ಮಾಸ್ಕೋ: ರಷ್ಯಾದ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಸಹಾಯ ಮಾಡಿದ ರಷ್ಯಾದ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರು ಗುರುವಾರ ಮಾಸ್ಕೋದ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ರಷ್ಯಾದ ಮಾಧ್ಯಮ ವರದಿಗಳು ಶನಿವಾರ ತಿಳಿಸಿವೆ.
ಬೊಟಿಕೋವ್ (47) ಅವರು ಗಮಾಲೆಯಾ ರಾಷ್ಟ್ರೀಯ ಪರಿಸರ ವಿಜ್ಞಾನ ಮತ್ತು ಗಣಿತ ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಷ್ಯಾದ ಸುದ್ದಿ ಸಂಸ್ಥೆ ತಾಸ್ (TASS) ರಷ್ಯಾ ಒಕ್ಕೂಟದ ತನಿಖಾ ಸಮಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಬೋಟಿಕೋವ್ ಅವರ ದೇಹ ಪತ್ತೆಯಾದ ಕೆಲವೇ ಗಂಟೆಗಳ ನಂತರ ಶಂಕಿತನನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ತನಿಖಾಧಿಕಾರಿಗಳ ಪ್ರಕಾರ, 29 ವರ್ಷದ ಶಂಕಿತನು ವಿಚಾರಣೆಯ ಸಮಯದಲ್ಲಿ ಬೊಟಿಕೋವ್ ಅವರನ್ನು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಕೊಲೆಯು ಕೌಟುಂಬಿಕ ಅಪರಾಧ ಮತ್ತು ಸಂಘರ್ಷದ ಪರಿಣಾಮ ನಡೆದಿದೆ ಎಂದು ಕಾನೂನು ಜಾರಿ ಸಂಸ್ಥೆಗಳು ಹೇಳಿವೆ ಎಂದು ವರದಿ ಹೇಳಿದೆ. ವೈರಾಲಜಿಸ್ಟ್‌ನ ಸಾವನ್ನು ಕೊಲೆ ಎಂದು ತನಿಖೆ ಮಾಡಲಾಗುತ್ತಿದೆ ಎಂದು ರಷ್ಯಾದಲ್ಲಿ ತನಿಖಾ ಪ್ರಾಧಿಕಾರ ಹೇಳಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
“ದಾಳಿಕೋರನ ಸ್ಥಳವನ್ನು ಅಲ್ಪಾವಧಿಯಲ್ಲಿ ಪತ್ತೆ ಮಾಡಲಾಗಿದೆ. ವಿಚಾರಣೆಯ ಸಮಯದಲ್ಲಿ, ಆತ ತಪ್ಪನ್ನು ಒಪ್ಪಿಕೊಂಡ ಮತ್ತು ಕೊಲೆ ಆರೋಪಿ ಹಿಂದೆಯೂ ಅಪರಾಧ ಎಸಗಿರುವ ದಾಖಲೆ ಹೊಂದಿದ್ದಾನೆ, ಗಂಭೀರ ಅಪರಾಧ ಮಾಡಿದ ಆರೋಪದ ಮೇಲೆ ವಿಚಾರಣೆಗೆ ಹಾಜರಾಗಿದ್ದ ಎಂದು ತನಿಖಾ ಸಮಿತಿ ಹೇಳಿದೆ.
ವೈರಾಲಜಿಸ್ಟ್‌ಗೆ 2021ರಲ್ಲಿ ಕೋವಿಡ್ ಲಸಿಕೆಗಾಗಿ ಮಾಡಿದ ಕೆಲಸಕ್ಕಾಗಿ ಆರ್ಡರ್ ಆಫ್ ಮೆರಿಟ್ ಫಾರ್ ಫಾದರ್‌ಲ್ಯಾಂಡ್ ಪ್ರಶಸ್ತಿಯೊಂದಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಗೌರವಿಸಿದ್ದರು. 2020 ರಲ್ಲಿ ಸ್ಪುಟ್ನಿಕ್ ವಿ. ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು ಎಂದು ವರದಿಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ