ಕೇಂದ್ರ ಬಜೆಟ್‌ 2023 : ದೇಶದ ಅಭಿವೃದ್ಧಿಗೆ ನಿರ್ಮಲಾ ಸೀತಾರಾಮನ್‌ “ಸಪ್ತ ಸೂತ್ರ”; ಕರ್ನಾಟಕಕ್ಕೆ ಬಂಪರ್‌, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ

ನವದೆಹಲಿ: ಕೇಂದ್ರದ 2023 ಬಜೆಟ್‌ 7 ಅಂಶಗಳನ್ನು ಬಜೆಟ್ ಒಳಗೊಳ್ಳಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.
ಬಜೆಟ್‌ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮರ್ಥ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ ಹಾಗೂ ಆರ್ಥಿಕ ಸುಧಾರಣೆಯ ಏಳು ಅಂಶಗಳನ್ನು ಒಳಗೊಂಡಿರುತ್ತದೆ ಹೇಳಿದ್ದಾರೆ. ಬಜೆಟ್‌ 2023 ರ 7 ಪ್ರಮುಖಾಂಶಗಳು ಹೀಗಿವೆ.
* ಕರ್ನಾಟಕಕ್ಕೆ ಬಜೆಟ್​ನಲ್ಲಿ ಬಂಪರ್ ಕೊಡುಗೆ, ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ

* ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಮುಂದುವರಿಕೆ

* 2023-24ರಲ್ಲಿ ಬಂಡವಾಳ ಹೂಡಿಕೆ ವೆಚ್ಚವನ್ನು 33% ಅಂದರೆ 10 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 3.3 ಪ್ರತಿಶತವಾಗಿದೆ.

* ಕೃಷಿ ಕ್ರೆಡಿಟ್ ಗುರಿ 20 ಲಕ್ಷ ಕೋಟಿ ರೂ.ಗೆ ಹೆಚ್ಚಳ

* ಜನವರಿ 1, 2023 ರಿಂದ ಪಿಎಂ ಗರೀಬ್ ಕಲ್ಯಾಣ ಆನ್ ಯೋಜನೆಯಡಿ ಎಲ್ಲ ಆದ್ಯತೆಯ ಕುಟುಂಬಗಳಿಗೆ
ಒಂದು ವರ್ಷದವರೆಗೆ ಉಚಿತ ಆಹಾರ ಧಾನ್ಯ ಪೂರೈಸುವ ಯೋಜನೆ ಜಾರಿ

* ದೇಶದಲ್ಲಿ ಹೊಸದಾಗಿ 50 ಏರ್​ಪೋರ್ಟ್​ಗಳ ಅಭಿವೃದ್ಧಿಗೆ ಅನುಮೋದನೆ-ಅನುದಾನ

* ಸರ್ಕಾರಿ ನೌಕರರ ಕೌಶಲಾಭಿವೃದ್ಧಿಗೆ ಕ್ರಮ

* ಪ್ರಧಾನಮಂತ್ರಿ ಆವಾಸ್ ಯೋಜನಾ ವೆಚ್ಚ ಶೇ.66 ರಷ್ಟು ಏರಿಕೆ, ಇದು ₹79,000 ಕೋಟಿಗೆ ಹೆಚ್ಚಳ
*ನಿರ್ದಿಷ್ಟವಾಗಿ ಬುಡಕಟ್ಟು ಗುಂಪುಗಳ ಸಾಮಾಜಿಕ-ಆರ್ಥಿಕ ಸ್ಥಿತಿ ಸುಧಾರಣೆಗೆ ಮೂಲಭೂತ ಸೌಲಭ್ಯಗಳೊಂದಿಗೆ PBTG ವಾಸಸ್ಥಾನಗಳ ಅಭಿವೃದ್ಧಿಗೆ PMPBTG ಅಭಿವೃದ್ಧಿ ಮಿಷನ್ ಆರಂಭ, ಮುಂದಿನ 3 ವರ್ಷಗಳಲ್ಲಿ 15,000 ಕೋಟಿ ರೂ ಈ ಯೋಜನೆಗಾಗಿ ಬಳಕೆ

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

* 7 ಸಾವಿರ ಕೋಟಿ ರೂ.ಗಳ ಅನುದಾನದಲ್ಲಿ ಇ-ಕೋರ್ಟ್​ಗಳ ಸ್ಥಾಪನೆ ಘೋಷಣೆ

* ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಪ್ರೋತ್ಸಾಹಿಸಲು ಸರ್ಕಾರವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ 6,000 ಕೋಟಿ ರೂಪಾಯಿಗಳ ಉಪಯೋಜನೆ ಆರಂಭ

* ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಅಪ್ಲಿಕೇಶನ್‌ಗಳಿಗಾಗಿ 100 ಲ್ಯಾಬ್‌ಗಳ ಸ್ಥಾಪನೆ, ಐಐಟಿಗೆ ಅನುದಾನದ ಮೂಲಕ ಲ್ಯಾಬ್ ವಜ್ರ ಉತ್ಪಾದನೆಗೆ ಉತ್ತೇಜನ

* PAN ಸಂಖ್ಯೆ ಅಗತ್ಯವಿರುವ ವ್ಯಾಪಾರ ಸಂಸ್ಥೆಗಳಿಗೆ, ನಿರ್ದಿಷ್ಟಪಡಿಸಿದ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ಸಿಸ್ಟಮ್‌ಗಳಿಗೆ
ಪ್ಯಾನ್ ಅನ್ನು ಸಾಮಾನ್ಯ IDಯಾಗಿ ಗುರುತಿಸುವಿಕೆಯಾಗಿ ಬಳಕೆ

ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು ಈ ಬಜೆಟ್‌ನಲ್ಲಿ1.3 ಲಕ್ಷ ಕೋಟಿಯಷ್ಟು ಏರಿಕೆ, ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಏರಿಕೆ

* 2030ರ ವೇಳೆಗೆ 5 MMT ಹಸಿರು ಹೈಡ್ರೋಜನ್ ಉತ್ಪಾದನೆ ತಲುಪುವ ಗುರಿ, ಈ ಗುರಿ ಸಾಧಿಸಲು 35,000 ಕೋಟಿ ರೂ.ಗಳ ನಿಗದಿ

* ಭಾರತವು 2070ರ ವೇಳೆಗೆ ಕಾರ್ಬನ್ ಫ್ರೀ ಆಗಲಿದೆ. ಮಾಲಿನ್ಯ ಹೆಚ್ಚಿಸುವ ವಾಹನಗಳು ಗುಜರಿಗೆ. ದೇಶದಲ್ಲಿ ಹಸಿರು ಪರಿಸರ ಅಭಿವೃದ್ಧಿಗೆ ಒತ್ತು

* ಆರೋಗ್ಯ, ಕೃಷಿ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚಳಕ್ಕೆ ಒತ್ತು, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೇಂದ್ರಗಳನ್ನು ಸ್ಥಾಪಿಸಿ ವಿವಿಧ ಕ್ಷೇತ್ರಗಳಲ್ಲಿ ಬಳಕೆಗೆ ಉತ್ತೇಜನ

 

* ರೈಲ್ವೆ ಇಲಾಖೆಯಲ್ಲಿ ₹2.40 ಲಕ್ಷ ಕೋಟಿ ಬಂಡವಾಳ ಹೂಡಿಕೆ, ಮುಂದಿನ ಹಣಕಾಸು ವರ್ಷದಲ್ಲೇ ಈ ಹೂಡಿಕೆ ಅನುಷ್ಠಾನಕ್ಕೆ

* ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಚಾಲೆಂಜ್ ಮೋಡ್ ಮೂಲಕ 50 ಪ್ರವಾಸಿ ತಾಣಗಳನ್ನು ಆಯ್ಕೆ

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

* ಮಹಿಳೆಯರು, ಯುವಕರು, ರೈತರು, ಎಸ್ಸಿ/ಎಸ್ಟಿ ಸಮುದಾಯಗಳಿಗೆ ಮನ್ನಣೆ

* ಆಧಾರ್, ಯುಪಿಐ, ಕೋವಿನ್ ಡಿಜಿಟಲೀಕರಣದ ಮೂರು ಸಾಧನೆಗಳಿಗೆ ವಿಶ್ವ ಮಾನ್ಯತೆ

* ಪ್ರಸಕ್ತ ವರ್ಷದಲ್ಲಿ ಆರ್ಥಿಕತೆ ಶೇಕಡ 7 ರಷ್ಟು ವೃದ್ಧಿ ಗುರಿ

* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ 2 ಲಕ್ಷ ಕೋಟಿ ಮೀಸಲು. ಮುಂದಿನ ಒಂದು ವರ್ಷಕ್ಕೆ ಯೋಜನೆ ವಿಸ್ತರಣೆ

* ಈವರೆಗೆ 47 ಕೋಟಿ ಜನಧನ್ ಖಾತೆಗಳು ಆರಂಭ

* ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ

* ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಘೋಷಣೆ

* ಸಿರಿ ಧಾನ್ಯಗಳ ಕೃಷಿಗೆ ಹೊಸ ಯೋಜನೆ

* ಕೃಷಿ ಯೋಜನೆಗಳಲ್ಲಿ ಸ್ಟಾರ್ಟ್ ಅಪ್ ಗಳಿಗೆ ಆದ್ಯತೆ

* ಹೈದರಾಬಾದ್ ನಲ್ಲಿ ಸಿರಿಧಾನ್ಯಗಳ ಶ್ರೀ ಅನ್ನ ಸಂಶೋಧನಾ ಕೇಂದ್ರ ಸ್ಥಾಪನೆ

* ದೇಶದ ಸಹಕಾರಿ ಸಂಘಗಳನ್ನು ಒಂದೇ ಸೂರಿನಡಿ ತರಲು ಸಂಕಲ್ಪ

* 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

* ಮೀನುಗಾರಿಕೆಗೆ 6,000 ಕೋಟಿ ರೂಪಾಯಿ ಮೀಸಲು

* ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು

* ಶಿಕ್ಷಕರ ತರಬೇತಿಗೆ ಆದ್ಯತೆ, ಜಿಲ್ಲಾ ಶಿಕ್ಷಣ ಕೇಂದ್ರಗಳ ಉನ್ನತೀಕರಣ

* ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ

* ಸಾರ್ವಜನಿಕರಿಗೆ ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ

* ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್ ಗಳ ಸ್ಥಾಪನೆ‌

 

 

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement