ಕೊರೊನಾ ಸಂಬಂಧಿತ ಮೆದುಳು ಕಾಯಿಲೆಯಿಂದ ಜಪಾನ್‌ನಲ್ಲಿ 10%ಕ್ಕಿಂತ ಹೆಚ್ಚು ಮಕ್ಕಳು ಸಾವು : ಸಮೀಕ್ಷೆಯಲ್ಲಿ ಬಹಿರಂಗ

ಟೋಕಿಯೋ : ಜಪಾನ್‌ನಲ್ಲಿ ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯು ಕೋವಿಡ್‌-19 ಸೋಂಕಿನ ಕಾರಣದಿಂದ ತೀವ್ರವಾದ ಮೆದುಳಿನ ಸಿಂಡ್ರೋಮ್‌ನಿಂದ 10 ಪ್ರತಿಶತಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ.
ಜಪಾನಿನ ಸುದ್ದಿವಾಹಿನಿ ಕ್ಯೋಡೋ ನ್ಯೂಸ್ ಪ್ರಕಾರ, ಆರೋಗ್ಯ ಸಚಿವಾಲಯದ ಸಂಶೋಧನಾ ತಂಡವು ಈ ಸಮೀಕ್ಷೆಯನ್ನು ನಡೆಸಿದೆ.
ಜನವರಿ 2020 ಮತ್ತು ಮೇ 2022 ರ ನಡುವೆ ರೋಗಿಗಳು ಕೊರೊನಾ ವೈರಸ್ ಸೋಂಕಿಗೆ ಒಳಗಾದ ನಂತರ ಅಭಿವೃದ್ಧಿ ಹೊಂದಿದ ತೀವ್ರವಾದ ಎನ್ಸೆಫಲೋಪತಿಯ 34 ಪ್ರಕರಣಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ಸಮೀಕ್ಷೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳ ಮೇಲೆ ನಡೆಸಲಾಯಿತು. ಒಟ್ಟು ರೋಗಿಗಳಲ್ಲಿ, 31 ರೋಗಿಗಳು ಯಾವುದೇ ಕಾಯಿಲೆಯನ್ನು ತೋರಿಸಲಿಲ್ಲ. ಆದರೂ ಮೆದುಳಿನ ಸಿಂಡ್ರೋಂ ಹೊರಹೊಮ್ಮುವಿಕೆಗೆ ಕಾರಣವಾಯಿತು.
31 ಮಕ್ಕಳಲ್ಲಿ, 19 ಮಂದಿ ಚೇತರಿಸಿಕೊಂಡರು, ನಾಲ್ವರು ಮೃತಪಟ್ಟರು ಮತ್ತು ಎಂಟು ಮಂದಿಗೆ ಪ್ರಜ್ಞಾಹೀನತೆಯಿಂದ ಹಿಡಿದು ಅನೇಕ ದಿನಗಳ ಕಾಲ ಹಾಸಿಗೆ ಹಿಡಿದಿರುವ ತೊಡಕುಗಳು ಕಂಡುಬಂದಿವೆ. ಪ್ರಕರಣಗಳಲ್ಲಿ ಕಂಡುಬರುವ ಪ್ರಮುಖ ಲಕ್ಷಣಗಳೆಂದರೆ ಅಸಹಜ ಮಾತು ಅಥವಾ ನಡವಳಿಕೆ ಮತ್ತು ಪ್ರಜ್ಞೆಯಲ್ಲಿ ತೊಂದರೆಗಳು.

ಪ್ರಮುಖ ಸುದ್ದಿ :-   ಹಿಜ್ಬೊಲ್ಲಾ ಗುಂಪು ಬಳಸುತ್ತಿದ್ದ ನೂರಾರು ವಾಕಿ-ಟಾಕೀ, ಪೇಜರ್‌ಗಳು ಸ್ಫೋಟ ; 32 ಜನರು ಸಾವು, 3,250 ಕ್ಕೂ ಹೆಚ್ಚು ಮಂದಿಗೆ ಗಾಯ

ಒಮಿಕ್ರಾನ್ ಕರೋನವೈರಸ್ ಸ್ಟ್ರೈನ್ ಜನವರಿ 2022 ಅಥವಾ ನಂತರ ಸಾಮಾನ್ಯವಾದಾಗ, ಹೆಚ್ಚಿನ ವ್ಯಕ್ತಿಗಳು ತೀವ್ರವಾದ ಎನ್ಸೆಫಲೋಪತಿಯನ್ನು ಅನುಭವಿಸಿದರು.. ಕೋವಿಡ್-19 ಮತ್ತು ಇನ್‌ಫ್ಲುಯೆಂಜಾದಂತಹ ಅನೇಕ ಸೋಂಕುಗಳಿಂದ ತೀವ್ರವಾದ ಎನ್ಸೆಫಲೋಪತಿ ಉಂಟಾಗಬಹುದು ಎಂಬುದನ್ನು ಗಮನಿಸುವುದು ಮುಖ್ಯ. ಆದಾಗ್ಯೂ, 2022 ರ ಮೊದಲು ಮತ್ತು ನಂತರ ಮೆದುಳಿನ ರೋಗಲಕ್ಷಣಗಳನ್ನು ತೋರಿಸಿದ ಕೋವಿಡ್‌-ಸೋಂಕಿತ ಮಕ್ಕಳಲ್ಲಿ ಯಾವುದೇ ಸ್ಪಷ್ಟ ವ್ಯತ್ಯಾಸವಿಲ್ಲ. ಇದರರ್ಥ ರೂಪಾಂತರವು ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆಗಳನ್ನು ಹೆಚ್ಚಿಸುವುದಿಲ್ಲ.
ತಂಡದ ನೇತೃತ್ವದ ಮತ್ತು ಟೋಕಿಯೊ ಮಹಿಳಾ ವೈದ್ಯಕೀಯ ವಿಶ್ವವಿದ್ಯಾಲಯ ಯಾಚಿಯೊ ವೈದ್ಯಕೀಯ ಕೇಂದ್ರದಲ್ಲಿ ಪೀಡಿಯಾಟ್ರಿಕ್ ನರವಿಜ್ಞಾನದ ಪ್ರಾಧ್ಯಾಪಕರಾಗಿರುವ ಜುನಿಚಿ ಟಕನಾಶಿ ಅವರ ಪ್ರಕಾರ, ವೈದ್ಯಕೀಯ ತಜ್ಞರು ಅಂತಹ ಪ್ರಕರಣಗಳಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಔಷಧೋಪಾಚಾರ ನೀಡಬೇಕು ಎಂದು ಸೂಚಿಸುತ್ತಾರೆ. “ಜ್ವರದಿಂದ ಉಂಟಾಗುವ ಇಂತಹ ಪ್ರಜ್ಞೆಯ ತೊಂದರೆ 10 ನಿಮಿಷಗಳಲ್ಲಿ ನಿಲ್ಲದಿದ್ದರೆ, ಪ್ರಜ್ಞೆಯ ನಷ್ಟವು ಮುಂದುವರಿದರೆ ಅಥವಾ ವಿಚಿತ್ರ ನಡವಳಿಕೆಯನ್ನು ಗಮನಿಸಿದರೆ ನಾವು ತ್ವರಿತವಾಗಿ ಆಸ್ಪತ್ರೆಗೆ ಹೋಗಲು ಸಲಹೆ ನೀಡುತ್ತೇವೆ … ಎಂದು ಟಕನಾಶಿ ಹೇಳಿದ್ದಾರೆ.

2022 ರಲ್ಲಿ, ಜಪಾನ್ ಪ್ರಾಥಮಿಕ ಮತ್ತು ಹೈಸ್ಕೂಲ್‌ಗೆ ಸೇರಿದ 514 ಮಕ್ಕಳ ಸಾವುಗಳನ್ನು ವರದಿ ಮಾಡಿದೆ, ಇದು 2020 ರಲ್ಲಿ ಕಂಡುಬಂದ ಅಂಕಿಅಂಶಕ್ಕಿಂತ ಹೆಚ್ಚಾಗಿದೆ. ಒಟ್ಟಾರೆಯಾಗಿ, 17 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, 143 ಕಿರಿಯ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು 354 ಪ್ರೌಢಶಾಲಾ ವಿದ್ಯಾರ್ಥಿಗಳು ಮೃತಪಟ್ಟರು. ಜಪಾನ್ ಸಚಿವಾಲಯದ ಅಧಿಕಾರಿಯೊಬ್ಬರು 2020 ರಲ್ಲಿ ಜಪಾನ್ ಮತ್ತು ಪ್ರಪಂಚದ ಇತರ ಭಾಗಗಳಿನ್ನು ಕಾಡಿದ ಕೋವಿಡ್‌-19 ಸಾಂಕ್ರಾಮಿಕದ ದೀರ್ಘಕಾಲದ ಪರಿಣಾಮಕ್ಕೆ ಹಾಗೂ ಸಾವುಗಳಿಗೆ ಕಾರಣವೆಂದು ಹೇಳಿದ್ದಾರೆ.
2022ರ ಮೊದಲು ಮತ್ತು ನಂತರ ಮಿದುಳಿನ ರೋಗಲಕ್ಷಣಗಳನ್ನು ಅನುಭವಿಸಿದ ಕೋವಿಡ್ ಸೋಂಕಿನ ಮಕ್ಕಳ ಅನುಪಾತವು ಯಾವುದೇ ಗಮನಾರ್ಹ ವ್ಯತ್ಯಾಸವನ್ನು ತೋರಿಸಲಿಲ್ಲ, ಅಂದರೆ ಒಮಿಕ್ರಾನ್ ರೂಪಾಂತರವು ಇತರ ರೂಪಾಂತರಿಗಳಿಗಿಂತ ಮೆದುಳಿನ ಕಾಯಿಲೆಯನ್ನು ಹೆಚ್ಚಾಗಿ ಪ್ರಕಟಪಡಿಸುವ ಸಾಧ್ಯತೆಯಿಲ್ಲ ಎಂದು ಸೂಚಿಸುತ್ತದೆ ಎಂದು ಅಧ್ಯಯನವು ತೋರಿಸಿದೆ

ಪ್ರಮುಖ ಸುದ್ದಿ :-   ಪೇಜರ್ ಗಳು ಸ್ಫೋಟಗೊಂಡ ಒಂದು ದಿನದ ನಂತರ ಹಿಜ್ಬೊಲ್ಲಾ ಭದ್ರಕೋಟೆಯಲ್ಲಿ ವಾಕಿ ಟಾಕಿ ಸ್ಫೋಟ; 3 ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement