ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು : ಕರಾಚಿ ಆಹಾರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದಿಂದ 11 ಮಂದಿ ಸಾವು, ಹಲವರಿಗೆ ಗಾಯ

ಇಂದು, ಶುಕ್ರವಾರ ದಕ್ಷಿಣ ಪಾಕಿಸ್ತಾನದ ಕರಾಚಿ ನಗರದಲ್ಲಿ ಉಚಿತ ಪಡಿತರ ವಿತರಣಾ ಕಾರ್ಯಕ್ರಮದ ವೇಳೆ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಪಡಿತರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಪ್ರಜ್ಞಾಹೀನರಾಗಿದ್ದಾರೆ ಎಂದು ಪಾಕಿಸ್ತಾನದ ಎಕ್ಸ್‌ಪ್ರೆಸ್ ನ್ಯೂಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಈ ಘಟನೆಯು ಕರಾಚಿಯ ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್ (SITE) ಪ್ರದೇಶದಲ್ಲಿ ನಡೆದಿದೆ. ಕಾಲ್ತುಳಿತದಲ್ಲಿ ಮೃತಪಟ್ಟವರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪಡಿತರವನ್ನು ಪಡೆಯಲು ಹಲವಾರು ಜನರು ಕಾರ್ಖಾನೆ ಬಳಿ ಸೇರಿದ ನಂತರ ಕಾಲ್ತುಳಿತದಲ್ಲಿ ಸಾವುಗಳು ಮತ್ತು ಗಾಯಗೊಂಡಿರುವುದು ವರದಿಯಾಗಿದೆ, ಇದು ಚಾರಿಟಿ ಅಭಿಯಾನವಾಗಿತ್ತು. ಏಳು ಮಂದಿಯನ್ನು ಕರಾಚಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರವು ಸ್ಥಾಪಿಸಿದ ಉಚಿತ ಹಿಟ್ಟು ವಿತರಣಾ ಅಭಿಯಾನದಲ್ಲಿ ಸಂದರ್ಭದಲ್ಲಿ ಉಂಟಾದ ಇದೇ ರೀತಿಯ ಕಾಲ್ತುಳಿತದಲ್ಲಿ ಅನೇಕರು ಪ್ರಾಣ ಕಳೆದುಕೊಂಡ ಕೆಲವು ದಿನಗಳ ನಂತರ ಈ ದುರಂತವು ನಡೆದಿದೆ.

ಇಂದು ಶುಕ್ರವಾರದ ಈ ಘಟನೆಯನ್ನು ಹೊರತುಪಡಿಸಿ, ಪಾಕಿಸ್ತಾನದ ಇತರ ಪ್ರಾಂತ್ಯಗಳಲ್ಲಿನ ಇತ್ತೀಚಿನ ವಾರಗಳಲ್ಲಿ ಹಿಟ್ಟು ವಿತರಣಾ ಕಾರ್ಯಕ್ರಮದಡಿ ಸರ್ಕಾರ ವಿತರಿಸುತ್ತಿರುವ ಹಿಟ್ಟು ಪಡೆಯುವಾಗ ವಿವಿಧೆಡೆ 11 ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಟ್ರಕ್‌ಗಳು ಮತ್ತು ವಿತರಣಾ ಕೇಂದ್ರಗಳಿಂದ ಸಾವಿರಾರು ಚೀಲಗಳ ಹಿಟ್ಟನ್ನು ಲೂಟಿ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಉಲ್ಲೇಖಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement