ದುಬೈನಿಂದ ಪಂಜಾಬಿನ ಅಜ್ನಾಲಾಗೆ: ಅಮೃತಪಾಲ್ ಸಿಂಗ್ ತೀವ್ರಗಾಮಿ ನಾಯಕನಾಗಿ ಪರಿವರ್ತನೆಯಾಗಿದ್ದು ಹೇಗೆ…?

ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಮತ್ತು ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆತನ ಶಸ್ತ್ರಸಜ್ಜಿತ ಅನುಯಾಯಿಗಳು ಕಳೆದ ತಿಂಗಳು ತನ್ನ ಸಹಾಯಕರಲ್ಲಿ ಒಬ್ಬನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಜ್ನಾಲಾದಲ್ಲಿನ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ನಂತರ ಅಮೃತಪಾಲ್ ಸಿಂಗ್ ಪೊಲೀಸರ ರಾಡಾರ್‌ನಲ್ಲಿದ್ದ.
ಕೆಲವೇ ವರ್ಷಗಳ ಹಿಂದೆ ದುಬೈನಲ್ಲಿ ವಾಸಿಸುತ್ತಿದ್ದ ಮತ್ತು ಸಾಂಪ್ರದಾಯಕವಲ್ಲದ ಜೀವನಶೈಲಿ ಹೊಂದಿದ್ದ ಅಮೃತಪಾಲ್ ಸಿಂಗ್, (30), ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಸ್ಥಾನ ವಹಿಸಿಕೊಂಡ ನಂತರ ಖಾಲಿಸ್ತಾನಿ ಸಿದ್ಧಾಂತವಾದಿಯಾಗಿ ಬದಲಾದ ಎಂದು ಹೇಳಲಾಗುತ್ತಿದೆ.
ದುಬೈನಿಂದ ಅಜ್ನಾಲಾಗೆ: ಅಮೃತಪಾಲ್ ಸಿಂಗ್ ಪಯಣ
30 ವರ್ಷದ ಪ್ರತ್ಯೇಕತಾವಾದಿ ಚಿಂತನೆಯುಳ್ಳ ಪಂಜಾಬ್‌ನ ಅಮೃತಸರದ ಜಲ್ಲುಪುರ್ ಗ್ರಾಮದ ಈತ ಫೆಬ್ರವರಿ 2022 ರವರೆಗೆ, ದುಬೈನಲ್ಲಿದ್ದ ಹಾಗೂ ತಮ್ಮ ಸಂಬಂಧಿಕರ ಸಾರಿಗೆ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದ. ಅಮೃತಪಾಲ್ 12 ನೇ ತರಗತಿಯವರೆಗೆ ಓದಿದ್ದು,2012 ರಲ್ಲಿ ಭಾರತವನ್ನು ತೊರೆದು ಸಂಬಂಧಿಕರ ಸಾರಿಗೆ ವ್ಯವಹಾರದಲ್ಲಿ ಸಹಾಯ ಮಾಡಲು ತೆರಳಿದ್ದ.
ಕುತೂಹಲಕಾರಿಯಾಗಿ, ಹಿಂದಿನ ಖಾಲಿಸ್ತಾನಿ ನಾಯಕರಂತಲ್ಲದೆ, ಅಮೃತಪಾಲ್ ಸಿಂಗ್‌ ಸಾಂಪ್ರದಾಯಿಕ ಸಿಖ್ ಜೀವನಶೈಲಿಯನ್ನು ಅನುಸರಿಸುತ್ತಿರಲಿಲ್ಲ. ಸಿಖ್ಖರು ಅಭ್ಯಾಸ ಮಾಡುವ ಮೂಲಭೂತ ಸಂಕೇತಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಪೇಟ ಧರಿಸುತ್ತಿರಲಿಲ್ಲ, ಮತ್ತು ಅಲಂಕಾರಿಕವಾಗಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸಮಯ ಕಳೆಯುತ್ತಿದ್ದ.
ಆದಾಗ್ಯೂ, ಫೆಬ್ರವರಿ 15, 2022 ರ ನಂತರ ಪಂಜಾಬಿ ನಟ ಮತ್ತು ನಂತರ ವಾರಿಸ್ ಪಂಜಾಬ್ ದೇ ಮುಖ್ಯಸ್ಥರಾಗಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ ಎಲ್ಲವೂ ಬದಲಾಯಿತು. 2021 ರ ಜನವರಿ 26 ರಂದು ರೈತರ ಚಳವಳಿ ಸಮಯದಲ್ಲಿ ಕೆಂಪು ಕೋಟೆಯಲ್ಲಿ ನಿಶಾನ್ ಸಾಹಿಬ್‌ನ ಧ್ವಜ ಹಾರಿಸಿದ ದೀಪ ಸಿಧು ಸಹ ಸಾಂಪ್ರದಾಯಿಕ ಅಭ್ಯಾಸ ಅನುಸರಿಸದ ಇನ್ನೊಬ್ಬ ಸಿಖ್ ಆಗಿದ್ದರು. ಅವರು ಸೆಪ್ಟೆಂಬರ್ 2021 ರಲ್ಲಿ ವಾರಿಸ್ ಪಂಜಾಬ್ ದೇ ಅನ್ನು “ಪಂಜಾಬ್‌ನ ಹಕ್ಕುಗಳಿಗಾಗಿ ಹೋರಾಡಲು ಮತ್ತು ಅದರ ಸಂಸ್ಕೃತಿಯನ್ನು ರಕ್ಷಿಸಲು” ಸಾಮಾಜಿಕ ಸಂಘಟನೆಯಾಗಿ ಪ್ರಾರಂಭಿಸಿದರು.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

ಅಮೃತಪಾಲ್ ಸಿಂಗ್ ದುಬೈನಲ್ಲಿದ್ದಾಗ ಎಲ್ಲಿಯೂ ಇರಲಿಲ್ಲ, ಯಾಋೆಂದೂ ಗೊತ್ತಿರಲಿಲ್ಲ. ಅಮೃತಪಾಲ್ ಸಿಂಗ್ ಪಂಜಾಬ್‌ಗೆ ಬಂದಿಳಿದ ಮತ್ತು ನಂತರ ಆತನನ್ನು ವಾರಿಸ್ ಪಂಜಾಬ್‌ನ ಮುಂದಿನ ಮುಖ್ಯಸ್ಥ ಎಂದು ಘೋಷಿಸಲಾಯಿತು. ಸೆಪ್ಟೆಂಬರ್ 29, 2022 ರಂದು ಮೋಗಾ ಜಿಲ್ಲೆಯ ರೋಡ್ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ (ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಗ್ರಾಮ) ಅಮೃತಪಾಲ್ ಸಿಂಗ್ ವಾರಿಸ್ ಪಂಜಾಬ್ ದೆ ಮುಂದಿನ ಮುಖ್ಯಸ್ಥರಾಗಿ ನೇಮಕವಾದ.
ಆದಾಗ್ಯೂ, ನಟ ದೀಪ್ ಸಿಧು ಸಂಬಂಧಿಕರು ಅಮೃತಪಾಲ್ ಸಿಂಗ್‌ನಿಂದ ದೂರವೇ ಇದ್ದರು ಮತ್ತು ಕೆಲವು ವರದಿಗಳ ಪ್ರಕಾರ, ಪ್ರತ್ಯೇಕತಾವಾದಿ ಸಿದ್ಧಾಂತದ ಪ್ರಚಾರಕ್ಕಾಗಿ ಸಂಘಟನೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆತನ ವಿರುದ್ಧ ಆರೋಪಿಸಿದ್ದಾರೆ.
ವಾರಿಸ್ ಪಂಜಾಬ್ ದೇ ಮುಖ್ಯಸ್ಥನ ಸ್ಥಾನ ವಹಿಸಿಕೊಂಡ ನಂತರ, ಅಮೃತಪಾಲ್ ಸಿಂಗ್ ಆನಂದ್‌ಪುರ ಸಾಹಿಬ್‌ನಲ್ಲಿ ಅಮೃತ್ ಸಮಾರಂಭದಲ್ಲಿ (ಖಾಲ್ಸಾ ಸಂಪ್ರದಾಯಕ್ಕೆ ದೀಕ್ಷೆ) ಭಾಗವಹಿಸಿದ. ಅಮೃತಪಾಲ್ ಖಾಲಿಸ್ತಾನಿ ಸಿದ್ಧಾಂತವಾದಿ ಮತ್ತು ಅದರ ಸ್ಫೂರ್ತಿಯಾದ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯಂತೆ ವಸ್ತ್ರ ಧರಿಸಲು ಆರಂಭಿಸಿದ.
ಅಮೃತಪಾಲ್ ಸಿಂಗ್ ಹಲವು ವೇದಿಕೆಗಳಲ್ಲಿ ಖಾಲಿಸ್ತಾನದ ರಚನೆಯ ಬೇಡಿಕೆಯನ್ನು ಸಮರ್ಥಿಸಿಕೊಂಡ, ಮೂಲಭೂತವಾದಿ ಹಿಂದೂಗಳು ಹಿಂದೂ ರಾಷ್ಟ್ರವನ್ನು ಒತ್ತಾಯಿಸಬಹುದಾದರೆ, ಸಿಖ್ ರಾಷ್ಟ್ರವನ್ನು ಒತ್ತಾಯಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದ.

ಅಜ್ನಾಲಾ ಘಟನೆ
ಫೆಬ್ರವರಿ 24 ರಂದು ಅಮೃತಪಾಲ್ ಸಿಂಗ್ ಮತ್ತು ಆತನ ಅನುಯಾಯಿಗಳು ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಪೊಲೀಸ್ ಠಾಣೆಗೆ ದಾಳಿ ಮಾಡಿ, ತನ್ನ ಸಹಾಯಕ ಲವ್‌ಪ್ರೀತ್ ಸಿಂಗ್ ತೂಫಾನ್‌ನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಆತನ ಬೆಂಬಲಿಗರು ಬ್ಯಾರಿಕೇಡ್‌ಗಳನ್ನು ಭೇದಿಸಿ ಅಮೃತಸರ ನಗರದ ಹೊರವಲಯದಲ್ಲಿರುವ ಅಜ್ನಾಲಾದಲ್ಲಿ ಪೊಲೀಸ್ ಠಾಣೆಗೆ ನುಗ್ಗಿದರು, ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಆತನ ಸಹಾಯಕ ಲವ್‌ಪ್ರೀತ್ ಸಿಂಗ್ ತೂಫಾನ್‌ನನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರಿಂದ ಭರವಸೆ ಪಡೆದರು. ಘರ್ಷಣೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು.ಮರುದಿನ ಲವ್‌ ಪ್ರೀತ್ ಸಿಂಗ್ ತೂಫಾನ್‌ನನ್ನು ಬಿಡುಗಡೆಯಾಯಿತು.
ಅಮೃತಪಾಲ್ ಸಿಂಗ್ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಉಲ್ಲೇಖಿಸಿ ಗೃಹ ಸಚಿವ ಅಮಿತ್ ಶಾ ಅವರಿಗೆ ಬೆದರಿಕೆ ಸಹ ಹಾಕಿದ್ದಾನೆ.
“ಅಮಿತ್ ಶಾ ಅವರು ಖಲಿಸ್ತಾನ್ ಚಳವಳಿಯನ್ನು ಹುಟ್ಟುಹಾಕಲು ಬಿಡುವುದಿಲ್ಲ ಎಂದು ಹೇಳಿದ್ದರು, ನಾವು ಇಂದಿರಾಗಾಂಧಿ ಮಾಡಿದ್ದು ಅದನ್ನೇ. ನೀವು ಅದೇ ರೀತಿ ಮಾಡಿದರೆ, ನಂತರ ನೀವು ಅದೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವರು ಗೃಹ ಸಚಿವರಾಗಿ ಉಳಿಯುತ್ತಾರೆಯೇ ಎಂದು ನಾನು ನೋಡುತ್ತೇನೆ” ಎಂದು ಅಮೃತಪಾಲ್ ಸಿಂಗ್ ಅಜ್ನಾಲಾ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆಯನ್ನು ಮುನ್ನಡೆಸುವಾಗ ಹೇಳಿದ್ದ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಘಟನೆಯ ಒಂದು ವಾರದ ನಂತರವೂ ಅದು ಅಮೃತಪಾಲ್ ಸಿಂಗ್ ಅಥವಾ ಅವರ ಸಹಾಯಕರ ವಿರುದ್ಧ ಒಂದೇ ಒಂದು ಎಫ್‌ಐಆರ್ ಅನ್ನು ದಾಖಲಿಸಿರಲಿಲ್ಲ.
ಮಾರ್ಚ್ ಮೊದಲ ವಾರದಲ್ಲಿ, ಪಂಜಾಬ್ ಪೊಲೀಸರು ಅಂತಿಮವಾಗಿ ಅಮೃತಪಾಲ್ ಸಿಂಗ್‌ನನ್ನು ದಮನ ಮಾಡಲು ಆರಂಭಿಸಿದರು, ಆತನ ಒಂಬತ್ತು ಸಹಾಯಕರ ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದರು, ಪರವಾನಗಿಗಳನ್ನು ಆತ್ಮರಕ್ಷಣೆಗಾಗಿ ನೀಡಲಾಗಿದೆ ಮತ್ತು ಖಾಲಿಸ್ತಾನಿ ನಾಯಕನಿಗೆ ಭದ್ರತೆಯನ್ನು ಒದಗಿಸಲು ಅಲ್ಲ ಎಂದು ಪ್ರತಿಪಾದಿಸಿದರು.
ಮಾರ್ಚ್ 18 ರಂದು, ಅಮೃತಪಾಲ್ ಸಿಂಗ್‌ನ ಆರು ಸಹಾಯಕರನ್ನು ಪೊಲೀಸರು ಸುದೀರ್ಘ ದೂರದ ವರೆಗೆ ಬೆನ್ನಟ್ಟಿದ ನಂತರ ಜಲಂಧರ್‌ನಲ್ಲಿ ಬಂಧಿಸಲಾಯಿತು. ನಂತರದ ದಿನದಲ್ಲಿ ಅಮೃತಪಾಲ್ ಸಿಂಗ್ ನನ್ನು ಜಲಂಧರ್ ನ ನಕೋದರ್ ಬಳಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಅಮೃತಿಪಾಲ್ ಬಂಧನದ ವರದಿಗಳನ್ನು ಪಂಜಾಬ್ ಪೊಲೀಸರು ಇನ್ನೂ ಖಚಿತಪಡಿಸಿಲ್ಲ. ಪಂಜಾಬ್‌ನ ಹಲವಾರು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸಹ ನಿರ್ಬಂಧಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement