ಟರ್ಕಿ ಭೂಕಂಪ: ಐದು ದಿನಗಳ ನಂತರ ಅವಶೇಷಗಳಡಿ ಜೀವಂತವಾಗಿ ಪತ್ತೆಯಾದ 2 ತಿಂಗಳ ಮಗು, 7 ತಿಂಗಳ ಮಗು…| ವೀಕ್ಷಿಸಿ

ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 28,000 ದಾಟಿದ್ದರೂ ಸಹ ಬದುಕುಳಿಯುವ ಅಸಾಮಾನ್ಯ ಕಥೆಗಳು ಹೊರಹೊಮ್ಮುತ್ತಲೇ ಇವೆ.
ಟರ್ಕಿಯ ಹಟೇ ಪ್ರಾಂತ್ಯದಲ್ಲಿ ಅವಶೇಷಗಳಡಿಯಿಂದ ನಿನ್ನೆ ಎರಡು ತಿಂಗಳ ಮಗುವನ್ನು ರಕ್ಷಿಸುತ್ತಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. ಜನಸಮೂಹ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದ್ದಾರೆ. ಭೂಕಂಪದ ಸುಮಾರು 128 ಗಂಟೆಗಳ ನಂತರ ಮಗು ಜೀವಂತವಾಗಿ ಪತ್ತೆಯಾಗಿದೆ.
ಭೂಕಂಪಗಳು ಟರ್ಕಿ ಮತ್ತು ಸಿರಿಯಾದ ಭಾಗಗಳನ್ನು ಧ್ವಂಸಗೊಳಿಸಿದ 140 ಗಂಟೆಗಳ ನಂತರ ರಕ್ಷಣಾ ತಂಡಗಳ ಸದಸ್ಯರು ಏಳು ತಿಂಗಳ ಮಗು, 13 ವರ್ಷದ ಹುಡುಗಿ ಮತ್ತು 27 ವರ್ಷದ ವ್ಯಕ್ತಿಯನ್ನು ಅವಶೇಷಗಳಿಂದ ಜೀವಂತವಾಗಿ ಹೊರತೆಗೆದಿದ್ದಾರೆ.
ಭೂಕಂಪದ ಐದು ದಿನಗಳ ನಂತರ ರಕ್ಷಿಸಲ್ಪಟ್ಟವರಲ್ಲಿ ಎರಡು ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಮತ್ತು 70 ವರ್ಷದ ಮಹಿಳೆ ಸಹ ಸೇರಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.
ಆದಾಗ್ಯೂ, ರಕ್ಷಣಾ ತಂಡಗಳು ಇನ್ನೂ ಕನಿಷ್ಠ ತಾಪಮಾನದಲ್ಲಿ ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದವರನ್ನು ಹುಡುಕುತ್ತಿದ್ದಾರೆ. ಆದರೆ ಸಮಯ ಕಳೆದಂತೆ ಬದುಕುಳಿದವರನ್ನು ಮತ್ತೆ ಮಾಡುವ ಭರವಸೆಯು ಮಸುಕಾಗಲು ಪ್ರಾರಂಭಿಸಿದೆ.

BBC ವರದಿಯ ಪ್ರಕಾರ, ಹೆಸರಿಸದ ಗುಂಪುಗಳ ನಡುವಿನ ಘರ್ಷಣೆ ಉಲ್ಲೇಖಿಸಿ ಜರ್ಮನ್ ರಕ್ಷಣಾ ತಂಡಗಳು ಮತ್ತು ಆಸ್ಟ್ರಿಯನ್ ಸೇನೆಯು ಶನಿವಾರ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿವೆ. ಆಹಾರ ಸರಬರಾಜು ಕ್ಷೀಣಿಸುತ್ತಿರುವುದರಿಂದ ಭದ್ರತೆಯು ಹದಗೆಡುವ ನಿರೀಕ್ಷೆಯಿದೆ ಎಂದು ರಕ್ಷಣಾ ತಂಡದ ಒಬ್ಬರು ಹೇಳಿದ್ದಾರೆ. ಮತ್ತು ಲೂಟಿಯಲ್ಲಿ ನಿರತರಾಗಿರುವ ಸುಮಾರು 50 ಜನರನ್ನು ಬಂಧಿಸಲಾಗಿದೆ, ಹಲವಾರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಟರ್ಕಿ ಮತ್ತು ಸಿರಿಯಾದಾದ್ಯಂತ ಕನಿಷ್ಠ 8,70,000 ಜನರಿಗೆ ತುರ್ತಾಗಿ ಬಿಸಿ ಊಟದ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಈ ಹಿಂದೆ ಎಚ್ಚರಿಸಿದೆ. ಭೂಕಂಪದಿಂದ ಸುಮಾರು 2.6 ಕೋಟಿ ಜನರು ಬಾಧಿತರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಇದು ತಕ್ಷಣದ ಆರೋಗ್ಯ ಅಗತ್ಯಗಳನ್ನು ನಿಭಾಯಿಸಲು $42.8 ಮಿಲಿಯನ್‌ಗೆ ಫ್ಲಾಶ್ ಮನವಿಯನ್ನು ಪ್ರಾರಂಭಿಸಿತು.
ಟರ್ಕಿಯ ವಿಪತ್ತು ಸಂಸ್ಥೆ ಶನಿವಾರ ಸುಮಾರು 32,000 ಟರ್ಕಿಶ್ ನಾಗರಿಕರು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ. 8,294 ಅಂತಾರಾಷ್ಟ್ರೀಯ ರಕ್ಷಣಾ ಕಾರ್ಯಕರ್ತುರು ಇದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಸೋಮವಾರದ 7.8 ತೀವ್ರತೆಯ ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದಾದ್ಯಂತ ಸಂಂಭವಿಸಿದ ಹಲವಾರು ಪ್ರಬಲ ಆಘಾತಗಳ ಬಳಿಕ ಸಾವಿರಾರು ಜನರು ಮೃತಪಟ್ಟಿದ್ದಾರೆ. ಈದು ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ, 2003 ರಲ್ಲಿ ನೆರೆಯ ಇರಾನ್‌ನಲ್ಲಿ ಸಂಭವಿಸಿದ 31,000 ಭೂಕಂಪದಿಂದ ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಏರುತ್ತಿರುವುದು ನೋಡಿದರೆ ಇದು ಅದನ್ನೂ ಮೀರಿಸಬಹುದು ಎಂದು ಹೇಳಲಾಗಿದೆ.
ಟರ್ಕಿಯಲ್ಲಿ ಇದುವರೆಗೆ 24,617 ಜನರು ಸಾವಿಗೀಡಾಗಿದ್ದಾರೆ. ಇದು 1939ರ ನಂತರದ ದೇಶದ ಅತ್ಯಂತ ಭೀಕರ ಭೂಕಂಪವಾಗಿದೆ. ಸಿರಿಯಾದಲ್ಲಿ 3,500 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇಂದಿನ ಸಾವಿನ ಸಂಖ್ಯೆ ನವೀಕರಿಸಲಾಗಿಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement