ಈ ನಗರಗಳಲ್ಲಿ ಸಾಂಪ್ರದಾಯಿಕ ತಂದೂರಿ ರೊಟ್ಟಿ, ತಂದೂರಿ ಭಟ್ಟಿ ನಿಷೇಧಿಸಿದ ಸರ್ಕಾರ…!

ಭೋಪಾಲ್ (ಮಧ್ಯಪ್ರದೇಶ): ನಗರಗಳಲ್ಲಿ ವಾಯು ಮಾಲಿನ್ಯವನ್ನು ಹೆಚ್ಚಿಸುವ ಕಾರಣದಿಂದ ಮಧ್ಯಪ್ರದೇಶದ ಪ್ರಮುಖ ನಗರಗಳಲ್ಲಿ ತಂದೂರಿ ಭಟ್ಟಿ ಎಂಬ ಮಣ್ಣಿನ ಒಲೆಯ ಬಳಕೆ ನಿಷೇಧಿಸಲಾಗಿದೆ.
ಬದಲಿಗೆ ಎಲೆಕ್ಟ್ರಿಕ್ ಅಥವಾ ಎಲ್‌ಪಿಜಿ ಓವನ್ ಬಳಸುವಂತೆ ಹೋಟೆಲ್ ನಿರ್ವಾಹಕರಿಗೆ ತಿಳಿಸಲಾಗಿದೆ.
ಬಳಕೆಯ ಮೇಲೆ ನಿಗಾ ಇಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಿಳಿಸಲಾಗಿದೆ. ಮಣ್ಣಿನ ಒಲೆ ಬಳಸುತ್ತಿರುವುದು ಕಂಡುಬಂದಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ 5 ಲಕ್ಷ ರೂ.ದಂಡ ವಿಧಿಸಲಾಗುತ್ತದೆ.
ಈ ಸಂಬಂಧ ಇತ್ತೀಚೆಗೆ ಜಬಲ್‌ಪುರದಲ್ಲಿ ಹೋಟೆಲ್‌ಗಳಿಗೆ ನೋಟಿಸ್‌ ನೀಡಲಾಗಿದೆ. ಮಧ್ಯಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಭೋಪಾಲ್ ಪ್ರಾದೇಶಿಕ ಅಧಿಕಾರಿ ಬ್ರಿಜೇಶ್ ಶರ್ಮಾ ಮಾತನಾಡಿ, ಕಲ್ಲಿದ್ದಲು ಮತ್ತು ಮರವನ್ನು ಇಂಧನವಾಗಿ ಬಳಸುವ ಸಾಂಪ್ರದಾಯಿಕ ಮಣ್ಣಿನ ತಂದೂರಿ ಭಟ್ಟಿ ಬಳಕೆಯನ್ನು ನಿಲ್ಲಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆದೇಶ ಹೊರಡಿಸಿದೆ. ಭೋಪಾಲ್, ಇಂದೋರ್, ಗ್ವಾಲಿಯರ್ ಮತ್ತು ಜಬಲ್‌ಪುರದಲ್ಲಿ ಸಾಂಪ್ರದಾಯಿಕ ತಂದೂರಿಯನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ಆದರೆ, ಎಲೆಕ್ಟ್ರಿಕ್ ತಂದೂರಿ ಮೂರು ಪಟ್ಟು ಹೆಚ್ಚು ವೆಚ್ಚವಾಗಲಿದೆ ಎಂದು ಹೋಟೆಲ್ ನಿರ್ವಾಹಕರು ಹೇಳಿದ್ದಾರೆ, ಇದು ಗ್ರಾಹಕರ ಜೇಬಿಗೆ ಪರಿಣಾಮ ಬೀರುತ್ತದೆ.
ಮಾಲಿನ್ಯದ ಮಟ್ಟವನ್ನು ಹೊರತುಪಡಿಸಿ, ತಂದೂರಿ ರೊಟ್ಟಿಯಲ್ಲಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣವು ಅಧಿಕವಾಗಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಧಾಬಾ ನಿರ್ವಾಹಕರಿಗೆ ಆದೇಶವನ್ನು ಅನುಸರಿಸಬೇಕು ಎಂದು ಸೂಚಿಸಲಾಗಿದೆ ಎಂದು ಶರ್ಮಾ ಹೇಳಿದರು.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement