ಕಚೇರಿ ಬಾಡಿಗೆ ನೀಡದ ಮಸ್ಕ್‌: ಸಿಂಗಾಪುರ ಟ್ವಿಟರ್‌ ಕಚೇರಿಯಿಂದ ಉದ್ಯೋಗಿಗಳು ಹೊರಕ್ಕೆ

ಸಿಂಗಾಪುರ: ಎಲೋನ್‌ ಮಸ್ಕ್‌ (Elon Musk) ಟ್ವಿಟರ್‌ ಅನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ನಂತರ ಸಂಸ್ಥೆಯ ಉದ್ಯೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧ ದೇಶಗಳಲ್ಲಿ ಈ ಕಂಪನಿಯ ಶಾಖೆಗಳಲ್ಲಿ ನಿರ್ವಹಣೆಯ ತೊಂದರೆಯಾಗಿದೆ. ಬಡ ನೌಕರರು ಅತಿಯಾದ ಮಹತ್ವಾಕಾಂಕ್ಷೆಯ ನಾಯಕನ ಅತಿಯಾದ ಕೆಲಸದ ಭಾರವನ್ನು ಹೊರಲು ಒತ್ತಾಯಿಸಲ್ಪಟ್ಟಿದ್ದಾರೆ, ಅವರು ಮೂಲಭೂತ ಹಂತಗಳಲ್ಲಿ ಗೊಂದಲಕ್ಕೊಳಗಾಗಿದ್ದಾರೆ. ದುರ್ವಾಸನೆ ಬೀರುವ ಸ್ನಾನಗೃಹಗಳು, ಟಾಯ್ಲೆಟ್ … Continued

ಪಂಚಮಸಾಲಿ ಲಿಂಗಾಯತ, ಒಕ್ಕಲಿಗ ಹೊಸ ಮೀಸಲಾತಿಗೆ ಹೈಕೋರ್ಟ್ ಬ್ರೇಕ್, ಯಥಾಸ್ಥಿತಿ ಕಾಪಾಡಲು ಆದೇಶ

ಬೆಂಗಳೂರು: ಪಂಚಮಸಾಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ರಾಜ್ಯ ಸರ್ಕಾರದ ತೀರ್ಮಾನದ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಮೀಸಲಾತಿ ಸಂಬಂಧ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ. ಪಂಚಮಸಾಲಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಡಿ ಮತ್ತು ಒಕ್ಕಲಿಗರಿಗೆ 2ಸಿ ಮೀಸಲಾತಿ ನೀಡಲು ಮುಖ್ಯಮಂತ್ರಿ … Continued

‘ಹಿಂದೂ ಧಾರ್ಮಿಕ ಗ್ರಂಥಗಳು ಅಶ್ಲೀಲ ಪಠ್ಯಗಳು, ನೈತಿಕತೆ ಬೋಧನೆ ಮಾಡುವುದಿಲ್ಲ’: ವಿವಾದ ಎಬ್ಬಿಸಿದ ಬಾಂಗ್ಲಾದೇಶದ ವಿರೋಧ ಪಕ್ಷದ ನಾಯಕನ ಹೇಳಿಕೆ

ನವದೆಹಲಿ: ಬಾಂಗ್ಲಾದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳ ಮಧ್ಯೆ, ಪ್ರತಿಪಕ್ಷದ ಉನ್ನತ ನಾಯಕ ಮತ್ತು ಗೊನೊ ಅಥಾರಿಟಿ ಕೌನ್ಸಿಲ್‌ನ ಜಂಟಿ ಸಂಚಾಲಕ ತಾರಿಕ್ ರೆಹಮಾನ್ ಅವರು “ಹಿಂದೂ ಧಾರ್ಮಿಕ ಪಠ್ಯಗಳು ಕೇವಲ ಅಶ್ಲೀಲ ಪಠ್ಯಗಳು” ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ತಾರಿಕ್ ರೆಹಮಾನ್ ಹಿಂದೂ ಅಲ್ಪಸಂಖ್ಯಾತರ … Continued

ತೆರಿಗೆ ನೋಟಿಸ್ ವಿರುದ್ಧ ಬಾಂಬೆ ಹೈಕೋರ್ಟ್ ಮೊರೆ ಹೋದ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ

ಮುಂಬೈ : ಬಾಲಿವುಡ್‌ ನಟಿ ಹಾಗೂ ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ತೆರಿಗೆ ಹೆಚ್ಚಳದ ನೋಟಿಸ್‌ನ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2012-13 ಮತ್ತು 2013-14ರ ಬಾಕಿಗಳ ಕುರಿತು ಮಾರಾಟ ತೆರಿಗೆ ಉಪ ಆಯುಕ್ತರು ನೀಡಿದ ಎರಡು ಆದೇಶಗಳನ್ನು ಪ್ರಶ್ನಿಸಿ ನಟಿ ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಅವರ … Continued

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಕೋರಿಕೆ ಪರಿಗಣಿಸಿ ರಾಜ್ಯ ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ. ಈ ಕುರಿತು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ … Continued

26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ : ರನ್‌ವೇ ಸಿದ್ಧವಾಗಿದೆ, ಕೌಶಲ್ಯ ಕಲಿತು ಟೇಕಾಫ್‌ ಆಗಿ ; ಯುವಕರಿಗೆ ಕರೆ

* ಡಿಜಿಟಲ್ ಇಂಡಿಯಾ ಯುವಜನತೆಗೆ ಅವಕಾಶಗಳ ಆಗರ* * ಯುವಶಕ್ತಿಯೇ ದೇಶದ ಶಕ್ತಿ * ಏಕ ಭಾರತ ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕರೆ * ಭಾರತವನ್ನು 3 ನೇ‌ ಅತೀದೊಡ್ಡ ಆರ್ಥಿಕ ಶಕ್ತಿಯಾಗಿಸುವ ಸಂಕಲ್ಪ ಹುಬ್ಬಳ್ಳಿ : ಡಿಜಿಟಲ್ ಇಂಡಿಯಾದ ಪ್ರಸ್ತುತ ಕಾಲಘಟ್ಟದಲ್ಲಿ ಕೌಶಲ್ಯಭರಿತ ಯುವಜನತೆಗೆ ಅವಕಾಶಗಳ ಬಾಗಿಲು ತೆರೆದಿದೆ. ಏಳಿ ಎದ್ದೇಳಿ ಗುರಿ ಮುಟ್ಟುವ … Continued

ಹುಬ್ಬಳ್ಳಿ : ಪ್ರಧಾನಿ ಮೋದಿ ರೋಡ್​ ಶೋ ವೇಳೆ ಭದ್ರತಾ ಲೋಪ; ಹಾರ ಹಾಕಲು ಬ್ಯಾರಿಕೇಡ್‌​ ದಾಟಿ ಮೋದಿಯತ್ತ ನುಗ್ಗಿ ಬಂದ ಬಾಲಕ | ವೀಕ್ಷಿಸಿ

ಹುಬ್ಬಳ್ಳಿ: ಯುವ ಜನೋತ್ಸವದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿದ್ದ ವೇಳೆ ಭದ್ರತಾ ಲೋಪ ಕಂಡು ಬಂದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಇಂದಿನಿಂದ ಆರಂಭವಾಗಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಒಂದು ತಾಸು ಪ್ರಧಾನಿ ಮೋದಿ ನಡೆಸಿದ ರೋಡ್​ … Continued

6 ಐಪಿಎಸ್ ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರ ಆರು ಐಪಿಎಸ್ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಕಲಬುರ್ಗಿಯ ಡಿಐಜಿ ಮತ್ತು ಕಮೀಷನ್ ಆಫ್ ಪೊಲೀಸ್ ಆಗಿದ್ದ ಡಾ.ವೈ ಎಸ್ ರವಿಕುಮಾರ ಅವರನ್ನು ವರ್ಗಾವಣೆ ಮಾಡಿ ಡೈರೆಕ್ಟರೇಟ್ಸ್ ಆಫ್ ಸಿವಿಲ್ ರೈಟ್ಸ್ ನ ಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಸ್ಥಳ ನಿಯೋಜನೆ ನಿರೀಕ್ಷೆಯಲ್ಲಿದ್ದ ಡಾ.ದಿವ್ಯಾ ವಿ. … Continued

ಇಂದು ರಾಷ್ಟ್ರೀಯ ಯುವ ದಿನಾಚರಣೆ: ಭಾರತದ ಯುವಶಕ್ತಿಗೆ ಬೇಕು ಸಮಾನ ಅವಕಾಶ, ಗುಣಮಟ್ಟದ ಶಿಕ್ಷಣ

(ಇಂದು, ಜನವರಿ ೧೨ರಂದು ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಆ ನಿಮಿತ್ಯವಾದ ಲೇಖನ) ಕೇಂದ್ರ ಸರ್ಕಾರ ೧೯೮೫ ರಿಂದ ಸ್ವಾಮಿ ವಿವೇಕಾನಂದರ ಜನ್ಮದಿನ ೧೨ ಅನ್ನು ರಾಷ್ಟ್ರೀಯ ಯುವ ದಿನಾಚರಣೆ ಆಚರಿಸುತ್ತಾ ಬಂದಿದೆ. ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡುತ್ತಿದ್ದಾರೆ. ಯುವ … Continued

ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಕಲ್ಲಡ್ಕ ಬಜರಂಗದಳ ಮುಖಂಡನ ಶವ ಪತ್ತೆ

ಮಂಗಳೂರು : ನೇತ್ರಾವತಿ ನದಿಯಲ್ಲಿ ಬಜರಂಗದಳದ ಮುಖಂಡನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸದ್ಯ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯ ಹಳೆಯ ಸೇತುವೆ ಬಳಿ ನೇತ್ರಾವತಿ ನದಿಯಲ್ಲಿ ಬಜರಂಗದಳ ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ ರಾಜೇಶ್ ಪೂಜಾರಿ (26) ಎಂಬವರ ಮೃತದೇಹ ಪತ್ತೆಯಾಗಿದೆ. ಹಿಂದುಪರ ಸಂಘಟನೆಗಳ … Continued