ಕರ್ನಾಟಕ, ತಮಿಳುನಾಡು, ಕೇರಳದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: 2022ರ ಅಕ್ಟೋಬರ್‌ನಲ್ಲಿ ನಡೆದ ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿನ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ದಾಳಿಗಳನ್ನು ನಡೆಸಲಾಯಿತು.
ಇಂದು, ಬುಧವಾರ ಬೆಳಿಗ್ಗೆ 6 ಗಂಟೆಗೆ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ, ಅದರಲ್ಲಿ 40 ಸ್ಥಳಗಳು ತಮಿಳುನಾಡಿನಲ್ಲಿವೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳು ಎನ್ಐಎ ಸ್ಕ್ಯಾನರ್ ಅಡಿಯಲ್ಲಿದ್ದಾರೆ.
ಕಳೆದ ವರ್ಷ ತಮಿಳುನಾಡಿನ ಕೊಯಮತ್ತೂರು ಮತ್ತು ಕರ್ನಾಟಕದ ಮಂಗಳೂರಿನಲ್ಲಿ ನಡೆದ ಸ್ಫೋಟಗಳಿಗೆ ಸಂಬಂಧಿಸಿದಂತೆ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣ
ಕಳೆದ ಅಕ್ಟೋಬರ್ 23 ರಂದು ಉಕ್ಕಡಂ ಪ್ರದೇಶದಲ್ಲಿ ಕಾರಿನಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಕಾರಿನೊಳಗೆ ಕುಳಿತಿದ್ದ ಜಮೇಶಾ ಮುಬಿನ್ ಸುಟ್ಟು ಕರಕಲಾಗಿದ್ದ. ಆತ ಕಾರಿನಲ್ಲಿ ದೇವಸ್ಥಾನದ ಬಳಿ ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಮತ್ತು ಆತ ಪೊಲೀಸ್ ಚೆಕ್ ಪೋಸ್ಟ್ ಅನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮುಬಿನ್, ಐಸಿಸ್ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಆತ್ಮಹತ್ಯಾ ದಾಳಿಯನ್ನು ನಡೆಸಲು ಮತ್ತು ನಿರ್ದಿಷ್ಟ ಧಾರ್ಮಿಕ ಸ್ಮಾರಕಗಳಿಗೆ ವ್ಯಾಪಕ ಹಾನಿ ಮಾಡಲು ಮತ್ತು ನಿರ್ದಿಷ್ಟ ವರ್ಗದ ಸಮುದಾಯದ ಜನರಲ್ಲಿ ಭಯಭೀತಿ ಸೃಷ್ಟಿಸುವ ಉದ್ದೇಶದಿಂದ ಇದನ್ನು ಯೋಜಿಸಿದ್ದ.
ಈ ಪ್ರಕರಣವನ್ನು ಆರಂಭದಲ್ಲಿ ಕೊಯಮತ್ತೂರಿನ ಉಕ್ಕಡಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು ಮತ್ತು ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎನ್‌ಐಎ ಅಕ್ಟೋಬರ್ 27 ರಂದು ಮರು ದಾಖಲಿಸಿಕೊಂಡಿತು.
ಸ್ಫೋಟದ ದಿನ, ತಾನು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೃತಪಟ್ಟ 29 ವರ್ಷದ ಮುಬಿನ್ ನಿವಾಸದಿಂದ ಪೊಟ್ಯಾಸಿಯಮ್ ನೈಟ್ರೇಟ್ ಸೇರಿದಂತೆ 75 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು ಸ್ಫೋಟಕಗಳು ಎಂದು ಶಂಕಿಸಲಾಗಿದೆ. ಅದು ಸ್ಫೋಟಗೊಂಡಾಗ ಕಾರನ್ನು ಸಹ ಸುಟ್ಟು ಹಾಕಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

ಶೋಧದ ಸಮಯದಲ್ಲಿ, ಶಂಕಿತರ ಮನೆಗಳಿಂದ ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೃತ ಜಮೇಶಾ ಮುಬಿನ್‌ನೊಂದಿಗೆ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಐಇಡಿ ಸೇರಿದಂತೆ ಸುಧಾರಿತ ಸ್ಫೋಟಕ ಸಾಧನಗಳ ತಯಾರಿಕೆಗೆ ವಿವಿಧ ರಾಸಾಯನಿಕಗಳು ಮತ್ತು ಇತರ ಪದಾರ್ಥಗಳನ್ನು ಸಂಗ್ರಹಿಸಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.

ಮಂಗಳೂರು ಆಟೊರಿಕ್ಷಾ ಸ್ಫೋಟ…
ನವೆಂಬರ್ 19 ರಂದು ಮಂಗಳೂರು ಆಟೋ-ರಿಕ್ಷಾ ಸ್ಫೋಟದ ಪ್ರಮುಖ ಶಂಕಿತ ಸೇರಿದಂತೆ ಇಬ್ಬರಿಗೆ ಗಾಯವಾದ ಘಟನೆಯನ್ನು ಎನ್‌ಐಎ ಡಿಸೆಂಬರ್‌ನಲ್ಲಿ ವಹಿಸಿಕೊಂಡಿತ್ತು.
ಮೊಹಮ್ಮದ್ ಶಾರೀಕ್ ಎಂಬಾತ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನ ಅಥವಾ ಐಇಡಿಯನ್ನು ಆಟೊ ರಿಕ್ಷಾದಲ್ಲಿ ಒಯ್ಯುತ್ತಿದ್ದಾಗ ಅದು ಸ್ಫೋಟಗೊಂಡಿತ್ತು. ಆಟೋದಲ್ಲಿ ಬ್ಯಾಟರಿ ಅಳವಡಿಸಿದ್ದ ಪ್ರೆಶರ್ ಕುಕ್ಕರ್ ಸುಟ್ಟಿರುವುದು ಪತ್ತೆಯಾಗಿದೆ. ಈ ಪ್ರಕರಣದ ಆರೋಪಿ ಮೊಹಮ್ಮದ್ ಶಾರೀಕ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು.
ಸ್ಫೋಟವು ಆಕಸ್ಮಿಕವಲ್ಲ ಆದರೆ “ಗಂಭೀರ ಹಾನಿ ಉಂಟುಮಾಡುವ ಉದ್ದೇಶದ ಭಯೋತ್ಪಾದಕ ಕೃತ್ಯ” ಎಂದು ಕರ್ನಾಟಕ ಪೊಲೀಸರು ಹೇಳಿದ್ದರು. ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರಗಾಮಿ ಘಟಕವನ್ನು ಸ್ಥಾಪಿಸುವ ಉದ್ದೇಶದಿಂದ ಶಾರೀಕ್ ನವೆಂಬರ್‌ನಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement