ಸೊಂಡಿಲಿನಲ್ಲಿ ನೀರಿನ ಪೈಪ್ ಹಿಡಿದು ಮಾನವನಂತೆ ತಾನೇ ಸ್ನಾನ ಮಾಡುತ್ತಿರುವ ಆನೆ : ಅದರ ಬುದ್ಧಿಶಕ್ತಿಗೆ ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಕೆಲಸ ಸುದೀರ್ಘವಾದಾಗ ಮತ್ತು ದಣಿದಾಗ ಬೇಕಾಗಿರುವುದು ಸ್ವಲ್ಪ ವಿಶ್ರಾಂತಿ. ಕೆಲವರು ಸಂಜೆಯ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡಲು ಇಷ್ಟಪಡುತ್ತಾರೆ, ಇತರರು ಟಿವಿಯಲ್ಲಿ ಚಲನಚಿತ್ರ, ಧಾರಾವಾಹಿ, ಇತರ ಮನರಂಜನಾ ಕಾರ್ಯಕ್ರಮಗಳು, ವೆಬ್ ಸರಣಿಯನ್ನು ವೀಕ್ಷಿಸಲು ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಮನರಂಜನೆ ಪಡೆದು ಆನಂದಿಸುತ್ತಾರೆ. ಇಂಟರ್ನೆಟ್‌ನಲ್ಲಿ ಮನಸ್ಸಿಗೆ ಮುದ ನೀಡುವ ಅನೇಕ ಸಂಗತಿಗಳು ಹಾಗೂ ವೀಡಿಯೊಗಳು ಸಿಗುತ್ತವೆ. ಸಾಮಾನ್ಯವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ವೀಡಿಯೊಗಳು ನಮ್ಮನ್ನು ಅಚ್ಚರಿಸಿಗೊಳಿಸುತ್ತವೆ. ಅದು ನಮ್ಮನ್ನು ರಂಜಿಸುವುದು ಮಾತ್ರವಲ್ಲದೆ ನಮ್ಮ ಹೃದಯವನ್ನೂ ತಟ್ಟುತ್ತವೆ.
ನೀವು ಪ್ರಾಣಿ ಪ್ರಿಯರಾಗಿದ್ದರೆ, ನೀರಿನ ಪೈಪ್ ಬಳಸಿ ಆನೆಯ ಸ್ನಾನ ಮಾಡುವ ಈ ವೈರಲ್ ವೀಡಿಯೊ ನಮ್ಮ ಹೃದಯವನ್ನು ತಟ್ಟುತ್ತದೆ. ಈ ಕ್ಲಿಪ್ ಅನ್ನು ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಅವರು ಮಾರ್ಚ್ 11 ರಂದು ಟ್ವೀಟ್ ಮಾಡಿದ್ದಾರೆ.
ಆನೆಯೊಂದು ಸ್ನಾನ ಮಾಡಲು ನೀರಿನ ಪೈಪ್ ಬಳಸುವ ದೃಶ್ಯದೊಂದಿಗೆ ವೀಡಿಯೊ ಆರಂಭವಾಗುತ್ತದೆ. ಅದರ ಹಣೆಯ ಮೇಲಿರುವ ತಿಲಕವು ಆನೆ ಸಾಕಿದ್ದು ಎಂಬುದನ್ನು ಸೂಚಿಸುತ್ತದೆ. ಬೃಹತ್‌ ಆನೆಯು ತಾನೇ ಸ್ವತಃ ನೀರಿನ ಪೈಪ್‌ ಮೂಲಕ ತನ್ನ ದೇಹವನ್ನು ಶುಚಿಗೊಳಿಸುತ್ತಿರುವುದನ್ನು ನೋಡಬಹುದು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   15 ವರ್ಷಗಳ ಹಿಂದಿನ ಪ್ರಕರಣ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ ಹಚ್ಚೆ

ಆನೆ ತನ್ನ ಸೊಂಡಿಲಿನಿಂದ ಪೈಪ್‌ ಹಿಡಿದುಕೊಂಡು ತನ್ನ ಮೈಯನ್ನು ತಾನೇ ತೊಳೆದುಕೊಳ್ಳುವುದು ಕಂಡುಬರುತ್ತದೆ. ಆನೆ ಇದರಲ್ಲಿ ಸ್ವಾವಲಂಬಿಯಾಗಿರುವುದು ಕಂಡುಬರುತ್ತದೆ. ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು ಅದಕ್ಕೆ ಮನುಷ್ಯನ ಸಹಾಯ ಬೇಕಿದ್ದಂತಿಲ್ಲ. ಆನೆಯು ತನ್ನ ಸೊಂಡಿಲನ್ನು ಬಳಸಿ ತನ್ನ ಬೆನ್ನಿನ ಮೇಲೆ ನೀರನ್ನು ಚಿಮುಕಿಸುವ ಮೊದಲು ಅದರ ಬಾಯಿಯಲ್ಲಿ ಪೈಪ್ ಅನ್ನು ಹಾಕುತ್ತದೆ. ಅದು ತನ್ನ ತಲೆ, ಬೆನ್ನು ಮತ್ತು ಕಿವಿಗಳ ಮೇಲೆ ನೀರನ್ನು ಸುರಿದುಕೊಳ್ಳುತ್ತದೆ. ಇದು ಮೆದುಗೊಳವೆ ಪೈಪ್ ಅನ್ನು ತೆಗೆದುಕೊಂಡು ಅದರ ಬಾಯಿಯಲ್ಲಿ ಸಹ ಹಾಕಿಕೊಳ್ಳುತ್ತದೆ. ಬಹುತೇಕ ಗಾರ್ಲಿಂಗ್‌ನಂತೆ ಕಾಣುತ್ತದೆ. ಆನೆಯು ತನ್ನಷ್ಟಕ್ಕೆ ತಾನೇ ಸ್ನಾನ ಮಾಡುತ್ತಿದೆ. ಇದು ನಿಜವಾಗಿಯೂ ಆಪ್ಯಾಯಮಾನವಾಗಿದೆ ಮತ್ತು ಈ ದೃಶ್ಯ ನೋಡದಿರಲು ಸಾಧ್ಯವಿಲ್ಲ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಕೆಲವು ನೆಟಿಜನ್‌ಗಳು ತಕ್ಷಣವೇ ಆನೆಯ ಬುದ್ಧಿಮತ್ತೆಯನ್ನು ಶ್ಲಾಘಿಸಲು ಟ್ವೀಟ್‌ನ ಕಾಮೆಂಟ್‌ ಮಾಡಿದ್ದಾರೆ. “ಬಂಧನದಲ್ಲಿ ಕಾಡುಪ್ರಾಣಿ ಇರುವುದನ್ನು ನಾನು ಬೆಂಬಲಿಸುವುದಿಲ್ಲ. ಆದರೆ ಆನೆಗಳ ಬುದ್ಧಿವಂತಿಕೆಯನ್ನು ಬೆಂಬಲಿಸಿ …ಅವು ಅದ್ಭುತ ಜೀವಿಗಳು. ಇಲ್ಲಿ ತಾನೇ ಸ್ವತಃ ಸ್ನಾನ ಮಾಡುತ್ತಿದೆ ಎಂದು ಒಬ್ಬರು ಬರೆದಿದ್ದಾರೆ.
ಮತ್ತೊಬ್ಬರು ಇದು ʼಆತ್ಮನಿರ್ಭರʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಆನೆಯನ್ನು “ಸೂಪರ್ ಇಂಟೆಲಿಜೆಂಟ್” ಎಂದು ಕರೆದರು. ಹೀಗೆ ಅನೇಕರು ಕಾಮೆಂಟ್‌ ಮಾಡಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ವಾಟ್ಸಾಪ್ ಗ್ರೂಪ್‌ನಲ್ಲಿ ಧರ್ಮನಿಂದೆಯ ವಿಷಯ ಪೋಸ್ಟ್‌ ಮಾಡಿದ್ದ ವ್ಯಕ್ತಿಗೆ ಮರಣದಂಡನೆ ವಿಧಿಸಿದ ಪಾಕಿಸ್ತಾನ ನ್ಯಾಯಾಲಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement