ನವದೆಹಲಿ : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಕಳೆದ ಮೂರು ದಿನಗಳಲ್ಲಿ ಒಂದೇ ನಗರದಲ್ಲಿ 40 ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಿಂದ ಲಕ್ಷಾಂತರ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ. ಈ ಗ್ರಾಹಕರಿಗೆ ತಮ್ಮ ಕೆವೈಸಿ ಮತ್ತು ಪ್ಯಾನ್ ವಿವರಗಳನ್ನ ನವೀಕರಿಸುವಂತೆ ಕೋರಿ ಲಿಂಕ್ ಕಳುಹಿಸಿದ್ದನ್ನು ಕ್ಲಿಕ್ ಮಾಡಿದ ನಂತರ ಜನರು ಹಣ ಕಳೆದುಕೊಂಡಿದ್ದಾರೆ.
ಬ್ಯಾಂಕ್ ಗ್ರಾಹಕರು ತಮ್ಮ ಗುರುತನ್ನ ಪರಿಶೀಲಿಸಲು ನೋ ಯುವರ್ ಕಸ್ಟಮರ್ (ಕೆವೈಸಿ) ಪ್ರಕ್ರಿಯೆ ಕಡ್ಡಾಯವಾಗಿದೆ. ಆದರೆ ಬ್ಯಾಂಕ್ ಗ್ರಾಹಕರ ಅಂತಹ ಗೌಪ್ಯ ವಿವರಗಳನ್ನು ಕೇಳುವ ಮೊಬೈಲ್ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಹಾಗೂ ಅಂತಹ ಮೆಸೆಜ್ ಅನ್ನು ನಂಬದಂತೆ ಮುಂಬೈ ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಗ್ರಾಹಕರನ್ನು ಹೇಗೆ ಮೋಸಗೊಳಿಸಲಾಗುತ್ತಿದೆ…?
ಈ ಖಾತೆದಾರರಿಗೆ ತಮ್ಮ ಕೆವೈಸಿ ಮತ್ತು ಪ್ಯಾನ್ ವಿವರಗಳನ್ನ ನವೀಕರಿಸಬೇಕು ಎಂದು ಕೋರಿ ಬ್ಯಾಂಕ್ ಹೆಸರಿನಲ್ಲಿ ಲಿಂಕ್ ಕಳುಹಿಸಲಾಗಿದೆ. ಈ ಲಿಂಕ್‌ಗಳನ್ನು ಬ್ಯಾಂಕಿನವರು ಕಳುಹಿಸಿದ್ದಲ್ಲ, ಬದಲಾಗಿ ಮೋಸ ಮಾಡುವವರು ಕಳುಹಿಸಿದ್ದು. ಅದು ತಮ್ಮ ನಕಲಿ ವೆಬ್‌ಸೈಟಿಗೆ ನಿರ್ದೇಶಿಸುತ್ತವೆ, ಅಲ್ಲಿ ಅವರ ಗ್ರಾಹಕ ಐಡಿ, ಪಾಸ್ವರ್ಡ್ ಮತ್ತು ಕೆಲವು ಗೌಪ್ಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ಹಾಗೆ ಮಾಡಿದ ತಕ್ಷಣವೇ ನಮಗೆ ಗೊತ್ತಿಲ್ಲದಂತೆ ನಮ್ಮ ಖಾತೆಯಿಂದ ಹಣ ಖಾಲಿಯಾಗಿ ಇಂತಹ ಸೈಬರ್ ವಂಚಕರ ಪಾಲಾಗುತ್ತದೆ. ವಂಚಕರಿಂದ ಮೋಸಕ್ಕೊಳಗಾದ 40 ಗ್ರಾಹಕರ ಪಟ್ಟಿಯಲ್ಲಿ ಟಿವಿ ನಟಿ ಶ್ವೇತಾ ಮೆಮನ್ ಕೂಡ ಇದ್ದರು. ನಕಲಿ ಪಠ್ಯ ಸಂದೇಶದ ಲಿಂಕ್ ಕ್ಲಿಕ್ ಮಾಡಿದ್ದಾಗಿ ಶ್ವೇತಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಲಿಂಕ್ ಪೋರ್ಟಲ್‌ಗೆ ಪ್ರವೇಶುವಂತೆ ನಿರ್ದೇಶಿಸಿದೆ, ಅದರಂತೆ, ಅಲ್ಲಿ ಅವರು ತನ್ನ ಗ್ರಾಹಕ ಐಡಿ, ಪಾಸ್ವರ್ಡ್ ಮತ್ತು ಒಟಿಪಿಯನ್ನ ನಮೂದಿಸಿದ್ದಾರೆ. ನಂತರ ಬ್ಯಾಂಕಿನ ಉದ್ಯೋಗಿ ಎಂದು ನಟಿಸುವ ಮಹಿಳೆಯಿಂದ ಕರೆ ಬಂದಿದ್ದು, ತನ್ನ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ತಿಳಿಸುವಂತೆ ಕೇಳಿದ್ದಾರೆ. ಅವರು ಹೇಳಿದ ತಕ್ಷಣವೇ ಅವರ ಬ್ಯಾಂಕ್ ಖಾತೆಯಿಂದ 57,636 ರೂ.ಗಳ ಹಣ ಖಾಲಿಯಾಗಿದೆ. ಇಂತಹ 40 ಗ್ರಾಹಕರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ