ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ಕುಮಟಾ : ಎರಡು ಎಕರೆ ವಿಸ್ತಾರದ ಗುಜರಿ ಅಂಗಡಿಯಲ್ಲಿ ಬೆಂಕಿ ಅವಘಡ: ಮುಗಿಲೆತ್ತರಕ್ಕೆ ವ್ಯಾಪಿಸಿದ ಬೆಂಕಿ ಕೆನ್ನಾಲಿಗೆ | ವೀಕ್ಷಿಸಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪದ ಅಳ್ವೇಕೊಡಿಯ ಗುಜರಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಎಕರೆಯಷ್ಟು ಪ್ರದೇಶದಲ್ಲಿ ಬೆಂಕಿ ಜ್ವಾಲೆ ಆವರಿಸಿಕೊಂಡು ಆತಂಕ ಸೃಷ್ಟಿಸಿದೆ.
ಅಳ್ವೆಕೋಡಿಯಲ್ಲಿರುವ ಬಾಷಾ ಶೇಖ್ ಎಂಬುವವರ ಮಾಲೀಕತ್ವದ ಗುಜರಿ ಅಂಗಡಿಯೊಳಕ್ಕೆ ಬೆಂಕಿ ತಗಲಿ ಗುಜರಿ ಸಾಮಗ್ರಿಗಳು ಸುಟ್ಟುಹೋಗಿವೆ.. ಎರಡು ಎಕರೆಯಷ್ಟು ಪ್ರದೇಶದಲ್ಲಿ ಗುಜರಿ ಸಾಮಗ್ರಿಗಳು ಸಂಗ್ರಹಿಸಿಡಲಾಗಿದ್ದರಿಂದ ಈ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿ, ಕಾಡ್ತಿಚ್ಚಿನಂತೆ ಹರಡಿದೆ. ಬೆಂಕಿ ನಂದಿಸಲು ಕುಮಟಾ ಅಗ್ನಿಶಾಮಕ ದಳದವರಿಗೆ ಸಾಧ್ಯವಾಗದ ಕಾರಣ ಹೆಚ್ಚುವರಿಯಾಗಿ ಹೊನ್ನಾವರ, ಅಂಕೋಲಾ, ಭಟ್ಕಳ ಹಾಗೂ ಕಾರವಾರ ಅಗ್ನಿಶಾಮಕ ಕರೆಸಿಕೊಳ್ಳಲಾಗಿದೆ. ಸತತ 6 ತಾಸುಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.

ಕೆಲ ಸ್ಥಳೀಯರು ಮನೆ ಖಾಲಿ ಮಾಡಿ, ಅಲ್ಲಿಂದ ಸ್ಥಳಾಂತರಗೊಂಡ ಘಟನೆಯೂ ನಡೆದಿದೆ. ಸ್ಥಳಿಯರು ಕೂಡ ತಮ್ಮ ತಮ್ಮ ಮನೆಯಿಂದ ನೀರು ತಂದು ಬೆಂಕಿ ನಂದಿಸಲು ಸಹಾಯ ಮಾಡಿದ್ದಾರೆ. ಗುಜರಿ ಗೋದಾಮಿನಲ್ಲಿ ಭಾರಿ ಪ್ರಮಾಣದಲ್ಲಿ ಕಚ್ಚಾವಸ್ತುಗಳು ಸಂಗ್ರಹಿಸಿದ್ದರಿಂದ ಬೆಂಕಿಯ ವ್ಯಾಪ್ತಿ ಹೆಚ್ಚಾಗಿದೆ.
ಅಗ್ನಿಶಾಮಕ ವಾಹನಗಳು ಒಳಗೆ ಬರಲು ದಾರಿ ಇಲ್ಲದೇ ಸಿಬ್ಬಂದಿ ಹರಸಾಹಸ ಪಡುವಂತಾಯಿತು. ಗುಜರಿ ಸಾಮಗ್ರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಇಲ್ಲಿ ಹತ್ತಿರದಲ್ಲಿ ಗ್ಯಾಸ್ ಬಂಕರ್ ಹಾಗೂ ಪೆಟ್ರೋಲ್ ಬಂಕ್ ಇರುವುದು ಆತಂಕಕ್ಕೆ ಕಾರಣವಾಯಿತು. ಈ ದುರ್ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗುಜರಿ ಗೋದಾಮಿನಲ್ಲಿ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಗುಜರಿ ಸಂಗ್ರಹಗಳಿರುವುದರಿಂದ ಬೆಂಕಿ ಅಷ್ಟೊಂದು ಜೋರಾಗಿದೆ ಎಂದು ಹೇಳಲಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​ 18ರ ವರೆಗೆ ಮಳೆ ಸಾಧ್ಯತೆ

 

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement