ತನ್ನ ಆಕಾರ ತಾನೇ ಬದಲಾಯಿಸಿಕೊಳ್ಳುವ ಹ್ಯುಮನಾಯ್ಡ್‌ ರೋಬೋಟ್ ತಯಾರಿಸಿದ ವಿಜ್ಞಾನಿಗಳು..! ಈ ರೋಬೋಟ್‌ ತನ್ನ ಆಕಾರ ಬದಲಾಯಿಸಿ ಜೈಲು ಸೆಲ್‌ ನಿಂದ ಹೇಗೆ ಹೊರಬರುತ್ತದೆ ಎಂಬುದನ್ನು ವೀಕ್ಷಿಸಿ

ನಾವೆಲ್ಲರೂ ಮೂವತ್ತು ವರ್ಷಗಳ ಹಿಂದೆ ಟರ್ಮಿನೇಟರ್ 2′ ಸಿನೆಮಾದಲ್ಲಿ ಆಕಾರ ಬದಲಾಯಿಸುವ ರೋಬೋಟ್ T-1000 ಅನ್ನು ನೋಡಿದ್ದೇವೆ, 1991ರ ಚಲನಚಿತ್ರದಲ್ಲಿನ ಪಾತ್ರವು ಅಭಿಮಾನಿಗಳಿಗೆ ಗೂಸ್‌ಬಂಪ್‌ಗಳನ್ನು ನೀಡಿತು ಮತ್ತು ಅಂತಹ ವಿಷಯವು ಸಾಧ್ಯವೇ ಎಂದು ವಿಜ್ಞಾನ ಉತ್ಸಾಹಿಗಳಿಗೆ ಆಶ್ಚರ್ಯವಾಯಿತು. ಆದರೆ 30 ವರ್ಷಗಳಲ್ಲಿ ವಿಜ್ಞಾನಿಗಳು ಅದನ್ನು ಸಾಧ್ಯವಾಗಿಸಿದ್ದಾರೆ…!
ಈ ತಿಂಗಳ ಆರಂಭದಲ್ಲಿ, ವಿಜ್ಞಾನಿಗಳು ಘನ ಮತ್ತು ದ್ರವ ಸ್ಥಿತಿಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ತನಗೆ ತಾನೇ ಪರಿವರ್ತನೆ ಮಾಡಿಕೊಳ್ಳುವ ರೋಬೋಟ್‌ನ ರಚನೆ ಮಾಡಿದ್ದಾಗಿ ಘೋಷಿಸಿದರು, ಇದು ತನ್ನ ಶಕ್ತಿಯಲ್ಲಿ ರಾಜಿ ಮಾಡಿಕೊಳ್ಳದೆ ಹಲವಾರು ಅಡೆತಡೆಗಳು ಮತ್ತು ಪರಿಸರಗಳ ಮೂಲಕ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ. ರೋಬೋಟ್‌ನ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಸಂಶೋಧಕರು ವಿಭಿನ್ನ ಸನ್ನಿವೇಶಗಳಲ್ಲಿ ತಂತ್ರಜ್ಞಾನವನ್ನು ಅನ್ವಯಿಸಿದ್ದಾರೆ. ಅಂದರೆ ಆಕಾರವನ್ನು ಬದಲಾಯಿಸುವ ಈ ರೋಬೋಟ್ ತನ್ನ ಶಕ್ತಿಯಲ್ಲಿ ರಾಜಿ ಮಾಡಿಕೊಳ್ಳದೆ ಟ್ರಿಕಿ ಪರಿಸರದಲ್ಲಿ ಅಡೆತಡೆಗಳನ್ನು ದಾಟಲು ದ್ರವ ಮತ್ತು ಲೋಹದ ಸ್ಥಿತಿಗಳ ನಡುವೆ ತನ್ನನ್ನು ಬದಲಾಯಿಸಿಕೊಳ್ಳುತ್ತದೆ…!
ಚೀನಾದ ವಿಜ್ಞಾನಿಗಳ ತಂಡವು ಈ ಸಂಶೋಧನೆಯ ನೇತೃತ್ವ ವಹಿಸಿದ್ದು, ಮಿತಿಗಳನ್ನು ಮೀರುವ ಈ ರೋಬೋಟ್‌ನ ಸಾಮರ್ಥ್ಯವು ಎಲೆಕ್ಟ್ರಾನಿಕ್ ಅಸೆಂಬ್ಲಿ ಮತ್ತು ವೈದ್ಯಕೀಯದಂತಹ ಕ್ಷೇತ್ರಗಳಲ್ಲಿ ಉಪಯುಕ್ತವಾಗಲಿದೆ ಎಂದು ಹೇಳಿದ್ದಾರೆ.

“ರೋಬೋಟ್‌ಗಳಿಗೆ ದ್ರವ ಮತ್ತು ಘನ ಸ್ಥಿತಿಗಳ ನಡುವೆ ಬದಲಾವಣೆಯಾಗುವ ಸಾಮರ್ಥ್ಯವನ್ನು ನೀಡುವುದರಿಂದ ಅವುಗಳಿಗೆ ಅದು ಹೆಚ್ಚಿನ ಕ್ರಿಯಾತ್ಮಕತೆಯನ್ನು ನೀಡುತ್ತದೆ” ಎಂದು ಹಾಂಗ್ ಕಾಂಗ್‌ನ ಚೈನೀಸ್ ವಿಶ್ವವಿದ್ಯಾಲಯದ ಎಂಜಿನಿಯರ್ ಚೆಂಗ್‌ಫೆಂಗ್ ಪ್ಯಾನ್ ಹೇಳಿದ್ದಾರೆ ಎಂದು ಸೈನ್ಸ್ ಅಲರ್ಟ್‌ ಉಲ್ಲೇಖಿಸಿದೆ.
ಈ ಪ್ರಗತಿಯನ್ನು ವಿವರಿಸುವ ಅಧ್ಯಯನವನ್ನು ಮ್ಯಾಟರ್‌ನಲ್ಲಿ ಪ್ರಕಟಿಸಲಾಗಿದೆ. ಸೂಕ್ಷ್ಮ ಕಾಂತೀಯ ಕಣಗಳನ್ನು ದ್ರವ ಲೋಹದಲ್ಲಿ ಹೇಗೆ ಹುದುಗಿಸಲಾಗಿದೆ ಮತ್ತು ಕಾಂತೀಯ ಕಾರ್ಯಗಳನ್ನು ಸರಿಹೊಂದಿಸುವ ಆಧಾರದ ಮೇಲೆ ಆ ಕಣಗಳು ಲೋಹವನ್ನು ತಮಗೆ ತಾವೇ ಹೇಗೆ ಬಿಸಿಮಾಡುತ್ತವೆ ಮತ್ತು ತಂಪಾಗಿಸಿಕೊಳ್ಳುತ್ತವೆ ಎಂಬುದನ್ನು ಇದು ವಿವರಿಸುತ್ತದೆ.

ರೋಬೋಟ್ ತನ್ನ ಸ್ಥಿತಿಯನ್ನು ಬದಲಾಯಿಸುವ ವೀಡಿಯೊವನ್ನು ಸಹ ಸಂಶೋಧಕರು ಅಧ್ಯಯನದ ಜೊತೆಗೆ ಬಿಡುಗಡೆ ಮಾಡಿದ್ದಾರೆ. ವೀಡಿಯೊ ಸಣ್ಣ ರೋಬೋಟ್ ಅನ್ನು ಜೈಲಿನಲ್ಲಿ ಬಂಧಿಸಿರುವುದನ್ನು ತೋರಿಸುತ್ತದೆ. ಸೆಕೆಂಡ್‌ಗಳ ನಂತರ, ಟರ್ಮಿನೇಟರ್ 2 ರಲ್ಲಿ T-1000 ರೀತಿ ಜೈಲು ಸೆಲ್‌ನಿಂದ ಹೊರಬರಲು ಅದು ತನ್ನ ತಾಪಮಾನವನ್ನು ಹೆಚ್ಚಿಸಿಕೊಂಡು ಕರಗುವ ಮೂಲಕ ಜೈಲು ಸೆಲ್‌ನಿಂದ ಹೊರಬರುತ್ತದೆ. ಹೊರಬಂದ ನಂತರ ನಂತರ ಸ್ವಯಂ ತಾನೇ ತಣ್ಣಗಾಗುವ ಮೂಲಕ ಅದು ತಕ್ಷಣವೇ ತನ್ನ ಮೊದಲಿನ ಹ್ಯುಮನಾಯ್ದ್‌ ಆಕಾರವನ್ನು ಮರಳಿ ಪಡೆಯುತ್ತದೆ.
ವಿಜ್ಞಾನಿಗಳು ತಾವು ಸಮುದ್ರ ಸೌತೆಕಾಯಿ(sea cucumber)ಯಿಂದ ಇದಕ್ಕೆ ಸ್ಫೂರ್ತಿ ಪಡೆದಿದ್ದಾಗಿ ಹೇಳಿದ್ದಾರೆ. ಇದು ಲೋಡ್ ಸಾಮರ್ಥ್ಯವನ್ನು ಸುಧಾರಿಸಲು ಮತ್ತು ದೈಹಿಕ ಹಾನಿಯನ್ನು ಮಿತಿಗೊಳಿಸಲು ತನ್ನ ಅಂಗಾಂಶಗಳ ಬಿಗಿತವನ್ನು ಬದಲಾಯಿಸಿಕೊಳ್ಳುತ್ತದೆ. ಅದೇ ರೀತಿ ಮೃದು ಮತ್ತು ಗಟ್ಟಿಯಾಗಿರುವುದರಿಂದ, ಸಣ್ಣ, ಸಮುದ್ರ ಸೌತೆಕಾಯಿ-ಪ್ರೇರಿತ ಈ ರೋಬೋಟ್‌ಗಳು ಸಹ ಕೇವಲ ಒಂದು ಅಥವಾ ಇನ್ನೊಂದು ರೋಬೋಟ್‌ಗಳ ಮಿತಿಗಳನ್ನು ನಿವಾರಿಸಬಲ್ಲವು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಸಂಶೋಧಕರು ರೋಬೋಟ್‌ಗಳನ್ನು ಅಡೆತಡೆಗಳನ್ನು ನ್ಯಾವಿಗೇಟ್ ಮಾಡಲು, ವಸ್ತುಗಳನ್ನು ತೆಗೆದುಹಾಕಲು ಅಥವಾ ಮಾನವ ಹೊಟ್ಟೆಯ ಮಾದರಿಗೆ ಅದನ್ನು ತಲುಪಿಸಲು ಮತ್ತು ಅದರಿಂದ ಹೊರಗೆ ಬರಲು ದ್ರವೀಕರಿಸಿ ನಂತರ ಅದರ ಅದು ತನ್ನ ಮೂಲ ಹುಮನಾಯ್ಡ್ ಆಕಾರಕ್ಕೆ ಮರಳುವಂತೆ ಮಾಡಿದರು.
ರೋಬೋಟ್ ರಚಿಸಲು, ಸಂಶೋಧಕರು 29.76 ಡಿಗ್ರಿ ಸೆಲ್ಸಿಯಸ್ ಕರಗುವ ಬಿಂದುವನ್ನು ಹೊಂದಿರುವ ಮೃದುವಾದ ಲೋಹವಾದ ಗ್ಯಾಲಿಯಂ ಅನ್ನು ಬಳಸಿದ್ದಾರೆ. ಅವರು ಕಾಂತೀಯ ಕಣಗಳೊಂದಿಗೆ ಗ್ಯಾಲಿಯಂನ ಮಿಶ್ರಣವನ್ನು ಎಂಬೆಡ್ ಮಾಡಿದರು, ಇದು ವಿಜ್ಞಾನಿಗಳ ಪ್ರಕಾರ “ಮ್ಯಾಗ್ನೆಟೋಆಕ್ಟಿವ್ ಘನ-ದ್ರವ ಹಂತದ ಪರಿವರ್ತನೆಯ ಯಂತ್ರ” ವನ್ನು ರಚನೆ ಮಾಡಿತು.
“ಇಲ್ಲಿನ ಕಾಂತೀಯ ಕಣಗಳು ಎರಡು ಪಾತ್ರಗಳನ್ನು ಹೊಂದಿವೆ. ಒಂದು ಅದು ವಸ್ತುವನ್ನು ಪರ್ಯಾಯ ಕಾಂತೀಯ ಕ್ಷೇತ್ರಕ್ಕೆ ಸ್ಪಂದಿಸುವಂತೆ ಮಾಡುತ್ತದೆ, ಆದ್ದರಿಂದ ನೀವು ಇಂಡಕ್ಷನ್ ಮೂಲಕ ವಸ್ತುವನ್ನು ಬಿಸಿ ಮಾಡಬಹುದು ಮತ್ತು ಬದಲಾವಣೆಗೆ ಕಾರಣವಾಗಬಹುದು. ಮತ್ತೊಂದು ಕಾಂತೀಯ ಕಣಗಳು ರೋಬೋಟ್‌ಗಳಿಗೆ ಚಲನಶೀಲತೆಯನ್ನು ನೀಡುತ್ತವೆ ಮತ್ತು ಕಾಂತೀಯ ಕ್ಷೇತ್ರಕ್ಕೆ ಪ್ರತಿಕ್ರಿಯೆಯಾಗಿ ಚಲಿಸುವ ಸಾಮರ್ಥ್ಯವನ್ನು ಪಡೆಯುತ್ತವೆ” ಎಂದು ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರ್ ಕಾರ್ಮೆಲ್ ಮಜಿದಿ ಹೇಳಿದ್ದಾರೆ.ವಿಜ್ಞಾನಿಗಳು ಈಗ ಯಂತ್ರದ ನೈಜ-ಪ್ರಪಂಚದ ಅನ್ವಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ, ಆದರೆ ಅದಕ್ಕಾಗಿ ಟ್ವೀಕಿಂಗ್ ಅಗತ್ಯವಿದೆ ಎಂದು ಅವರು ಹೇಳುತ್ತಾರೆ. ಈ ತರಹದ ಸಣ್ಣ ರೋಬೋಟ್‌ಗಳಿಗೆ ಅನೇಕ ಸಂಭಾವ್ಯ ಉಪಯೋಗಗಳಿವೆ. ಸೂಕ್ಷ್ಮವಾದ ದುರಸ್ತಿ ಕೆಲಸದಿಂದ ಹಿಡಿದು ಉದ್ದೇಶಿತ ಔಷಧ ವಿತರಣೆಯವರೆಗೆ ಅವುಗಳು ಅತ್ಯಂತ ಚಿಕ್ಕದಾದ ಅಥವಾ ಸುತ್ತುವರಿದ ಸ್ಥಳಗಳಲ್ಲಿ ಮಾನವರಿಗೆ ವಿಶಿಷ್ಟವಾದ ಸಾಧನಗಳಾಗಿ ನಿರ್ವಹಿಸಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸುತ್ತಾರೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

 

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement