ಕೇರಳದ ದೇಗುಲಕ್ಕೆ ಬಂತು ರೋಬೋಟ್‌ ಆನೆ…! ಫೆಬ್ರವರಿ 26 ರಂದು ದೇವಸ್ಥಾನಕ್ಕೆ ಅರ್ಪಣೆ: ಇದರ ತೂಕ 800 ಕೆ.ಜಿ

ತ್ರಿಶೂರ್ : ಇದೇ ಮೊದಲ ಬಾರಿಗೆ, ಫೆಬ್ರವರಿ 26 ರಂದು ನಾದೈರುತಲ್ (ದೇವಾಲಯಗಳಲ್ಲಿ ದೇವರ ಮುಂದೆ ಆನೆಗಳನ್ನು ಅರ್ಪಿಸುವ ಆಚರಣೆ) ಸಮಾರಂಭಕ್ಕಾಗಿ ಇರಿಂಜಲಕುಡ ಬಳಿಯ ಶ್ರೀಕೃಷ್ಣ ದೇವಸ್ಥಾನದಲ್ಲಿ ರಾಮನ್‌ ಎಂಬ ರೋಬೋಟ್ ಆನೆ ಸಿದ್ಧವಾಗಿದೆ. ದೇವಸ್ಥಾನದ ಭಕ್ತ ಸಮೂಹದಿಂದ ಐದು ಮೋಟಾರುಗಳಲ್ಲಿ ಕಾರ್ಯನಿರ್ವಹಿಸುವ ರೋಬೋಟ್‌ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ.
ದೇವಾಲಯದ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವಲ್ಲಿ ಹೆಚ್ಚುತ್ತಿರುವ ವೆಚ್ಚಗಳು ಹಾಗೂ ಆನೆಗಳಿಂದ ಮನವನ ಮೇಲೆ ಹೆಚ್ಚುತ್ತಿರುವ ದಾಳಿಗಳು ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಬಳಿಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಾಲಯದಲ್ಲಿ ಇ-ಆನೆ ನಿರ್ಮಿಸಲು ಪ್ರೇರೇಪಿಸಿತು.
ಲೋಹ, ರಬ್ಬರ್ ಶೀಟ್‌ಗಳು ಮತ್ತು ಮೋಟಾರ್‌ಗಳನ್ನು ಬಳಸಿ ತಯಾರಿಸಲಾದ ಸುಮಾರು 11 ಅಡಿ ಎತ್ತರದ ಇ-ಆನೆ ತನ್ನ ತಲೆ, ಕಿವಿ ಮತ್ತು ಬಾಲವನ್ನು ಚಲಿಸುತ್ತದೆ. ಅದರ ಪಾದಗಳಿಗೆ ಚಕ್ರಗಳನ್ನು ಜೋಡಿಸಿ ಅದನ್ನು ಎಳೆಯುವ ಮೂಲಕ ಚಲಿಸುವಂತೆ ಮಾಡಬಹುದು. ನಾಲ್ಕು ಜನರು ಅದರ ಮೇಲೆ ಕುಳಿತುಕೊಳ್ಳಬಹುದು.
ಇ-ಆನೆಗೆ ಇರಿಂಜದಪ್ಪಿಲ್ಲಿ ರಾಮನ್ ಎಂದು ಹೆಸರಿಸಲಾಗಿದೆ, ಇದು ಕೇರಳದ ತೆಚಿಕೊಟ್ಟುಕಾವು ರಾಮಚಂದ್ರನ್ ಎಂಬ ಜನಪ್ರಿಯ ಆನೆಯನ್ನು ಹೋಲುತ್ತದೆ. ಇದು ಈಗಾಗಲೇ ಜನರನ್ನು ಆಕರ್ಷಿಸಲು ಪ್ರಾರಂಭಿಸಿದೆ.
“ದೇವಸ್ಥಾನದ ಆಚರಣೆಗಳಲ್ಲಿ ತೊಡಗಿರುವ ಆನೆಗಳಿಂದ ಜನರು ಕೊಲ್ಲಲ್ಪಟ್ಟ ಅನೇಕ ನಿದರ್ಶನಗಳ ಹೊರತಾಗಿಯೂ, ಅಭ್ಯಾಸವನ್ನು ಇನ್ನೂ ಮುಂದುವರೆಸಲಾಗಿದೆ. ಆದ್ದರಿಂದ ನಾವು ಬದಲಾವಣೆಯನ್ನು ತರಲು ನಿರ್ಧರಿಸಿದ್ದೇವೆ” ಎಂದು ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಯಾದ ರಾಜಕುಮಾರ ನಂಬೂದಿರಿ ಹೇಳಿದ್ದಾರೆ. ಆನೆಗಳನ್ನು ಬಾಡಿಗೆಗೆ ಪಡೆಯಲು ಲಕ್ಷಗಟ್ಟಲೆ ಖರ್ಚು ಮಾಡಬೇಕಾದ ಈ ಕಾಲದಲ್ಲಿ ರೋಬೋಟ್‌ಗಳನ್ನು ಆಯ್ಕೆ ಮಾಡುವುದು ತಪ್ಪಲ್ಲ ಎಂದು ಹೇಳುತ್ತಾರೆ.
ಇದು ಮೊದಲ ಇ-ಆನೆಯಾಗಿರಬಹುದು. ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ಆಚರಣೆಗೆ ಬಳಸುತ್ತಾರೆ. ಚಾಲಕುಡಿಯ ಸ್ಥಳೀಯರಾದ ಪ್ರಶಾಂತ, ಸ್ಯಾಂಟೋ, ಜಿನೇಶ ಮತ್ತು ರಾಬಿನ್ ಎಂಬ ನಾಲ್ವರು ಶಿಲ್ಪಿಗಳು ಇದನ್ನು ತಯಾರಿಸಿದ್ದಾರೆ. ‘ಮಾವುತ ಸೊಂಡಿಲಿನ ಚಲನವಲನವನ್ನು ನಿಯಂತ್ರಿಸುವ ರೀತಿಯಲ್ಲಿ ಆನೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು 11 ಅಡಿ ಎತ್ತರವಿದೆ. 800 ಕೆ.ಜಿ ತೂಕವಿದೆ. ಅದರ ಸೊಂಡಿಲ ಮೂಲಕವೂ ನೀರು ಸಿಂಪಡಿಸಬಹುದು ಎಂದು ಪ್ರಶಾಂತ ಹೇಳಿದ್ದಾರೆ. ಭಕ್ತರು ಕಾಣಿಕೆ ನೀಡುವ ರೋಬೋಟಿಕ್ ಆನೆಯ ನಿರ್ಮಾಣ ವೆಚ್ಚ 5 ಲಕ್ಷ ರೂ.ಗಳು ಎಂದು ಹೇಳಲಾಗಿದೆ. ಇದೇ ತಿಂಗಳ 26ರಂದು ಇರಿಂಜದಪ್ಪಿಲ್ಲಿ ರಾಮನ್‌ ಆನೆಯ ಪ್ರತಿಷ್ಠಾಪನೆ ಇರಿಂಜಲಕುಡ ಸಮೀಪದ ಕಲ್ಲೇತುಂಕಾರ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.

ಪ್ರಮುಖ ಸುದ್ದಿ :-   ಅದೃಷ್ಟ ಅಂದ್ರೆ ಇದೇ ಅಲ್ವಾ | ಕೇವಲ 2 ಮೀನುಗಳ ಮಾರಾಟದಿಂದ ಲಕ್ಷಾಧಿಪತಿಯಾದ ಮೀನುಗಾರ..! ಮೀನಿನ ಬೆಲೆ ಕೇಳಿದ್ರೆ ಹೌಹಾರಬೇಕು...!!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement