ಬಿಜೆಪಿ ಮುಖಂಡ-ಸರ್ಕಾರಿ ಅಧಿಕಾರಿ ನಡುವೆ ಜಟಾಪಟಿ, ಹೊಡೆದಾಟ : ವೀಡಿಯೊ ವೈರಲ್‌

ಬಿಜೆಪಿ ನಾಯಕ ಮತ್ತು ಸರ್ಕಾರಿ ಅಧಿಕಾರಿಯೊಬ್ಬರು ವಾಗ್ವಾದ ನಡೆಸಿದನಂತರ ಹೊಡೆದಾಡಿಕೊಂಡ ವೀಡಿಯೊ ಹೊರಬಿದ್ದಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಎರಡು ದಿನಗಳ ಕಿಸಾನ್ ಮೇಳದಲ್ಲಿ ನಡೆದ ಘಟನೆಯ ವೀಡಿಯೊ ಇದು ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಎಲೆಕೋಸು (ಕ್ಯಾಬೀಜ್‌) ಹೊರಗಿನಿಂದ ತರಲಾಗಿದೆ ಎಂಬ ಬಿಜೆಪಿ ನಾಯಕ ಆರೋಪಿಸಿದ ನಂತರ ವಾಗ್ವಾದ ನಡೆದಿದೆ.
ಕಿಸಾನ್ ಮೇಳಕ್ಕೆ ತಂದಿರುವ ಎಲೆಕೋಸು ಸ್ಥಳೀಯವಾಗಿ ಬೆಳೆದಿದ್ದಲ್ಲ ಎಂದು ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಹೇಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಕಿಸಾನ್ ಮೇಳದಲ್ಲಿ ಕುಳಿತಿರುವ ರೈತರು ರೈತರಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ನಾಯಕ ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡಿದ ನಂತರ, ಸರ್ಕಾರಿ ಅಧಿಕಾರಿಯೊಬ್ಬರು ಅವರನ್ನು ಪ್ರಶ್ನಿಸಲು ಆಗಮಿಸಿದ್ದಾರೆ. ಆಗ ಬಿಜೆಪಿ ಮುಖಂಡ ಮತ್ತು ಸರ್ಕಾರಿ ಅಧಿಕಾರಿಯ ನಡುವಿನ ವಾಗ್ವಾದ ಉಲ್ಬಣಗೊಂಡಿತು ಮತ್ತು ಮತ್ತೊಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ಆದರೂ ವಾಗ್ವಾದ ನಡೆದು ಬಿಜೆಪಿ ಮುಖಂಡ ಪ್ಲಾಸ್ಟಿಕ್ ಕುರ್ಚಿಯನ್ನು ಎತ್ತಿಕೊಂಡು ಅಧಿಕಾರಿಗೆ ಹೊಡೆದಿದ್ದಾರೆ. ಬಿಜೆಪಿ ನಾಯಕ ಮತ್ತು ಸರ್ಕಾರಿ ಅಧಿಕಾರಿ ಪರಸ್ಪರ ಹೊಡೆದಾಡಿಕೊಂಡಿದ್ದರಿಂದ ಜಗಳ ಮತ್ತಷ್ಟು ಉಲ್ಬಣಗೊಂಡಿತು.
ಹೋರಾಟವು ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಹಲವಾರು ಜನರು ಮಧ್ಯಪ್ರವೇಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಇಬ್ಬರ ನಡುವಿನ ಜಗಳ ಶಾಂತವಾದ ನಂತರ, ಬಿಜೆಪಿ ನಾಯಕ ಪಂಕಜ್ ದೀಕ್ಷಿತ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ದಲ್ಲಾಳಿಗಳನ್ನು ಪ್ರಶ್ನಿಸಿದ್ದಕ್ಕಾಗಿ ಸರ್ಕಾರಿ ಅಧಿಕಾರಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೇ ಅವರು ಮುಂದುವರಿಸಿದರೆ ತಾನು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಎರಡು ದಿನಗಳ ಕಿಸಾನ್ ಮೇಳವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷೆ ರಾಜರಾಣಿ ರಾವತ್ ಉದ್ಘಾಟಿಸಿದರು.
ಬಿಜೆಪಿ ಮುಖಂಡನಿಂದ ಹಲ್ಲೆಗೊಳಗಾದ ಸರ್ಕಾರಿ ಅಧಿಕಾರಿ ಶೈಲೇಶಕುಮಾರ ಸಿಂಗ್ ತನಗೆ ರಕ್ಷಣೆ ನೀಡುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement