ಬೆಂಗಳೂರು ಕೆಆರ್​ ಮಾರ್ಕೆಟ್ ಫ್ಲೈ ಓವರ್​ ಮೇಲಿಂದ ನೋಟುಗಳ ಮಳೆ ಸುರಿಸಿದ ವ್ಯಕ್ತಿ | ವೀಕ್ಷಿಸಿ

posted in: ರಾಜ್ಯ | 0

ಬೆಂಗಳೂರು: ಇಲ್ಲಿನ ಕೆ.ಆರ್.ಮಾರುಕಟ್ಟೆಯ ಫ್ಲೈಓವರ್ ಮೇಲೆ ವಾಹನ ಸವಾರನೊಬ್ಬ ಹಣ ಎಸೆದಿರುವ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ನಡೆದ ಘಟನೆಯ ವೀಡಿಯೊ ಇದೀಗ ವೈರಲ್ ಆಗಿದೆ.
ವೀಡಿಯೊದಲ್ಲಿ, ಪ್ರದೇಶದ ಮೇಲ್ಸೇತುವೆಯ ಮೇಲೆ ವ್ಯಕ್ತಿಯೊಬ್ಬರು ದೊಡ್ಡ ಮೊತ್ತದ ಹಣವನ್ನು ಎಸೆದಿರುವುದು ಕಂಡುಬಂದಿದೆ. 10 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳಿದ್ದವು. ವ್ಯಕ್ತಿ ಆಕ್ಟಿವ್ ಹೋಂಡಾದಲ್ಲಿ ಬಂದು ಫ್ಲೈ ಓವರ್ ಮೇಲಿಂದ ಹಣ ಎಸೆದಿದ್ದು ಹತ್ತು ರೂಪಾಯಿ ನೋಟು ಚೆಲ್ಲಿ ಹೋಗಿದ್ದಾರೆ. ಮೇಲಿಂದ ಹಣ ಬೀಳುತ್ತಿದ್ದಂತೆ ಕೆಲವರು ಅದನ್ನು ಹೆಕ್ಕಲು ಮುಗಿಬಿದಿದ್ದಾರೆ. ಸದ್ಯ ಫ್ಲೈಓವರ್​ ಮೇಲಿಂದ ಹಣದ ಮಳೆಯಾಗುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

10 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳಿದ್ದವು. ಕೂಡಲೇ ಫ್ಲೈಓವರ್ ಕೆಳಗೆ ಜಮಾಯಿಸಿದ ಜನ ನಗದನ್ನು ತೆಗೆದುಕೊಳ್ಳಲು ಆರಂಭಿಸಿದರು.
ರಸ್ತೆಯಲ್ಲಿ ಬಿದ್ದ ಹಣ ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದವರನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರಿಂದ ಕೆಲ ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ನೋಟು ಎಸೆದ ವ್ಯಕ್ತಿ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಯಾವ ಉದ್ದೇಶಕ್ಕೆ ಹಣ ಎಸೆದ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಈತ ಬೆಂಗಳೂರಲ್ಲಿ ಇವೆಂಟ್​ ಮ್ಯಾನೇಜ್​ಮೆಂಟ್ ನಡೆಸುತ್ತಿದ್ದು, ಇವೆಂಟ್ ಮ್ಯಾನೇಜ್​ ಮೆಂಟ್​ ಜೊತೆ ಆ್ಯಂಕರಿಂಗ್ ಕೂಡ ಮಾಡುತ್ತಿದ್ದರು. ಯೂಟ್ಯೂಬ್​ ಚಾನಲ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಕಾರ್ಯಕ್ರಮದ ವೇಳೆ ಕುಸಿದುಬಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3.7 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ

advertisement