ಸಪ್ತಪದಿ ತುಳಿದು ಸಂಪ್ರದಾಯಬದ್ಧವಾಗಿ ಭಗವಾನ್‌ ಶ್ರೀಕೃಷ್ಣನನ್ನು ‘ಮದುವೆ’ಯಾದ ಯುವತಿ : ಈ ವಿಶಿಷ್ಟ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ನೂರಾರು ಜನ | ವೀಕ್ಷಿಸಿ

ವಿಶಿಷ್ಟವಾದ ವಿವಾಹ ಸಮಾರಂಭದಲ್ಲಿ, ಔರೈಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಗವಾನ್‌ ಶ್ರೀಕೃಷ್ಣನ ಜೊತೆ ಸಂಪ್ರದಾಬದ್ಧವಾಗಿ ವಿವಾಹವಾಗಿದ್ದಾಳೆ…!
ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಪುತ್ರಿ ರಕ್ಷಾ (30) ಸ್ನಾತಕೋತ್ತರ ಪದವಿ ಮುಗಿಸಿ ಎಲ್ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ.
ಅವಳು ಭಗವಾನ್‌ ಶ್ರೀಕೃಷ್ಣನ ಜೊತೆ ಗಂಟುಕಟ್ಟಿಕೊಳ್ಳುವ ಮೂಲಕ ಸಪ್ತಪದಿ ತುಳಿದು ತನ್ನ ಜೀವನದುದ್ದಕ್ಕೂ ಕನ್ಹಾನೊಂದಿಗೆ ಶ್ರೀಕೃಷ್ಣ ಜೊತೆ ಇರಲು ನಿರ್ಧರಿಸಿದ್ದಾಳೆ.
ಶ್ರೀಕೃಷ್ಣನನ್ನು ಮದುವೆಯಾಗುವ ಅವಳ ಆಸೆಯನ್ನು ಪೂರೈಸಲು ಅವಳ ತಂದೆ ಮದುವೆ ಸಮಾರಂಭವನ್ನೇ ಏರ್ಪಡಿಸಿದ್ದರು. ಸುಂದರವಾಗಿ ಅಲಂಕೃತವಾದ ಮದುವೆಯ ‘ಮಂಟಪ’ವನ್ನು ನಿರ್ಮಿಸಲಾಗಿತ್ತು. ನಂತರ, ಶ್ರೀಕೃಷ್ಣನ ವಿಗ್ರಹವನ್ನು ಹೊತ್ತ ಮದುವೆಯ ಮೆರವಣಿಗೆಯು ಮದುವೆಯ ಸ್ಥಳಕ್ಕೆ ತಲುಪಿತು, ಅಲ್ಲಿ ‘ಬಾರಾತಿಗಳು’ ಸಂಗೀತಕ್ಕೆ ನೃತ್ಯ ಮಾಡಿದರು. ಪುರೋಹಿತರು ಮಂತ್ರಗಳನ್ನು ಪಠಿಸಿದರು. ಈ ಮದುವೆಯಲ್ಲಿ ವಧುವಿನ ತಂದೆ-ತಾಯಿ ಕನ್ಯಾದಾನವನ್ನೂ ಮಾಡಿದರು. ವಧು ಭಗವಾನ್‌ ಶ್ರೀಕೃಷ್ಣ ಜೊತೆ ಮದುವೆ ವಿಧಿ-ವಿಧಾನಗಳು ಮತ್ತು ನಿಬಂಧನೆಗಳ ಪ್ರಕಾರ ಸಪ್ತಪದಿ ತುಳಿದಳು…!
ಮದುವೆಗೆ ಸಂಬಂಧಿಕರು ಹಾಗೂ ಅತಿಥಿಗಳನ್ನು ಆಹ್ವಾನಿಸಲಾಗಿತ್ತು ಮತ್ತು ಎಲ್ಲ ಮದುವೆ ಕಾರ್ಯಕ್ರಮದಂತೆ ಅವರಿಗೆ ಆಹಾರ, ಪಾನೀಯ ವಿತರಿಸಲಾಯಿತು ಮತ್ತು ಸಂಗೀತ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು. ರಾತ್ರಿಯ ವಿವಾಹ ಸಮಾರಂಭದ ನಂತರ, ವಧುವು ಕೃಷ್ಣನ ಮೂರ್ತಿಯೊಂದಿಗೆ ಜಿಲ್ಲೆಯ ಸುಖಚೈನ್‌ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಸ್ಥಳಕ್ಕೆ ದಿಬ್ಬಣದೊಂದಿಗೆ ತೆರಳಿದಳು. ನಂತರ, ಅವಳು ತನ್ನ ಮಡಿಲಲ್ಲಿ ಕೃಷ್ಣನ ವಿಗ್ರಹವನ್ನು ಹೊತ್ತು ತನ್ನ ತಾಯಿಯ ಮನೆಗೆ ಮರಳಿದಳು.
ಸಕಲ ವಿಧಿವಿಧಾನಗಳೊಂದಿಗೆ ನಡೆದ ಮದುವೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಪಾಲ್ಗೊಂಡಿದ್ದರು. ವಿಶೇಷವೆಂದರೆ ಮಗಳ ನಿರ್ಧಾರಕ್ಕೆ ಪೋಷಕರೂ ಸಂತಸಗೊಂಡಿದ್ದಾರೆ. ಹುಡುಗಿಯ ಕಡೆಯವರು ಶ್ರೀಕೃಷ್ಣನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಭಗವಾನ್ ಶ್ರೀ ಕೃಷ್ಣನು ಈಗ ನಮ್ಮ ಸಂಬಂಧಿಯಾಗಿದ್ದಾನೆ ಮತ್ತು ಈಗ ನಾವು ಅವನನ್ನು ಅಳಿಯನಂತೆ ಪೂಜಿಸುತ್ತೇವೆ ಎಂದು ಅವರು ಹೇಳುತ್ತಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಖಾತೆಯನ್ನು ವಂಚನೆ ಖಾತೆ ಎಂದು ವರ್ಗೀಕರಿಸುವ ಮೊದಲು ಸಾಲಗಾರರು ಹೇಳುವುದನ್ನೂ ಆಲಿಸಬೇಕು : ಸುಪ್ರೀಂ ಕೋರ್ಟ್

ಮಾರ್ಚ್ 11ರಂದು ಸಂಪ್ರದಾಯದ ಪ್ರಕಾರ ಮದುವೆ…
ಇದು ಉತ್ತರ ಪ್ರದೇಶದ ಔರೈಯಾದ ಬಿಧುನಾ ಪಟ್ಟಣದ ವಿಶಿಷ್ಟ ಪ್ರಕರಣವಾಗಿದೆ. ಇಲ್ಲಿ ವಾಸವಾಗಿರುವ 30 ವರ್ಷದ ರಕ್ಷಾ ಎಂಬ ಯುವತಿ ಎಂಎ ವ್ಯಾಸಂಗ ಮಾಡಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಶ್ರೀಕೃಷ್ಣನ ಬಗ್ಗೆ ಅದಮ್ಯ ಪ್ರೀತಿ ಹಾಗೂ ಭಕ್ತಿ ಹೊಂದಿದ್ದಳು. ಒಂದೆಡೆ ರಕ್ಷಾ ಶ್ರೀಕೃಷ್ಣನ ಭಕ್ತಿಯಲ್ಲಿ ಮಗ್ನಳಾಗಿದ್ದರೆ, ಮತ್ತೊಂದೆಡೆ ಆಕೆಯ ಪೋಷಕರು ಅವಳ ಮದುವೆಯ ಮಾಡುವ ಬಗ್ಗೆ ಮಾತನಾಡುತ್ತಿದ್ದರು.
ಆದರೆ ಅವಳ ಅದಮ್ಯ ಪ್ರೀತಿ ಶ್ರೀಕೃಷ್ಣನಿಗೆ ಮಾತ್ರ ಮೀಸಲಾಗಿತ್ತು. ಹೀಗಾಗಿ ಕುಟುಂಬದವರು ಮದುವೆ ಪ್ರಸ್ತಾಪ ಮಾಡಿದಾಗಲ್ಲೆಲ್ಲ ಅದನ್ನು ಮತ್ತೆ ಮತ್ತೆ ನಿರಾಕರಿಸುತ್ತಿದ್ದಳು. ಈ ಮಧ್ಯೆ, ಒಂದು ದಿನ ರಕ್ಷಾ ತನ್ನ ಕನಸಿನಲ್ಲಿ ಶ್ರೀಕೃಷ್ಣ ಕಾಣಿಸಿಕೊಂಡನೆಂದು ಮನೆಯವರಿಗೆ ಹೇಳಿದಳು. ಕನಸಿನ ಮಧ್ಯೆ ದೇವರನ್ನು ತನ್ನ ಪತಿ ಎಂದು ಭಾವಿಸಿ ಮಾಲೆ ಹಾಕಿರುವುದಾಗಿ ತಿಳಿಸಿದಳು.
ಅಂದಿನಿಂದ ರಕ್ಷಾ ತನ್ನ ಗಂಡನನ್ನಾಗಿ ಭಗವಾನ್‌ ಶ್ರೀಕೃಷ್ಣನನ್ನೇ ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದಳು. ಶ್ರೀಕೃಷ್ಣನ ಪರಮಭಕ್ತಳಾಗಿದ್ದ ರಕ್ಷಾ ತನ್ನ ತಂದೆ ತಾಯಿಗೆ ಎಲ್ಲವನ್ನೂ ತಿಳಿಸಿ ಶ್ರೀಕೃಷ್ಣ ಮದುವೆಯಾಗುವ ಬಗ್ಗೆ ಅವರ ಮನವೊಲಿಸಿದಳು. ಮತ್ತೊಂದೆಡೆ, ಮಗಳ ಹಠದ ಮುಂದೆ ಏನನ್ನೂ ಹೇಳಲು ಸಾಧ್ಯವಾಗದ ಪೋಷಕರು ಮಗಳ ಸಂತೋಷಕ್ಕಾಗಿ ಒಪ್ಪಿಕೊಂಡರು.

ಮಾರ್ಚ್ 11, 2023 ರಂದು, ಕುಟುಂಬ ಸದಸ್ಯರ ಒಪ್ಪಿಗೆಯನ್ನು ಪಡೆದ ನಂತರ, ಯುವತಿ ರಕ್ಷಾ ಹಿಂದೂ ಸಂಪ್ರದಾಯದ ಪ್ರಕಾರ ಶ್ರೀಕೃಷ್ಣನನ್ನು ವಿವಾಹವಾದರು. ರಕ್ಷಾಳ ಕೈಯಲ್ಲಿ ಗೋರಂಟಿ, ಅರಿಶಿನ, ಬಳೆಗಳು ರಾರಾಜಿಸಿದವು. ವಿವಾಹ ಮಂಟಪದಲ್ಲಿ ಸಕಲ ವಿಧಿವಿಧಾನಗಳನ್ನು ನೆರವೇರಿಸಿ ಈ ಮದುವೆಯನ್ನು ಮಾಡಲಾಯಿತು. ಈಗ ತನಗೆ ಭಗವಾನ್‌ ಶ್ರೀಕೃಷ್ಣನ ರೂಪದಲ್ಲಿ ವರ ಸಿಕ್ಕಿದ್ದರಿಂದ ರಕ್ಷಾ ತುಂಬಾ ಖುಷಿಯಾಗಿದ್ದಾರೆ.
ತಮ್ಮ ಮಗಳ ಸಂತೋಷದಲ್ಲಿ ತಮ್ಮ ಸಂತೋಷ ಅಡಗಿದೆ ಎಂದು ರಕ್ಷಾಳ ಪೋಷಕರು ತಿಳಿಸಿದ್ದಾರೆ. ನಾವು ನಮ್ಮ ಮಗಳನ್ನು ಶ್ರೀಕೃಷ್ಣನಿಗೆ ಸಂಪ್ರದಾಯದ ಪ್ರಕಾರವೇ ಮದುವೆ ಮಾಡಿದ್ದೇವೆ. ಈಗ ಶ್ರೀಕೃಷ್ಣನು ನಮ್ಮ ಅಳಿಯನಾಗಿದ್ದಾನೆ. ನಾವು ತುಂಬಾ ಸಂತೋಷವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಕ್ಕ ಅನುರಾಧಾ ಕೂಡ ರಕ್ಷಾಳ ನಿರ್ಧಾರದಿಂದ ತುಂಬಾ ಸಂತೋಷಪಟ್ಟಿದ್ದಾಳೆ. ತಂಗಿ ಶ್ರೀಕೃಷ್ಣನನ್ನು ವರನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಳೆ. ಈಗ ಶ್ರೀಕೃಷ್ಣ ನನ್ನ ಸಂಬಂಧಿಯಾಗಿದ್ದಾನೆ ಮತ್ತು ನಾವು ಮಥುರಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement