ಅಮೆರಿಕದ ಲಾಸ್ ಏಂಜಲೀಸ್ ಬಳಿ ಚೀನೀ ಹೊಸ ವರ್ಷದ ಸಮಾರಂಭದಲ್ಲಿ ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು

ಲಾಸ್ ಏಂಜಲೀಸ್‌ನಲ್ಲಿ ಚೀನಾದ ಮೂಲದ ಜನರು ಚಂದ್ರಮಾನದ ಹೊಸ ವರ್ಷದ ಆಚರಣೆ ಮಾಡಿದ ನಂತರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಹತ್ತು ಜನರು ಮೃತಪಟ್ಟಿದ್ದಾರೆ. ಮಾಂಟೆರಿ ಪಾರ್ಕ್‌ನ ಗಾರ್ವೆ ಏವ್‌ನಲ್ಲಿರುವ ಮಾಂಟೆರಿ ಪಾರ್ಕ್‌ನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆ ಅಧಿಕಾರಿ ದೃಢಪಡಿಸಿದ್ದಾರೆ.
ಶೂಟರ್ ಒಬ್ಬ ಪುರುಷ ಎಂದು ಲಾಸ್ ಏಂಜಲೀಸ್ ಕೌಂಟಿ ಶೆರಿಫ್ ಇಲಾಖೆಯ ಸಾರ್ಜೆಂಟ್ ಬಾಬ್ ಬೋಸ್ ಹೇಳಿದೆ ಎಂದು ಎಪಿ ವರದಿ ಮಾಡಿದೆ.
ಮಾಂಟೆರಿ ಪಾರ್ಕ್‌ನಲ್ಲಿ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಅನೇಕ ಸಾವು ನೋವುಗಳು ಸಂಭವಿಸಿವೆ ಎಂದು ಅಮೆರಿಕ ಮಾಧ್ಯಮ ವರದಿ ಮಾಡಿದೆ. ಆದರೆ, ಗಂಟೆಗಳಾದರೂ ಗುಂಡಿನ ದಾಳಿಯ ವರದಿಗಳ ಬಗ್ಗೆ ಅಧಿಕೃತ ಮಾಹಿತಿ ಇರಲಿಲ್ಲ.
ಲಾಸ್ ಏಂಜಲೀಸ್ ಡೌನ್‌ಟೌನ್‌ನಿಂದ ಸುಮಾರು 16 ಕಿಲೋಮೀಟರ್ ದೂರದಲ್ಲಿರುವ ದೊಡ್ಡ ಏಷ್ಯನ್ ಜನಸಂಖ್ಯೆಯನ್ನು ಹೊಂದಿರುವ ಸುಮಾರು 60,000 ಜನರಿರುವ ಮಾಂಟೆರಿ ಪಾರ್ಕ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ.

ಶನಿವಾರ ರಾತ್ರಿ 10 ಗಂಟೆಯ ನಂತರ (ಬೆಳಿಗ್ಗೆ 6 ಜಿಎಸ್‌ಟಿ) ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಚೈನೀಸ್ ಚಂದ್ರಮಾನದ ಹೊಸ ವರ್ಷದ ಆಚರಣೆಯ ಸ್ಥಳದಲ್ಲಿ ಶೂಟಿಂಗ್ ನಡೆದಿದೆ. ಇದಕ್ಕೂ ಮುನ್ನ ನಡೆದ ಉತ್ಸವದಲ್ಲಿ ಸಾವಿರಾರು ಜನ ಸೇರಿದ್ದರು.
ಶೂಟಿಂಗ್ ಸಂಭವಿಸಿದ ಬೀದಿಯಲ್ಲಿರುವ ಕ್ಲಾಮ್ ಹೌಸ್ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್‌ನ ಮಾಲೀಕ ಸೆಯುಂಗ್ ವೊನ್ ಚೋಯ್ ಲಾಸ್ ಆಂಗಲ್ಸ್ ಟೈಮ್ಸ್‌ಗೆ ಮೂರು ಜನರು ತಮ್ಮ ವ್ಯಾಪಾರದ ಸ್ಥಳಕ್ಕೆ ನುಗ್ಗಿ ಬಾಗಿಲು ಲಾಕ್ ಮಾಡಲು ಸೂಚಿಸಿದರು ಎಂದು ಹೇಳಿದರು.
ಮಷಿನ್ ಗನ್ ಹೊಂದಿರುವ ಶೂಟರ್ ಬಹು ಸುತ್ತಿನ ಗುಂಡುಗಳನ್ನು ಹಾರಿಸಿದ್ದಾನೆ ಎಂದು ಹೇಳಲಾಗಿದೆ.

ಚಂದ್ರನ ಹೊಸ ವರ್ಷ ಎಂದರೇನು?
ಚೀನಾದಿಂದ ಅಮೆರಿಕಕ್ಕೆ ಬಂದ ಕುಟುಂಬಗಳು ಭಾನುವಾರ ಚಂದ್ರನ ಹೊಸ ವರ್ಷವನ್ನು ಆಚರಿಸಿವೆ. ಇದನ್ನು ಚೀನಾದಲ್ಲಿ ಅತ್ಯಂತ ಪ್ರಮುಖ ವಾರ್ಷಿಕ ರಜಾದಿನವೆಂದು ಪರಿಗಣಿಸಲಾಗಿದೆ, ಪ್ರತಿ ವರ್ಷವೂ ಪುನರಾವರ್ತಿತ ಸೈಕಲ್‌ನಲ್ಲಿ ಚೀನೀ ರಾಶಿಚಕ್ರದ 12 ತಿಂಗಳಲ್ಲಿ ಇದು ಮೊದಲನೇ ತಿಂಗಳಾಗಿದೆ. ಆಚರಣೆಯು ದೊಡ್ಡ ಕುಟುಂಬ ಕೂಟಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡುವ ಜನಸಮೂಹವನ್ನು ಒಳಗೊಂಡಿರುತ್ತದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement