ಬ್ರಿಟನ್‌ನಲ್ಲಿರುವ ಮುಸ್ಲಿಮರಲ್ಲಿ ಭಾರತ ವಿರೋಧಿ ಭಾವನೆ ಕೆರಳಿಸಲು ಪಾಕಿಸ್ತಾನ ಯತ್ನ : ಬ್ರಿಟಿಷ್ ಸರ್ಕಾರದ ವರದಿ

ಲಂಡನ್: ಪಾಕಿಸ್ತಾನವು ಬ್ರಿಟನ್‌ನಲ್ಲಿರುವ ಮುಸ್ಲಿಂ ಸಮುದಾಯಗಳಲ್ಲಿ ಭಾರತ-ವಿರೋಧಿ ಭಾವನೆಯನ್ನು ಪ್ರಚೋದಿಸುತ್ತಿದೆ ಎಂದು ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ಬೆಂಬಲಿತ ವರದಿಯು ಕಂಡುಹಿಡಿದಿದೆ.
ಭಯೋತ್ಪಾದನೆ-ವಿರೋಧಿ ‘ತಡೆಗಟ್ಟುವಿಕೆ’ ಕಾರ್ಯಕ್ರಮದ ಕುರಿತ ಬಹುನಿರೀಕ್ಷಿತ ವರದಿಯನ್ನು ಬುಧವಾರ (8 ಫೆಬ್ರವರಿ) ಬಿಡುಗಡೆ ಮಾಡಲಾಗಿದೆ.
ಭಯೋತ್ಪಾದನೆಯನ್ನು ತಡೆಗಟ್ಟಲು ಸ್ಥಾಪಿಸಲಾದ ಯುನೈಟೆಡ್ ಕಿಂಗ್‌ಡಂ ಸರ್ಕಾರದ ಯೋಜನೆಯ ಪರಿಶೀಲನೆಯು ಇಸ್ಲಾಮಿಸ್ಟ್ ಉಗ್ರವಾದವನ್ನು ದೇಶಕ್ಕೆ “ಪ್ರಾಥಮಿಕ ಬೆದರಿಕೆ” ಎಂದು ಹೇಳಿದ್ದು, ನಿಭಾಯಿಸಲು ಸುಧಾರಣೆಗಳಿಗೆ ಶಿಫಾರಸುಗಳನ್ನು ಮಾಡಿದೆ ಮತ್ತು ಪಾಕಿಸ್ತಾನವು ಕಾಶ್ಮೀರ ಹಾಗೂ ಖಲಿಸ್ತಾನ್ ವಿಷಯಗಳನ್ನು ಮುಂದಿಟ್ಟುಕೊಂಡು ಬ್ರಿಟನ್‌ನ ಮುಸ್ಲಿಮರಲ್ಲಿ ಉಗ್ರವಾದವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಇಸ್ಲಾಮಿಕ್‌ ಭಯೋತ್ಪಾದನೆ ಹೆಚ್ಚುತ್ತಿದ್ದು, ದೇಶಕ್ಕೆ ಅಪಾಯವನ್ನೊಡ್ಡಿದೆ’ ಎಂದಿರುವ ವರದಿ, ಭಯೋತ್ಪಾದನೆಯನ್ನು ನಿಗ್ರಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿಯಲ್ಲಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ.
‘ಬ್ರಿಟನ್‌ನಲ್ಲಿ ಖಾಲಿಸ್ತಾನ ಪರ ಸಣ್ಣ ಗುಂಪುಗಳಿವೆ. ಆದರೆ, ಈ ಗುಂಪುಗಳ ಸದಸ್ಯರಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ತೀವ್ರಗಾಮಿಗಳಾಗುವಂತೆ ಮಾಡಲಾಗುತ್ತಿದೆ’ ಎಂದು ‘ಸಾರ್ವಜನಿಕ ನೇಮಕಾತಿಗಳ’ ಆಯುಕ್ತ ವಿಲಿಯಮ್ಸ್ ಶಾಕ್ರಾಸ್ ಎಚ್ಚರಿಸಿದ್ದಾರೆ.
ಪ್ರಸ್ತುತ, ಭಯೋತ್ಪಾದನಾ ನಿಗ್ರಹ ಪೊಲೀಸ್ ಜಾಲದ 80 ಪ್ರತಿಶತದಷ್ಟು ನೇರ ತನಿಖೆಗಳು ಇಸ್ಲಾಮಿಸ್ಟ್ ಆಗಿದ್ದು, 10 ಪ್ರತಿಶತ ತೀವ್ರ ಬಲಪಂಥೀಯವಾಗಿವೆ ಎಂದು ಅದು ಗಮನಿಸಿದೆ.
ಕಾಶ್ಮೀರದಲ್ಲಿ ಹಿಂಸಾಚಾರ ನಡೆಸುವಂತೆ ಪಾಕಿಸ್ತಾನ ಮೂಲದ ಧರ್ಮಗುರುವೊಬ್ಬರು ಹಾಗೂ ಬ್ರಿಟನ್‌ನಲ್ಲಿರುವ ತೀವ್ರಗಾಮಿಗಳ ಗುಂಪುಗಳು ಕರೆ ನೀಡುತ್ತಿರುವ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ. ಕಾಶ್ಮೀರ ವಿಷಯ ಮುಂದಿಟ್ಟುಕೊಂಡು ನಡೆದ ಪ್ರತಿಭಟನೆಗಳ ಬಗ್ಗೆ ಬ್ರಿಟನ್‌ನಲ್ಲಿರುವ ಮುಸ್ಲಿಮರು ಹೆಚ್ಚು ಆಸಕ್ತಿ ತೋರುತ್ತಿರುವುದನ್ನು ಕಂಡಿದ್ದೇನೆ. ಪ್ರತಿಭಟನೆ ನಡೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದನ್ನು ಸಹ ಗಮನಿಸಿದ್ದೇನೆ’ ಎಂದು ಶಾಕ್ರಾಸ್‌ ಈ ವರದಿಯಲ್ಲಿ ಹೇಳಿದ್ದಾರೆ.
ಇಸ್ಲಾಂ ಮೂಲಭೂತವಾದವನ್ನು ನಿಗ್ರಹಿಸುವುದು ಮುಸ್ಲಿಂ ವಿರೋಧಿ ಎನಿಸದು. ಹೀಗಾಗಿ, ಇಲ್ಲಿನ ಕೆಲ ಮುಸ್ಲಿಮರು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗುವುದನ್ನು ತಡೆಯಲು ಮುಸ್ಲಿಂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಜರುಗಿಸಬೇಕು ಎಂದೂ ಅವರು ಪ್ರತಿಪಾದಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಕಣ್ಣಿನ ಕಾಯಿಲೆ ಪತ್ತೆ ಹಚ್ಚಲು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ 10 ವರ್ಷದ ಕೇರಳ ಮೂಲದ ಬಾಲಕಿ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement