ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಮಾನವ ರಹಿತ ಯುದ್ಧ ವಿಮಾನದ ಯಶಸ್ವಿ ಹಾರಾಟ ನಡೆಸಿದ ಲಾಕ್ಹೀಡ್ ಮಾರ್ಟಿನ್…!

ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ದೈತ್ಯ ಲಾಕ್ಹೀಡ್ ಮಾರ್ಟಿನ್ ಕಂಪನಿ ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ ಕಾರ್ಯನಿರ್ವಹಿಸುವ ಯುದ್ಧತಂತ್ರದ ತರಬೇತಿ ವಿಮಾನ ಹಾರಾಟದ ಯಶಸ್ವಿ ಪರೀಕ್ಷೆ ನಡೆಸಿದೆ.
ಕಂಪನಿಯ ಪ್ರಕಾರ ಇದೇ ಮೊದಲ ಬಾರಿಗೆ ಯುದ್ಧತಂತ್ರದ ವಿಮಾನ ಹಾರಾಟ ನಡೆಸಲು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ. ಇದು ವೇರಿಯಬಲ್ ಇನ್-ಫ್ಲೈಟ್ ಸಿಮ್ಯುಲೇಶನ್ ಟೆಸ್ಟ್ ಏರ್‌ಕ್ರಾಫ್ಟ್ ಅನ್ನು ನಿರ್ವಹಿಸಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಕೃತಕ ಬುದ್ಧಿಮತ್ತೆ (Artificial Intelligence) ಉಪಯೋಗಿಸಿ ಇತ್ತೀಚೆಗೆ 17 ಗಂಟೆಗಳಿಗೂ ಹೆಚ್ಚು ಕಾಲ ಯುದ್ಧತಂತ್ರದ ತರಬೇತಿ ವಿಮಾನದ ಯಶಸ್ವಿ ಹಾರಾಟ ಮಾಡಲಾಗಿದೆ ಎಂದು ಏರೋಸ್ಪೇಸ್ ಕಂಪನಿ ಲಾಕ್ಹೀಡ್ ಮಾರ್ಟಿನ್ ಸೋಮವಾರ ಬಹಿರಂಗಪಡಿಸಿದೆ.
ಕೃತಕ ಬುದ್ಧಿಮತ್ತೆ ಉಪಯೋಗಿಸಿ ಕ್ಯಾಲಿಫೋರ್ನಿಯಾದ ಕೆರ್ನ್ ಕೌಂಟಿಯಲ್ಲಿರುವ ಎಡ್ವರ್ಡ್ಸ್ ಏರ್ ಫೋರ್ಸ್ ಬೇಸ್‌ನಲ್ಲಿರುವ ಅಮೆರಿಕ ಏರ್ ಫೋರ್ಸ್ ಟೆಸ್ಟ್ ಪೈಲಟ್ ಸ್ಕೂಲ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆದ ದೊಡ್ಡ ತರಬೇತಿ ಪ್ರಕ್ರಿಯೆಯ ಭಾಗವಾಗಿ ಯುದ್ಧವಿಮಾನವನ್ನು ಹಾರಿಸಲಾಯಿತು. ಲಾಕ್‌ಹೀಡ್ ಮಾರ್ಟಿನ್‌ನ ಸ್ಕಂಕ್‌ವರ್ಕ್ಸ್ ವಿಭಾಗವು ಅಮೆರಿಕದ ಏರ್ ಫೋರ್ಸ್ ಮತ್ತು ಕ್ಯಾಲ್ಸ್‌ಪಾನ್ ಕಾರ್ಪೊರೇಶನ್‌ನ ಸಹಯೋಗದೊಂದಿಗೆ ಯುದ್ಧತಂತ್ರ ವಿಮಾನ ವಿಸ್ಟಾ (VISTAವನ್ನು ಅಭಿವೃದ್ಧಿಪಡಿಸಿತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ವಿಸ್ಟಾ (VISTA)X 62-A ನ ವೈಶಿಷ್ಟ್ಯಗಳು
VISTA X-62A ಮಾನವರಹಿತ ವಿಮಾನವನ್ನು (UAV) ಕಣ್ಗಾವಲು, ವಿಚಕ್ಷಣೆ, ಮ್ಯಾಪಿಂಗ್ ಮತ್ತು ವೈಜ್ಞಾನಿಕ ಸಂಶೋಧನೆ ಸೇರಿದಂತೆ ವ್ಯಾಪಕ ಶ್ರೇಣಿಯ ಅಪ್ಲಿಕೇಶನ್‌ಗಳಿಗೆ ಹೆಚ್ಚು ಪರಿಣಾಮಕಾರಿ ಮತ್ತು ಬಹುಮುಖ ವೇದಿಕೆಯಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ.
ಮನವ ರಹಿತ ಯುದ್ಧತಂತ್ರ ವಿಮಾನದ ಹಾರಾಟ ಸಾಮರ್ಥ್ಯಗಳು: ಜಿಪಿಎಸ್‌ (GPS) ಮತ್ತು ಆಟೋಪೈಲಟ್ ಸಿಸ್ಟಮ್ ಸೇರಿದಂತೆ,VISTA X-62A ಸುಧಾರಿತ ಏವಿಯಾನಿಕ್ಸ್ ಮತ್ತು ಸಂವೇದಕಗಳನ್ನು ಹೊಂದಿದ್ದು, ಇದು ಮಾನವ ರಹಿತ ಹಾರಾಟಕ್ಕೆ ಮತ್ತು ವ್ಯಾಪಕ ಶ್ರೇಣಿಯ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ: UAV ಉನ್ನತ-ಗುಣಮಟ್ಟದ ಚಿತ್ರಗಳನ್ನು ಮತ್ತು ವೀಡಿಯೊವನ್ನು ಸೆರೆಹಿಡಿಯಲು ಅನುಮತಿಸುವ ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾವನ್ನು ಹೊಂದಿದೆ. ಇದು ಕಣ್ಗಾವಲು, ವಿಚಕ್ಷಣೆ ಮತ್ತು ಮ್ಯಾಪಿಂಗ್ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ.

ಪೋರ್ಟಬಲ್ ವಿನ್ಯಾಸ: VISTA X-62A ಅನ್ನು ಹೆಚ್ಚು ಪೋರ್ಟಬಲ್ ಆಗಿ ವಿನ್ಯಾಸಗೊಳಿಸಲಾಗಿದೆ, ಕಾಂಪ್ಯಾಕ್ಟ್ ಗಾತ್ರ ಮತ್ತು ಹಗುರವಾಗಿರುವಂತೆ ನಿರ್ಮಾಣ ಮಾಡಲಾಗಿದ್ದು, ನಿಯೋಜಿಸಲು ಸುಲಭವಾಗುತ್ತದೆ.
VISTA X-62A ಅನ್ನು ಹೆಚ್ಚು ವೆಚ್ಚವಾಗದಂತೆ (Cost-Effective) ಮಾನವ ರಹಿತ ವಿಮಾನ (UAV) ವಿನ್ಯಾಸಗೊಳಿಸಲಾಗಿದೆ.
ಬಹುಮುಖಿ ವ್ಯವಸ್ಥೆ: ಯುದ್ಧತಂತ್ರ ವಿಮಾನದ ಬಹುಮುಖಿ ವ್ಯವಸ್ಥೆಯ ತಂತ್ರಜ್ಞಾನವು ವೈಜ್ಞಾನಿಕ ಸಂಶೋಧನೆ, ಪರಿಸರ ಮೇಲ್ವಿಚಾರಣೆ ಮತ್ತು ತುರ್ತು ಪ್ರತಿಕ್ರಿಯೆ ಸೇರಿದಂತೆ ವ್ಯಾಪಕ ಶ್ರೇಣಿಯ ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ಪ್ಲಾಟ್‌ಫಾರ್ಮ್‌ ಆಗಿದೆ.
ಕಂಪನಿ ಪ್ರಕಾರ, “ಇದು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ತರಬೇತಿ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಲಾಕ್‌ಹೀಡ್ ಮಾರ್ಟಿನ್ ಅಮೆರಿಕದ ಏರ್ ಫೋರ್ಸ್‌ಗಾಗಿ ಕೃತಕ ಬುದ್ಧಿಮತ್ತೆ (AI)ಯನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement