ʼಜೋಕ್ʼ : ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್‌ ಬದುಕಿದ್ದಾನೆ ಎಂಬ ತಮಿಳು ನಾಯಕನ ಹೇಳಿಕೆ ತಳ್ಳಿಹಾಕಿದ ಶ್ರೀಲಂಕಾ

ಕೊಲಂಬೊ: ಎಲ್‌ಟಿಟಿಇಯ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ 14 ವರ್ಷಗಳ ನಂತರ, ತಮಿಳು ರಾಷ್ಟ್ರೀಯವಾದಿ ನಾಯಕರೊಬ್ಬರು ಸೋಮವಾರ ಪ್ರಭಾಕರನ್‌ ಬದುಕಿದ್ದಾನೆ ಮತ್ತು ಅವರು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದ್ದು, ಅವರು ಶೀಘ್ರವೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾನೆ ಎಂದು ಹೇಳಿದ್ದನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯವು “ತಮಾಷೆ” ಎಂದು ತಳ್ಳಿಹಾಕಿದೆ. ಮತ್ತು 2009 ರಲ್ಲಿ ಪ್ರಭಾಕರನ್ ಕೊಲ್ಲಲ್ಪಟ್ಟರು ಎಂದು ಪ್ರತಿಪಾದಿಸಲು ಡಿಎನ್‌ಎ (DNA) ಪುರಾವೆಯನ್ನು ಉಲ್ಲೇಖಿಸಿದೆ.
“ಅವರು 19 ಮೇ 2009 ರಂದು ಕೊಲ್ಲಲ್ಪಟ್ಟರು ಎಂದು ದೃಢಪಡಿಸಲಾಗಿದೆ. ಡಿಎನ್‌ಎ (DNA) ಅದನ್ನು ಸಾಬೀತುಪಡಿಸಿದೆ” ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ನಳಿನ್ ಹೆರಾತ್ ತಿಳಿಸಿದ್ದಾರೆ.
1983ರಲ್ಲಿ ಪ್ರಾರಂಭವಾದ ಕಟುವಾದ ಹೋರಾಟದ ಕಾರ್ಯಾಚರಣೆಯಲ್ಲಿ, ಶ್ರೀಲಂಕಾದ ಸೇನೆಯು ಎಲ್‌ಟಿಟಿಇ ನಾಯಕ ಪ್ರಭಾಕರನ್‌ ಅವರನ್ನು ಕೊಲ್ಲುವ ಮೂಲಕ ಮೇ 2009 ರಲ್ಲಿ ದ್ವೀಪ ರಾಷ್ಟ್ರದಲ್ಲಿ ಸುಮಾರು ಮೂರು ದಶಕಗಳ ಅಂತರ್ಯುದ್ಧವನ್ನು ಕೊನೆಗೊಳಿಸಿತು.
ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ತಮಿಳರಿಗೆ ಸ್ವತಂತ್ರ ರಾಜ್ಯಕ್ಕಾಗಿ ಎಲ್‌ಟಿಟಿಇ ಹೋರಾಡುತ್ತಿತ್ತು.
ಶ್ರೀಲಂಕಾ ಸೇನೆಯಿಂದ ಪ್ರಭಾಕರನ್ ಹತ್ಯೆಯಾದ ನಿಖರವಾದ ದಿನಾಂಕ ತಿಳಿದಿಲ್ಲವಾದರೂ, ಮೇ 19, 2009 ರಂದು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು.
ಮೇ 18, 2009 ರಂದು ಆಗಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು 26 ವರ್ಷಗಳ ಯುದ್ಧದ ಅಂತ್ಯವನ್ನು ಘೋಷಿಸಿದರು, ಇದರಲ್ಲಿ 1,00,000 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಮತ್ತು ಲಕ್ಷಾಂತರ ಶ್ರೀಲಂಕಾದವರು, ಮುಖ್ಯವಾಗಿ ಅಲ್ಪಸಂಖ್ಯಾತ ತಮಿಳರು ದೇಶ ಮತ್ತು ವಿದೇಶಗಳಲ್ಲಿ ನಿರಾಶ್ರಿತರಾಗಿ ಸ್ಥಳಾಂತರಗೊಂಡರು.

ಪ್ರಮುಖ ಸುದ್ದಿ :-   ವೀಡಿಯೊ : ಸೇನಾ ಹೆಲಿಕಾಪ್ಟರ್‌ ಗಳ ಡಿಕ್ಕಿ ; 10 ಮಂದಿ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement