ಕಾಶ್ಮೀರ ಸೋನಾಮಾರ್ಗದಲ್ಲಿ ಸಂಭವಿಸಿದ ಭಾರೀ ಹಿಮಕುಸಿತ : ರುದ್ರ ರಮಣೀಯ ದೃಶ್ಯ ಕ್ಯಾಮರಾದಲ್ಲಿ ಸೆರೆ | ವೀಕ್ಷಿಸಿ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ಗಿರಿಧಾಮ ಸೋನಾಮಾರ್ಗದಲ್ಲಿ ಇಂದು, ಗುರುವಾರ  ಭಾರೀ ಹಿಮ ಹಿಮಕುಸಿತದ ವರದಿಯಾಗಿದೆ, ಅದರ ವೀಡಿಯೊವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿರುವ ಸೋನಾಮಾರ್ಗ್‌ನ ಬಾಲ್ಟಾಲ್ ಪ್ರದೇಶದ ಬಳಿ ಹಿಮಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಎರಡು ಹಿಮಕುಸಿತಗಳು ವರದಿಯಾಗಿದ್ದು, ಯಾವುದೇ ಪ್ರಾಣಹಾನಿ ಬಗ್ಗೆ … Continued

ನಂದಿ ಬೆಟ್ಟದ ಸಮೀಪ ಆದಿಯೋಗಿ ಪ್ರತಿಮೆ ನಿರ್ಮಾಣ: ಯಥಾಸ್ಥಿತಿ ಕಾಪಾಡಲು ಇಶಾ ಯೋಗ ಕೇಂದ್ರಕ್ಕೆ ಹೈಕೋರ್ಟ್‌

ಬೆಂಗಳೂರು : ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಅವಲಗುರ್ಕಿಯಲ್ಲಿ ಆದಿಯೋಗಿ ಪ್ರತಿಷ್ಠಾಪನೆಗೆ ಮಂಜೂರಾಗಿರುವ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಸದೆ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್‌ ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ … Continued

ತೀವ್ರ ಆಕ್ರೋಶದ ನಂತರ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ

ಬೆಂಗಳೂರು: ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಲಾಗಿದೆ. ಕೊನೆ ಕ್ಷಣದಲ್ಲಿ ಕರ್ನಾಟಕ ಸ್ತಬ್ಧಚಿತ್ರ ನಾರಿಶಕ್ತಿ ಗಣರಾಜ್ಯೋತ್ಸವ ಪರೇಡ್‌ಗೆ ಸೇರ್ಪಡೆಯಾಗಿದೆ. ಈ ಮೊದಲು ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಬೇರೆ ರಾಜ್ಯಗಳಿಗೂ ಅವಕಾಶ ಕೊಡವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಈ ಬಾರಿ ಅವಕಾಶ ನಿರಾಕರಿಸಲಾಗಿದೆ ಎಂದು ಹೇಳಲಾಗಿತ್ತು. ಇದು ಕನ್ನಡಿಗರ … Continued

ಇಂದು ಪ್ರಧಾನಿಯಿಂದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ : ಮೋದಿಗೆ ಬಿದರಿ ಕಲೆಯ ಸ್ವಾಮಿ ವಿವೇಕಾನಂದರ ಮೂರ್ತಿ, ಗರಗ-ಬೆಂಗೇರಿಯಲ್ಲಿ ತಯಾರಾದ ರಾಷ್ಟ್ರಧ್ವಜದ ಸ್ಮರಣಿಕೆ ಸಮರ್ಪಣೆ

ಧಾರವಾಡ: ಅವಳಿ ನಗರದಲ್ಲಿ ಬುಧವಾರದಿಂದ ಜನವರಿ 16 ರ ವರೆಗೆ ನಡೆಯಲಿರುವ 26 ನೇ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿಯನ್ನು ಸ್ಮರಣಿಯಾಗಿ ನೀಡಿ ಗೌರವಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ಸಂಜೆ 4 ಗಂಟೆಗೆ ಯುವ ಜನೋತ್ಸವವನ್ನು ಉದ್ಘಾಟಿಸಲಿರುವ ಗೌರವಾನ್ವಿತ ಪ್ರಧಾನಮಂತ್ರಿ ಅವರನ್ನು ಜಿಲ್ಲಾಡಳಿತದಿಂದ … Continued

ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವಿನ ನಂತರ 2 ಭಾರತೀಯ ಸಿರಪ್‌ಗಳ ಕುರಿತು ಡಬ್ಲ್ಯುಎಚ್‌ಒ ಎಚ್ಚರಿಕೆ

ಜಿನೀವಾ: ನೋಯ್ಡಾ ಮೂಲದ ಕಂಪನಿ ಮರಿಯನ್ ಬಯೋಟೆಕ್ ತಯಾರಿಸಿದ ಎರಡು ಕೆಮ್ಮಿನ ಸಿರಪ್‌ಗಳನ್ನು ಉಜ್ಬೇಕಿಸ್ತಾನದ ಮಕ್ಕಳಿಗೆ ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶಿಫಾರಸು ಮಾಡಿದೆ. ಬುಧವಾರದ ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯಲ್ಲಿ, ಡಬ್ಲ್ಯುಎಚ್‌ಒ (WHO) ಮೆರಿಯನ್ ಬಯೋಟೆಕ್‌ನಿಂದ ತಯಾರಿಸಲ್ಪಟ್ಟ “ವೈದ್ಯಕೀಯ ಉತ್ಪನ್ನಗಳು” “ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ವಿಫಲವಾದ ಉತ್ಪನ್ನಗಳಾಗಿವೆ ಮತ್ತು ನಿರ್ದಿಷ್ಟತೆಯನ್ನು ಮೀರಿದೆ ಎಂದು … Continued

ರಾಜಕೀಯ ಜಾಹೀರಾತುಗಳಿಗಾಗಿ ಎಎಪಿಗೆ ₹163 ಕೋಟಿ ವಸೂಲಿ ನೊಟೀಸ್ ನೀಡಿದ ದೆಹಲಿ ಸರ್ಕಾರ : 10 ದಿನಗಳಲ್ಲಿ ಪಾವತಿಸಲು ಸೂಚನೆ

ನವದೆಹಲಿ : ಸರ್ಕಾರಿ ಜಾಹೀರಾತಿನ ಸೋಗಿನಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಬಳಿಯಿಂದ ₹ 163.62 ಕೋಟಿ ವಸೂಲಿ ಮಾಡುವಂತೆ ದೆಹಲಿ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (ಡಿಐಪಿ) ನೀಡಿರುವ ವಸೂಲಾತಿ ನೋಟಿಸ್‌ನಲ್ಲಿ ದೆಹಲಿಯ ಆಡಳಿತ ಪಕ್ಷವು 10 ದಿನಗಳಲ್ಲಿ ಮೊತ್ತವನ್ನು ಪಾವತಿಸುವಂತೆ … Continued