್ಕಾರದ ಸಾಂಪ್ರದಾಯಿಕ ಭಾಷಣ ಮಾತ್ರ ದಾಖಲಾಗಬೇಕು ಎಂಬ ನಿರ್ಣಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಡಿಸಿದ ನಂತರ ತಮಿಳುನಾಡು ರಾಜ್ಯಪಾಲ ಆರ್‌.ಎನ್. ರವಿ ಸೋಮವಾರ ಬೆಳಿಗ್ಗೆ ವಿಧಾನಸಭೆಯಿಂದ ಹೊರನಡೆದರು. ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ರಾಜ್ಯಪಾಲ ಆರ್.ಎನ್.ರವಿ ನಡುವಿನ ವಾಗ್ವಾದ ಸೋಮವಾರ ವಿಧಾನಸಭೆಯೊಳಗೆ ಉಲ್ಬಣಗೊಂಡಿತು, ನಂತರ … Continued

ಫೆಬ್ರವರಿ 12 ಕ್ಕೆ ಪ್ರಧಾನಿ ಮೋದಿಯಿಂದ ಶಿವಮೊಗ್ಗ ಏರ್ಪೋರ್ಟ್ ಲೋಕಾರ್ಪಣೆ : ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ: ಶಿವಮೊಗ್ಗದ ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಸೋಮವಾರ ತಿಳಿಸಿದ್ದಾರೆ. ನಗರದ ನವಲೆ, ಕೃಷಿ ಕಾಲೇಜು ಎದುರು ಚನ್ನಮುಂಬಾಪುರದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ನಿರ್ಮಿಸಲಾಗುತ್ತಿರುವ ಜಂಗಮ ಸಮಾಜದ ಸಾಂಸ್ಕೃತಿಕ ಭವನ ಶಿಲಾನ್ಯಾಸ ಹಾಗೂ ಭೂಮಿಪೂಜೆ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ … Continued