ಉತ್ತರಾಧಿಕಾರ ಕಾನೂನಿನ ಲಿಂಗ ತಾರತಮ್ಯದ ವಿರುದ್ಧ ಹೋರಾಡಲು ವಿಶೇಷ ವಿವಾಹ ಕಾಯ್ದೆಯಡಿ ‘ಮರುಮದುವೆ’ಯಾಗುತ್ತಿರುವ ಮುಸ್ಲಿಂ ದಂಪತಿ

ಕಾಸರಗೋಡು (ಕೇರಳ) : ಕೇರಳದ ಕಾಸರಗೋಡು ಜಿಲ್ಲೆಯ ಮುಸ್ಲಿಂ ದಂಪತಿ ತಮ್ಮ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ಮತ್ತು ಮುಸ್ಲಿಂ ಉತ್ತರಾಧಿಕಾರ ಕಾನೂನುಗಳಲ್ಲಿ ಲಿಂಗ ಸಮಾನತೆಗಾಗಿ ಬಲವಾದ ಸಂದೇಶ ಕಳುಹಿಸಲು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮರುಮದುವೆ ಮಾಡಲು ಯೋಜಿಸಿದ್ದಕ್ಕಾಗಿ ಈಗ ಸುದ್ದಿಯಲ್ಲಿದ್ದಾರೆ.
ಶುಕ್ಕೂರ್‌ ದಂಪತಿ ಮುಸ್ಲಿಂ ಪಿತ್ರಾರ್ಜಿತ ಕಾನೂನುಗಳಲ್ಲಿ ಹೇರಲಾದ ಕೆಲವು ಷರತ್ತುಗಳಿಂದಾಗಿ ತಮ್ಮ ಮದುವೆಯನ್ನು ಮರು-ನೋಂದಣಿ ಮಾಡಲು ವಿಶೇಷ ದಾರಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ. ವಕೀಲರು ಮತ್ತು ನಟರಾದ ಸಿ ಶುಕ್ಕೂರ್ ಮತ್ತು ಅವರ ಪತ್ನಿ, ಮಲಯಾಳಂ ವಿಶ್ವವಿದ್ಯಾನಿಲಯದ ಮಾಜಿ ಪ್ರೊ ವೈಸ್ ಚಾನ್ಸಲರ್ ಶೀನಾ ಅವರು ಫೋರಮ್‌ ಫೋರ್‌ ಮುಸ್ಲಿಂ ವೂಮೆನ್‌ʼಸ್‌ ಜೆಂಡರ್‌ ಜಸ್ಟೀಸ್‌ (Forum for Muslim Women’s Gender Justice) ಅಭಿಯಾನದ ಸಕ್ರಿಯ ಬೆಂಬಲಿಗರಾಗಿದ್ದಾರೆ, ಇದು ಮುಸ್ಲಿಂ ಉತ್ತರಾಧಿಕಾರ ಕಾನೂನಿನ ( Inheritance Law) ಸುಧಾರಣೆಗಾಗಿ ಕೆಲಸ ಮಾಡುತ್ತದೆ. ‘ನನ್ನ ತಾನ್ ಕೇಸ್ ಕೊಡು’ (ನಂತರ ನನ್ನ ಮೇಲೆ ಮೊಕದ್ದಮೆ ಹೂಡಿ) ಚಿತ್ರದಲ್ಲಿ ವಕೀಲರಾಗಿ ನಟಿಸಿ ಹೆಸರು ಪಡೆದ ಸಿ ಶುಕ್ಕೂರ್ ಪತ್ನಿ ಶೀನಾ ಅವರನ್ನು ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಮದುವೆಯಾಗಲಿದ್ದಾರೆ. ಅವರು 1994ರಲ್ಲಿ ನಿಕ್ಕಾ (ಮದುವೆ) ಮಾಡಿಕೊಂಡಿದ್ದರು.
ಮುಸ್ಲಿಂ ಪಿತ್ರಾರ್ಜಿತ ಕಾನೂನು ಪ್ರಕಾರ ಹೆಣ್ಣುಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಭಾಗ ಮಾತ್ರ ಪಡೆಯುತ್ತಾರೆ ಮತ್ತು ದಂಪತಿಗೆ ಗಂಡು ಮಕ್ಕಳಿಲ್ಲದಿದ್ದರೆ ಉಳಿದ ಆಸ್ತಿಯ ಭಾಗ ಅವರ ಸಹೋದರರಿಗೆ ಹೋಗುತ್ತದೆ. ಮದುವೆಯಾಗಿ ಈಗ 29 ವರ್ಷಗಳಾಗಿರುವ ದಂಪತಿ, ವಿಶೇಷ ವಿವಾಹ ಕಾಯ್ದೆ (ಎಸ್‌ಎಂಎ) ಅಡಿಯಲ್ಲಿ ತಮ್ಮ ಮದುವೆ ಮರು-ನೋಂದಣಿ ಮಾಡುವ ಮೂಲಕ ಈ ಷರತ್ತುಗಳನ್ನು ಬದಲಾಯಿಸುವ ಭರವಸೆ ಹೊಂದಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಶುಕ್ಕೂರ್ ಅವರು, ಈ ಹಿಂದೆ ತನಗೆ ಸಾವಿನ ಸಮೀಪ ಹೋದ (ಅಪಘಾತ) ಎರಡು ಅನುಭವಗಳಾಗಿವೆ. ಅದು ತಮ್ಮ ಹೆಣ್ಣುಮಕ್ಕಳಿಗಾಗಿ ತಾವು ಏನು ಬಿಟ್ಟು ಹೋಗುತ್ತಿದ್ದೇವೆ ಮತ್ತು ತಮ್ಮ ಎಲ್ಲಾ ಉಳಿತಾಯ ಮತ್ತು ಆಸ್ತಿಯನ್ನು ತಮ್ಮ ಹೆಣ್ಣುಮಕ್ಕಳು ಪಡೆದುಕೊಳ್ಳುತ್ತಾರೆಯೇ ಎಂದು ಯೋಚಿಸಲು ಪ್ರೇರೇಪಿಸಿತು ಎಂದು ಬರೆದಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ದೋಷಿ ಜನ ಪ್ರತಿನಿಧಿಗಳನ್ನು ಅನರ್ಹಗೊಳಿಸುವ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3) ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ

1937ರ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯ್ದೆ ಮತ್ತು ನ್ಯಾಯಾಲಯಗಳು ತೆಗೆದುಕೊಂಡ ನಿಲುವಿನ ಪ್ರಕಾರ, ತಂದೆಯ ಆಸ್ತಿಯಲ್ಲಿ ಮೂರನೇ ಎರಡರಷ್ಟು ಭಾಗ ಮಾತ್ರ ಹೆಣ್ಣುಮಕ್ಕಳಿಗೆ ಹೋಗುತ್ತದೆ ಮತ್ತು ಉಳಿದವು ಅವರಿಗೆ ಗಂಡು ಸಂತತಿ ಇಲ್ಲದಿದ್ದರೆ ಅವರ ಸಹೋದರರಿಗೆ ಹೋಗುತ್ತದೆ. ಇದಲ್ಲದೆ, ಷರಿಯಾ ಕಾನೂನಿನ ಅಡಿಯಲ್ಲಿ, ಉಯಿಲು (ವಿಲ್‌) ಬರೆಯುವುದಕ್ಕೆ ಅನುಮತಿ ಇಲ್ಲ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಮ್ಮ ಸಂವಿಧಾನವು ಸಮಾನತೆಯ ಹಕ್ಕನ್ನು ನೀಡುತ್ತಿರುವಾಗ, ಇಸ್ಲಾಂ ಧರ್ಮವನ್ನು ಆಚರಿಸುವವರ ಮಕ್ಕಳು ಈ ಲಿಂಗ ತಾರತಮ್ಯ ಎದುರಿಸಬೇಕಾಗಿರುವುದು ದುರದೃಷ್ಟಕರ. ನಮ್ಮಂತಹ ಸಾವಿರಾರು ಮುಸ್ಲಿಂ ಪೋಷಕರ ಕಳವಳಕ್ಕೆ ಪರಿಹಾರವೇನು? ಇದೀಗ, ವಿಶೇಷ ವಿವಾಹ ಕಾಯಿದೆ 1954 ರ ಅಡಿಯಲ್ಲಿ ನಮ್ಮ ವಿವಾಹವನ್ನು ನೋಂದಾಯಿಸುವುದು ನಮಗೆ ಇರುವ ಏಕೈಕ ಆಯ್ಕೆಯಾಗಿದೆ. ಮಾರ್ಚ್ 8 ರಂದು ಮಹಿಳಾ ದಿನದಂದು, ನಾವು ನಮ್ಮ ವಿವಾಹವನ್ನು ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಹೊಸದುರ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸುತ್ತೇವೆ ಎಂದು ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಮರುಮದುವೆಯಾಗುತ್ತಿರುವುದು ಯಾರನ್ನಾದರೂ ಅಥವಾ ಯಾವುದನ್ನಾದರೂ ಸವಾಲು ಮಾಡಲು ಅಥವಾ ಧಿಕ್ಕರಿಸಲು ಅಲ್ಲ ಎಂದು ಶುಕ್ಕೂರ್ ಸ್ಪಷ್ಟಪಡಿಸಿದ್ದಾರೆ. “ನಾವು ಕೇವಲ ಮುಸ್ಲಿಂ ಕಾನೂನಿನಡಿ ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾದ ವ್ಯವಸ್ಥೆಯ ವಿರುದ್ಧ ಸಂವಿಧಾನದ ಅಡಿಯಲ್ಲಿ ಆಶ್ರಯ ಪಡೆಯುತ್ತಿದ್ದೇವೆ. ವಿಶೇಷ ವಿವಾಹ ಕಾಯಿದೆಯ ಮೂಲಕ ಮದುವೆಯಾಗುವವರಿಗೆ ಮುಸ್ಲಿಂ ವೈಯಕ್ತಿಕ ಕಾನೂನು ಪರಿಣಾಮ ಬೀರುವುದಿಲ್ಲ ಎಂಬ ಸಾಧ್ಯತೆಯನ್ನು ಮಾತ್ರ ನಾವು ಅನ್ವೇಷಿಸುತ್ತಿದ್ದೇವೆ. ಶೀನಾ ಮತ್ತು ನಾನು ನಮ್ಮ ಮಕ್ಕಳಿಗಾಗಿ ಮರುಮದುವೆಯಾಗುತ್ತಿದ್ದೇವೆ” ಎಂದು ಅವರು ಬರೆದಿದ್ದಾರೆ.
ಶುಕ್ಕೂರ್ ಅವರ ಪ್ರಕಾರ, ಈ ಸಂಕಟದಿಂದ ಹೊರಬರುವ ಏಕೈಕ ಮಾರ್ಗವೆಂದರೆ ವಿಶೇಷ ವಿವಾಹ ಕಾಯ್ದೆ (SMA) ಅಡಿಯಲ್ಲಿ ಮದುವೆಯಾಗುವುದು. ಹಾಗಾಗಿ ಅವರು ತಮ್ಮ ಈ ನಿರ್ಧಾರವು ಮುಸ್ಲಿಂ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಲಿಂಗ ತಾರತಮ್ಯ ಕೊನೆಗಾಣಿಸಲು ಮತ್ತು ಹೆಣ್ಣು ಮಕ್ಕಳ ಆತ್ಮ ವಿಶ್ವಾಸ ಮತ್ತು ಘನತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ.
ಅಲ್ಲಾ ನಮ್ಮ ಹೆಣ್ಣುಮಕ್ಕಳ ಆತ್ಮ ವಿಶ್ವಾಸ ಮತ್ತು ಘನತೆಯನ್ನು ಹೆಚ್ಚಿಸಲಿ. ಅಲ್ಲಾ ಮತ್ತು ನಮ್ಮ ಸಂವಿಧಾನದ ಮುಂದೆ ಎಲ್ಲರೂ ಸಮಾನರು” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 6, 1994 ರಂದು ನಿಕಾಹ್ ಮಾಡಿಕೊಂಡ ಶುಕ್ಕೂರ್‌ ಹಾಗೂ ಶೀನಾ ದಂಪತಿ ಮಾರ್ಚ್ 8 ರಂದು ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಞಂಗಾಡ್‌ನಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ಹೆಣ್ಣುಮಕ್ಕಳ ಸಮ್ಮುಖದಲ್ಲಿ ಮರುಮದುವೆಯಾಗಲಿದ್ದಾರೆ ಎಂದು ಶುಕ್ಕೂರ್ ಅವರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಕೇಂದ್ರ ಸರ್ಕಾರಿ ನೌಕರರು-ಪಿಂಚಣಿದಾರರಿಗೆ ಶೇ.4ರಷ್ಟು ತುಟ್ಟಿ ಭತ್ಯೆ ಹೆಚ್ಚಳ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement