ಮಾನವ ಆರೈಕೆಯಲ್ಲಿ ಅತಿ ಹೆಚ್ಚು ವರ್ಷ ಬದುಕಿ ಗಿನ್ನೆಸ್ ವಿಶ್ವ ದಾಖಲೆ ಸೇರಿದ ಈ ಪುಟ್ಟ ಜಾತಿಯ ಇಲಿ….!

ಹಾಲಿವುಡ್ ನಟ ಪ್ಯಾಟ್ರಿಕ್ ಸ್ಟೀವರ್ಟ್ ಅವರ ಹೆಸರನ್ನು ಇಟ್ಟಿರುವ ಪುಟ್ಟ ಇಲಿಯೊಂದು ಈಗ ಅಧಿಕೃತವಾಗಿ ಮಾನವ ಆರೈಕೆಯಲ್ಲಿ ಬದುಕಿದ ವಿಶ್ವದ ಅತ್ಯಂತ ಹಿರಿಯ ಇಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದು ಅಮೆರಿಕದ ಮೃಗಾಲಯವೊಂದರಲ್ಲಿ ಇದೆ ಎಂದು AFP ವರದಿ ಮಾಡಿದೆ. ಪೆಸಿಫಿಕ್ ಪಾಕೆಟ್ ಮೌಸ್ ಎಂಬ ಅಳಿವಿನಂಚಿನಲ್ಲಿರುವ ಚಿಕ್ಕ ಗಾತ್ರದ ಪ್ರಭೇದದ ಇಲಿ ಒಂಬತ್ತು ವರ್ಷ ಮತ್ತು 209 ದಿನಗಳನ್ನು ಪೂರೈಸಿದ ನಂತರ ಬುಧವಾರ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿ ನೀಡಲಾಯಿತು.
ಮಾನವ ಆರೈಕೆಯಲ್ಲಿ ವಿಶ್ವದ ಅತ್ಯಂತ ಹಳೆಯ ಇಲಿ ಯಾವುದು?
ಲಾಸ್ ಏಂಜಲೀಸ್ ಟೈಮ್ಸ್ ಪ್ರಕಾರ, ಪ್ಯಾಟ್ 14 ಜುಲೈ 2013 ರಂದು ಜನಿಸಿತು ಮತ್ತು ವನ್ಯಜೀವಿ ಒಕ್ಕೂಟದ ಡಾ ಡೆಬ್ರಾ ಶಿಯರ್ ಅವರು ಪ್ರಾರಂಭಿಸಿದ ಪೆಸಿಫಿಕ್ ಪಾಕೆಟ್ ಇಲಿಗಳ ಸಂರಕ್ಷಣಾ ಕಾರ್ಯಕ್ರಮದ ಭಾಗವಾಗಿ ಜನಿಸಿದ ಮೂರನೇ ಇಲಿಯಾಗಿದೆ.
ಮೂಗಿನ ತುದಿಯಿಂದ ಬಾಲದ ತುದಿಯವರೆಗೆ ಇದು ನಾಲ್ಕರಿಂದ ಆರು ಇಂಚುಗಳಷ್ಟು ಉದ್ದವಿರುತ್ತದೆ. ಮತ್ತು ಮೂರು ಪೆನ್ನಿಯಷ್ಟು ತೂಕವಿರುವ ಪೆಸಿಫಿಕ್ ಪಾಕೆಟ್ ಮೌಸ್ ಉತ್ತರ ಅಮೆರಿಕಾದಲ್ಲಿ ಕಂಡುಬರುವ ಇಲಿಯ ಅತ್ಯಂತ ಚಿಕ್ಕ ಜಾತಿಯಾಗಿದೆ ಎಂದು ವರದಿ ಹೇಳುತ್ತದೆ.
ಇದು ಉತ್ತರ ಅಮೆರಿಕದ ಕರಾವಳಿಯ ಕುರುಚಲು ಪ್ರದೇಶಗಳು, ದಿಬ್ಬಗಳು ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಸಮೀಪವಿರುವ ನದಿ ತೀರಗಳಲ್ಲಿ ಕಂಡುಬರುತ್ತವೆ. ಇವು ಹೆಚ್ಚಾಗಿ ಧಾನಯಗಳು ಹಾಗೂ ಕೆಲವು ಜಾತಿ ಕೀಟಿಗಳನ್ನು ತಿನ್ನುತ್ತವೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ಉಚಿತ ಹಿಟ್ಟು ವಿತರಣೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ 11 ಜನರ ಸಾವು

ಸ್ಯಾನ್ ಡಿಯಾಗೋ ಝೂ ವೈಲ್ಡ್‌ಲೈಫ್ ಅಲೈಯನ್ಸ್‌ನ ಡಾ ಡೆಬ್ರಾ ಶಿಯರ್ ಅವರು “ಪ್ಯಾಟ್” ನ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರವನ್ನು ಪಡೆದಿದ್ದಾರೆ, ಈ ಇಲಿಗೆ ನಟ ಸರ್ ಪ್ಯಾಟ್ರಿಕ್ ಅವರ ಹೆಸರನ್ನು ಪ್ರೀತಿಯಿಂದ ಇಡಲಾಗಿದೆ.
ಪೆಸಿಫಿಕ್ ಪಾಕೆಟ್ ಮೌಸ್ ಏಕೆ ಅಳಿವಿನಂಚಿನಲ್ಲಿದೆ?
ಅಮೆರಿಕ ಮೂಲದ ಸೆಂಟರ್ ಫಾರ್ ಬಯೋಲಾಜಿಕಲ್ ಡೈವರ್ಸಿಟಿ (CBD) ಪ್ರಕಾರ, ಪೆಸಿಫಿಕ್ ಪಾಕೆಟ್ ಇಲಿಗಳು ಅಳಿದು ಹೋಗಿದೆ ಎಂದು ಭಾವಿಸಲಾಗಿತ್ತು.1993 ರಲ್ಲಿ ಆರೆಂಜ್ ಕೌಂಟಿಯ ಡಾನಾ ಪಾಯಿಂಟ್‌ನಲ್ಲಿ “ಪುನಃ ಪತ್ತೆಯಾಗುವ ಮೊದಲು ಸುಮಾರು 20 ವರ್ಷಗಳವರೆಗೆ ಅಳಿವಿನಂಚಿನಲ್ಲಿರುವ ಇಲಿ ಎಂದು ಘೋಷಿಸಲಾಗಿತ್ತು.

ಒಂದು ಹೇಳಿಕೆಯ ಪ್ರಕಾರ, ಮೃಗಾಲಯದ ಒಕ್ಕೂಟವು 2012 ರಲ್ಲಿ ಇಲಿಯ ಅಳಿದು ಹೋಗುವುದನ್ನು ತಡೆಯಲು ಅದರ ಸಂತಾನೋತ್ಪತ್ತಿ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಹಿಂದಿನ ವರ್ಷದಲ್ಲಿ 117 ಮರಿಗಳು ಜನಿಸಿದವು ಎಂದು ಅದು ವರದಿ ಮಾಡಿದೆ. ಒಕ್ಕೂಟದ ಪ್ರಕಾರ, ಈ ವಸಂತಕಾಲದಲ್ಲಿ ಅನೇಕ ಇಲಿಗಳನ್ನು ಕಾಡಿಗೆ ಹಿಂತಿರುಗಿಸಲಾಗುತ್ತದೆ.
ಲಾಸ್ ಏಂಜಲೀಸ್ ಟೈಮ್ಸ್‌ಗೆ ಡಾ ಶಿಯರ್ ನೀಡಿರುವ ಹೇಳಿಕೆಯ ಪ್ರಕಾರ, ಸಂರಕ್ಷಣಾ ಪ್ರಯತ್ನದಿಂದ ಸರಿಸುಮಾರು 500 ಇಲಿಗಳು ಜನಿಸಿವೆ.

ಇಂದಿನ ಪ್ರಮುಖ ಸುದ್ದಿ :-   ʼಮಹಾʼ ತಾಯಿ...: 27 ಗಂಟೆಗಳಲ್ಲಿ 21 ಮರಿಗಳಿಗೆ ಜನ್ಮ ನೀಡಿದ ಈ ನಾಯಿ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement