ಭಾರತ vs ನ್ಯೂಜಿಲೆಂಡ್: ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಶುಭಮನ್ ಗಿಲ್ : ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟರ್

ಹೈದರಾಬಾದ್‌ : ಬುಧವಾರ ಹೈದರಾಬಾದ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಆರಮಭಿಕ ಆಟಗಾರ ಶುಭಮನ್ ಗಿಲ್ ಅವರು ಕೇವಲ 145 ಎಸೆತಗಳಲ್ಲಿ ತಮ್ಮ ಚೊಚ್ಚಲ ದ್ವಿಶತಕವನ್ನು ಸಿಡಿಸಿದ್ದಾರೆ.
ಈ ಮೂಲಕ ಶುಭಮನ್ ಗಿಲ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡರು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ನಂತರ ಏಕದಿನದಲ್ಲಿ ದ್ವಿಶತಕ ಬಾರಿಸಿದ ಐದನೇ ಭಾರತೀಯ ಕ್ರಿಕೆಟಿಗರಾದರು ಮತ್ತು ಅವರ ಇನ್ನಿಂಗ್ಸ್ 19 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳಿಂದ ಕೂಡಿತ್ತು. ಈ ಹಿಂದೆ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಈ ಸಾಧನೆ ಮಾಡಿದ್ದರು. ಅವರು ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಕ್ರಿಕೆಟ್‌ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ಇಶಾನ್‌ ಕಿಶನ್ ಈ ದಾಖಲೆ ಹೊಂದಿದ್ದರು.
ಇಶಾನ್ ಕಿಶನ್, ಡಿಸೆಂಬರ್ 10 ರಂದು, ದ್ವಿಶತಕ ಗಳಿಸುವ ಮೂಲಕ ಏಕದಿನದ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ 23 ವರ್ಷ ಮತ್ತು 132 ದಿನಗಳ ವಯಸ್ಸಿನ ಶುಭಮನ್ ಗಿಲ್, ಈಗ ದ್ವಶತಕ ಗಳಿಸುವ ಮೂಲಕ ಈ ದಾಖಲೆ ಕೇವಲ 1 ತಿಂಗಳು ಮತ್ತು 8 ದಿನಗಳ ವರೆಗೆ ಮಾತ್ರ ಉಳಿಯಿತು. ಏಕದಿನದ ಪಂದ್ಯಗಳಲ್ಲಿ 3 ದ್ವಿಶತಕಗಳನ್ನು ಬಾರಿಸಿದ ಏಕೈಕ ಆಟಗಾರ ರೋಹಿತ್ ಶರ್ಮಾ.
ಆರಂಭಿಕ ವಿಕೆಟ್‌ಗೆ ರೋಹಿತ್‌ ಶರ್ಮಾ ಅವರೊಂದಿಗೆ 50 ರನ್‌ಗಳ ಜೊತೆಯಾಟದ ನಂತರ ರೋಹಿತ್ ಔಟಾದರೂ, ಗಿಲ್ ಪಿಚ್‌ನಲ್ಲಿ ಯಾವುದೇ ತೊಂದರೆ ಎದುರಿಸದೆ ಇನಿಂಗ್ಸ್‌ ಮುಂದುವರಿಸಿದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ವಿರಾಟ್ ಕೊಹ್ಲಿ ಮತ್ತು ಇಶಾನ್ ಕಿಶನ್ ರೂಪದಲ್ಲಿ ಭಾರತ ಎರಡು ತ್ವರಿತ ವಿಕೆಟ್ ಕಳೆದುಕೊಂಡಾಗಲೂ ಶುಭಮನ್‌ ತಮ್ಮ ಭರ್ಜರಿ ಹೊಡೆತದ ಆಟ ಮುಂದುವರೆಸಿದರು. ಗಿಲ್ ಅವರು ತಮ್ಮ ಮೂರನೇ ಶತಕ ಪೂರೈಸಿದ ನಂತರ ವಿರಾಟ್‌ ಕೊಹ್ಲಿ ಮತ್ತು ಶಿಖರ್ ಧವನ್‌ ಅವರನ್ನು ಮೀರಿಸಿ ಏಕದಿನದ ಪಂದ್ಯಗಳಲ್ಲಿ ಅತ್ಯಂತ ವೇಗವಾಗಿ 1000 ರನ್‌ಗಳನ್ನು ವೇಗವಾಗಿ ಗಳಿಸಿದ ಭಾರತೀಯ ಕ್ರಿಕೆಟಿಗರಾದರು.
ಅವರು 100 ರನ್‌ಗಳ ಗಡಿ ದಾಟಿದ ನಂತರ ರನ್-ಸ್ಕೋರಿಂಗ್ ಸುಲಭವಾಯಿತು ಮತ್ತು ಅವರು ಬಹುತೇಕ ಎಲ್ಲಾ ಬೌಲರ್‌ಗಳನ್ನು ಚಚ್ಚುವುದನ್ನು ಮುಂದುವರೆಸಿದರು. ಅವರು 122 ಎಸೆತಗಳಲ್ಲಿ ತಮ್ಮ 150 ರನ್ ಗಳಿಸಿದರು. ಅವರು ಭಾರತವನ್ನು 300 ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನಿಂಗ್ಸ್‌ಗೆ ಎರಡು ಓವರ್‌ಗಳು ಬಾಕಿ ಇರುವಾಗ, ಅವರು ಸ್ಮರಣೀಯ ದ್ವಿಶತಕ ತಲುಪಿದರು. ಲಾಕಿ ಫರ್ಗುಸನ್ ಅವರ ಬೌಲಿಂಗ್‌ನಲ್ಲಿ ಸತತ ಮೂರು ಸಿಕ್ಸರ್‌ಗಳಿಗೆ ಹೊಡೆದರು. ನಾಗ್ಪುರದಲ್ಲಿ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಗಳಿಸಿದ 186 ರನ್‌ಗಳನ್ನು ಗಿಲ್‌ ಹಿಂದಿಕ್ಕಿದ ಗಿಲ್‌ ನಂತರ ಇದು ಪ್ರಾಸಂಗಿಕವಾಗಿ ಏಕದಿನದ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧದ ಗರಿಷ್ಠ ಸ್ಕೋರ್ ಆಗಿತ್ತು.
ಶುಭಮನ್ ಗಿಲ್ ಅಂತಿಮವಾಗಿ 149 ಎಸೆತಗಳಲ್ಲಿ 208 ರನ್ ಗಳಿಸಿ ಹೆನ್ರಿ ಶಿಪ್ಲೆಗೆ ಔಟಾದರು. ಇದರ ಪರಿಣಾಮವಾಗಿ, ಭಾರತವು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 349 ರನ್ ಗಳಿಸಿತು.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement