ಅಮೆರಿಕದಿಂದ ಬೆಂಗಳೂರಿಗೆ ಬಂದಿಳಿದ ನಾಸಾ-ಇಸ್ರೋದ ಭೂ ವೀಕ್ಷಣಾ ಉಪಗ್ರಹ ‘ನಿಸಾರ್ʼ : ಇಸ್ರೋಗೆ ಹಸ್ತಾಂತರ

ಬೆಂಗಳೂರು: ಬಾಹ್ಯಾಕಾಶ ಸಹಯೋಗದಲ್ಲಿ ಅಮೆರಿಕ-ಭಾರತ ಸಂಬಂಧಗಳನ್ನು ಬೆಸೆಯುವ ಪ್ರಮುಖ ಹೆಜ್ಜೆಯಾಗಿ, ನಾಸಾ-ಇಸ್ರೋ ಉಪಗ್ರಹವನ್ನು ಹೊತ್ತ ಅಮೆರಿಕದ ವಾಯುಪಡೆಯ ಸಾರಿಗೆ ವಿಮಾನವೊಂದು ಬುಧವಾರ (ಮಾರ್ಚ್‌ 8) ಬೆಂಗಳೂರಿಗೆ ಬಂದಿಳಿಯಿತು. . ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿದ ಭೂ ವೀಕ್ಷಣಾ ಉಪಗ್ರಹವಾದ NISAR ಅನ್ನು US ವಾಯುಪಡೆ ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಹಸ್ತಾಂತರಿಸಿದೆ.
C-17 ಸಾರಿಗೆ ವಿಮಾನವು ನಾಸಾ-ಇಸ್ರೋ (NASA-ISRO) ಸಿಂಥೆಟಿಕ್ ಅಪರ್ಚರ್ (NISAR) ಉಪಗ್ರಹದೊಂದಿಗೆ ಕ್ಯಾಲಿಫೋರ್ನಿಯಾದಿಂದ ಬೆಂಗಳೂರಿಗೆ ಬಂದಿಳಿಯಿತು.
ನಿಸಾರ್‌ (NISAR) ಉಪಗ್ರಹವು ಭೂಮಿಯ ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತದೆ, ಭೂ-ಮೇಲ್ಮೈ ಬದಲಾವಣೆಗಳ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯ ಮಾಡುತ್ತದೆ ಮತ್ತು ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು, ಸಮುದ್ರ ಮಟ್ಟ ಏರಿಕೆ ಮುಂತಾದ ನೈಸರ್ಗಿಕ ವಿಕೋಪಗಳ ಬಗ್ಗೆ ಎಚ್ಚರಿಕೆ ನೀಡಲಿದೆ.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹಿಮಾಲಯ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಹಿಮನದಿಗಳ ಮೇಲೆ ನಿಗಾ ಇಡಲು ಉಪಗ್ರಹವನ್ನು ಬಳಸಲಿದೆ. ಎಸ್‌ಯುವಿ(SUV) ಗಾತ್ರದ ಉಪಗ್ರಹವು ಸುಮಾರು 2,800 Kg ತೂಗುತ್ತದೆ ಮತ್ತು L ಮತ್ತು S-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಉಪಕರಣಗಳನ್ನು ಒಳಗೊಂಡಿದೆ.
ನಿಸಾರ್‌ (NISAR) ಉಪಗ್ರಹವು ಮೋಡವಿದ್ದಾಗ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ತೆಗೆಯಲಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ನಾಸಾ (NASA) ಪ್ರಕಾರ, L-ಬ್ಯಾಂಡ್ SAR 24 ಸೆಂ.ಮೀ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ, ಇದರ ರಾಡಾರ್ ಸಿಗ್ನಲ್ ಗಳು ಕಾಡುಗಳ ಒಳಗೂ ಪ್ರವೇಶಿಸುತ್ತವೆ. S-ಬ್ಯಾಂಡ್ SAR 12 ಸೆಂ.ಮೀ ಕಡಿಮೆ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಮೋಡಗಳಂತಹ ವಸ್ತುಗಳು ಮತ್ತು ವಿವಿಧ ರೀತಿಯ ಉಪಕರಣಗಳಿಗೆ ಅಡ್ಡಿಪಡಿಸುವ ಅರಣ್ಯ ಮೇಲಾವರಣದ ಎಲೆಗಳ ಮೂಲಕವೂ ಹೋಗುತ್ತದೆ..
ಉಪಗ್ರಹವು 2024 ರಲ್ಲಿ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವದ ಸಮೀಪ ಕಕ್ಷೆಗೆ ಉಡಾವಣೆಯಾಗುವ ಸಾಧ್ಯತೆಯಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement