ದೆಹಲಿ: ಹೋಳಿ ಆಚರಣೆ ವೇಳೆ ಕಿರುಕುಳಕ್ಕೊಳಗಾಗಿ ದೇಶ ತೊರೆದ ಜಪಾನ್ ಯುವತಿ ಭಾರತದ ಬಗ್ಗೆ ಹೇಳಿದ್ದೇನೆಂದರೆ….

ನವದೆಹಲಿ: ಹೋಳಿ ಆಚರಣೆ ವೇಳೆ ಕಿರುಕುಳವನ್ನು ಎದುರಿಸಿದ್ದ ಜಪಾನ್‌ನ ಮಹಿಳೆ ಘಟನೆಯ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅವರು ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ.
ಹೋಳಿ ಸಂದರ್ಭದಲ್ಲಿ ಕಿರುಕುಳ ಎದುರಿಸಿದ್ದ ಅವರು ಬಳಿಕ ಭಾರತವನ್ನು ತೊರೆದಿದ್ದರು. ನಂತರ ಟ್ವೀಟ್‌ ಮೂಲಕ ತನಗೆದುರಾದ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅವರು ತನ್ನ ಸ್ನೇಹಿತರೊಂದಿಗೆ ಹೋಳಿ ಉತ್ಸವದಲ್ಲಿ ಭಾಗವಹಿಸಿರುವುದಾಗಿ ತಿಳಿಸಿದ್ದಾರೆ.
ಭಾರತೀಯ ಹಬ್ಬವಾದ ಹೋಳಿ ಹಬ್ಬದ ವೇಳೆ ಹಗಲು ಹೊತ್ತಿನಲ್ಲಿ ಮಹಿಳೆಯೊಬ್ಬಳು ಒಂಟಿಯಾಗಿ ಹೋಗುವುದು ಅಪಾಯ ಎಂದು ಕೇಳಿದ್ದೆ, ಹೀಗಾಗಿ ಒಟ್ಟು 35 ಮಂದಿ ಸ್ನೇಹಿತರೊಂದಿಗೆ ದೆಹಲಿಯ ಪಹರ್‌ಗಂಜ್‌ ಬಳಿ ಹೋಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಘಟನೆಯ ವಿಡಿಯೋದಲ್ಲಿ ಪುರುಷರ ಗುಂಪೊಂದು ಜಪಾನ್‌ ಮಹಿಳೆಯನ್ನು ಗುಂಪೊಂದು ಅಟ್ಟಾಡಿಸಿ, ಕಿರುಕುಳ ನೀಡಿ ಬಲವಂತವಾಗಿ ಬಣ್ಣ ಎರಚುವುದು ಹಾಗೂ ಅವಳ ತಲೆಯ ಮೇಲೆ ಮೊಟ್ಟೆ ಒಡೆಯವುದು ಕಂಡುಬರುತ್ತದೆ.

ದುಷ್ಕರ್ಮಿಗಳು ಯುವತಿಯನ್ನು ಎಳೆದಾಡಿ “ಹೋಳಿ ಹೈ” ಎಂಬ ಬೊಬ್ಬಿರಿಯುತ್ತಾ ಬಣ್ಣಗಳನ್ನು ಬಳಿಯುತ್ತಿರುವುದು ಕಂಡು ಬಂದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಘಟನೆಯ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆದಾಗ್ಯೂ, ಮಹಿಳೆಯು ಭಾರತದ ಮೇಲಿನ ತನ್ನ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ.”ನಾನು ಭಾರತದ ಬಗೆಗಿನ ಎಲ್ಲವನ್ನೂ ಪ್ರೀತಿಸುತ್ತೇನೆ, ನಾನು ಹಲವಾರು ಬಾರಿ ಭಾರತಕ್ಕೆ ಹೋಗಿದ್ದೇನೆ ಮತ್ತು ಅದು ಆಕರ್ಷಕ ದೇಶವಾಗಿದೆ. ಭಾರತ ಮತ್ತು ಜಪಾನ್ ಎಂದೆಂದಿಗೂ ‘ಟೊಮೊಡಾಚಿ’ (ಸ್ನೇಹಿತ) ಆಗಿರುತ್ತದೆ ಎಂದು ಅವರು ಟ್ವೀಟ್‌ನಲ್ಲಿ ಜಪಾನಿ ಭಾಷೆಯಲ್ಲಿ ಬರೆದಿದ್ದಾರೆ.
ಮಹಿಳೆ ಗುರುವಾರ ವೀಡಿಯೊವನ್ನು ಟ್ವೀಟ್ ಮಾಡಿದ ನಂತರ ಅದನ್ನು ಅಳಿಸಿದ್ದಾರೆ. ವೀಡಿಯೊಕ್ಕೆ ಬಂದ ಪ್ರತಿಕ್ರಿಯೆಗಳಿಂದ ಭಯಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಗುಲಾಂ ನಬಿ ಆಜಾದ್ ಸ್ಪರ್ಧಿಸಲ್ಲ

ಮಾರ್ಚ್ 9 ರಂದು, ನಾನು ಹೋಳಿ ವೀಡಿಯೊವನ್ನು ಟ್ವೀಟ್ ಮಾಡಿದ್ದೇನೆ, ಆದರೆ ಅದರ ನಂತರ, ನಾನು ಊಹಿಸಿದ್ದಕ್ಕಿಂತ ಹೆಚ್ಚು ರಿಟ್ವೀಟ್‌ಗಳು ಮತ್ತು ಸಂದೇಶಗಳು ಬರಲಾರಂಭಿಸಿದವು. ನಾನು ಭಯಭೀತಳಾಗಿ ಟ್ವೀಟ್ ಅನ್ನು ಅಳಿಸಿದ್ದೇನೆ” ಎಂದು ಅವರು ಜಪಾನಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಮಹಿಳೆ ಇನ್ನೂ ದೂರು ದಾಖಲಿಸದಿದ್ದರೂ, ಪೊಲೀಸರು ವೀಡಿಯೊವನ್ನು ಗಮನಿಸಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಬಾಲಕ ಸೇರಿದಂತೆ ಮೂವರನ್ನು ಈವರೆಗೆ ಬಂಧಿಸಲಾಗಿದೆ. ಅವರೆಲ್ಲರೂ ಪಹರ್‌ಗಂಜ್ ಸಮೀಪದ ಪ್ರದೇಶದ ನಿವಾಸಿಗಳಾಗಿದ್ದು, ಘಟನೆಯಲ್ಲಿ ತಾವು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿ ಬಲವಾದ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಮತ್ತು ಮಹಿಳೆಯರ ಮೇಲಿನ ಕಿರುಕುಳವು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಮಹಿಳೆ ಹೇಳಿದ್ದಾರೆ. ಶುಕ್ರವಾರ ಬಾಂಗ್ಲಾದೇಶಕ್ಕೆ ತೆರಳುವ ಮೊದಲು ಜಪಾನಿ ಯುವತಿ ಪಹರ್‌ಗಂಜ್‌ನ ಹೋಟೆಲ್‌ನಲ್ಲಿ ತಂಗಿದ್ದಳು.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement