ಜೋಯಾಲುಕ್ಕಾಸ್‌ ನ ₹ 305 ಕೋಟಿ ಮೌಲ್ಯದ ಅಸ್ತಿ ಮುಟ್ಟುಗೋಲು ಹಾಕಿಕೊಂಡ ಇ.ಡಿ.

ನವದೆಹಲಿ: ತನಿಖಾ ಸಂಸ್ಥೆಯು ಕಂಪನಿಯ ಐದು ಮಳಿಗೆಗಳ ಮೇಲೆ ದಾಳಿ ನಡೆಸಿದ ಕೆಲ ದಿನಗಳ ನಂತರ ಜಾರಿ ನಿರ್ದೇಶನಾಲಯವು ಶುಕ್ರವಾರ ಜನಪ್ರಿಯ ಆಭರಣ ಕಂಪನಿ ಜೋಯಾಲುಕ್ಕಾಸ್‌ನ ₹ 305.84 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಜೋಯಾಲುಕ್ಕಾಸ್‌ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಇ.ಡಿ. ಆರೋಪಿಸಿದೆ.
ಈ ಪ್ರಕರಣವು ಹವಾಲಾ ಚಾನೆಲ್‌ಗಳ ಮೂಲಕ ಭಾರತದಿಂದ ದುಬೈಗೆ ಭಾರಿ ಮೊತ್ತದ ಹಣವನ್ನು ವರ್ಗಾಯಿಸುವುದಕ್ಕೆ ಸಂಬಂಧಿಸಿದೆ ಮತ್ತು ನಂತರ ದುಬೈನ ಜೋಯಾಲುಕ್ಕಾಸ್ ಜ್ಯುವೆಲ್ಲರಿ ಎಲ್‌ಎಲ್‌ಸಿಯಲ್ಲಿ ಹೂಡಿಕೆ ಮಾಡಿದೆ ಎಂದು ಇ.ಡಿ.ಆರೋಪಿಸಿದೆ.
ಕಂಪನಿಯು ಜಾಯ್ ಅಲುಕ್ಕಾಸ್ ವರ್ಗೀಸ್ ಅವರ 100 ಪ್ರತಿಶತ ಒಡೆತನದಲ್ಲಿದೆ. ಮಂಗಳವಾರ, ಕಂಪನಿಯು ತನ್ನ ₹ 2,300 ಕೋಟಿ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ IPO ಅನ್ನು ಹಿಂತೆಗೆದುಕೊಂಡಿದೆ.
ತ್ರಿಶೂರ್‌ನ ಶೋಭಾ ನಗರದಲ್ಲಿ ನಿವೇಶನ ಮತ್ತು ವಸತಿ ಕಟ್ಟಡ ಒಳಗೊಂಡ ₹ 81.54 ಕೋಟಿ ಮೌಲ್ಯದ 33 ಸ್ಥಿರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ₹ 91.22 ಲಕ್ಷ ಮೌಲ್ಯದ ಮೂರು ಬ್ಯಾಂಕ್ ಖಾತೆಗಳು, ₹ 5.58 ಕೋಟಿ ಮೊತ್ತದ ಮೂರು ಸ್ಥಿರ ಠೇವಣಿಗಳು ಮತ್ತು 217.81 ಕೋಟಿ ಮೌಲ್ಯದ ಜೋಯಾಲುಕ್ಕಾಸ್ ಷೇರುಗಳನ್ನು ಸಹ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಕಂಪನಿಯು ತನ್ನ IPO ದಾಖಲೆಗಳನ್ನು ” ಮಾರುಕಟ್ಟೆಯ ಪರಿಸ್ಥಿತಿಗಳಿಗೆ ಒಳಪಟ್ಟು” ಶೀಘ್ರವಾಗಿ ರಿಫೈಲ್ ಮಾಡಲು ಯೋಜಿಸಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಬೇಬಿ ಜಾರ್ಜ್ ಮಂಗಳವಾರ ರಾಯಿಟರ್ಸ್‌ಗೆ ಹೆಚ್ಚಿನ ವಿವರಗಳನ್ನು ನೀಡದೆ ಹೇಳಿದ್ದಾರೆ.
ಮುಖ್ಯವಾಗಿ ದಕ್ಷಿಣ ಭಾರತದ ಮೇಲೆ ಕೇಂದ್ರೀಕರಿಸುವ ಆಭರಣ ವ್ಯಾಪಾರಿ ಕಂಪನಿ ಸರಿಸುಮಾರು 68 ನಗರಗಳಲ್ಲಿ ಶೋರೂಂಗಳನ್ನು ನಿರ್ವಹಿಸುತ್ತದೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement