ಇಂಜಿನ್‌ಗೆ ಬೆಂಕಿ ತಗುಲಿದ ನಂತರ ತುರ್ತು ಲ್ಯಾಂಡಿಂಗ್ ಮಾಡಿದ ಅಮೆರಿಕನ್ ಏರ್‌ಲೈನ್ಸ್ ವಿಮಾನ | ವೀಕ್ಷಿಸಿ

ಭಾನುವಾರ ಅಮೇರಿಕನ್ ಏರ್ಲೈನ್ಸ್ ವಿಮಾನಕ್ಕೆ ಹಕ್ಕಿಗಳ ಹೊಡೆತದಿಂದಾಗಿ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವು ಬೆಂಕಿ ಹೊತ್ತಕೊಂಡ ನಂತರ ವಿಮಾನವು ಕೊಲಂಬಸ್‌ನ ಜಾನ್ ಗ್ಲೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿರುವುದನ್ನು ತೋರಿಸುತ್ತದೆ. ವಿಮಾನದ ಬಲ ಇಂಜಿನ್‌ನಿಂದ ಜ್ವಾಲೆ ಮತ್ತು ಹೊಗೆ ಬರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
ಟೇಕ್ ಆಫ್ ಆದ ನಂತರ ಪ್ರಮುಖ ಎಂಜಿನ್ ಸಮಸ್ಯೆಗಳೊಂದಿಗೆ AA1958 ವಿಮಾನವನ್ನು ನೋಡಿದೆ. ಇಂಜಿನ್‌ನಿಂದ ಜ್ವಾಲೆಗಳು ಮತ್ತು ವಿಮಾನದಿಂದ ಪಲ್ಸಿಂಗ್ ಶಬ್ದಗಳು ಕೇಳುತ್ತಿತ್ತು” ಎಂದು ಘಟನೆಯ ಕ್ಲಿಪ್ ಅನ್ನು ಹಂಚಿಕೊಳ್ಳುವಾಗ ಟ್ವಿಟರ್ ಬಳಕೆದಾರರು ಬರೆದಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

CNN ಪ್ರಕಾರ, ಬೋಯಿಂಗ್ 737 ಫ್ಲೈಟ್ ಕೊಲಂಬಸ್‌ನಿಂದ ಫೀನಿಕ್ಸ್‌ಗೆ ಹೊರಟಿತ್ತು, ಆದರೆ ಸಿಬ್ಬಂದಿ ಭಾನುವಾರ ಬೆಳಿಗ್ಗೆ ಹಕ್ಕಿ ವಿಮಾನಕ್ಕೆ ಡಿಕ್ಕಿ ಹೊಡೆದಿದ್ದನ್ನು ವರದಿ ಮಾಡಿದ್ದಾರೆ. ವಿಮಾನವು ಸುರಕ್ಷಿತವಾಗಿ ಲ್ಯಾಂಡ್‌ ಆಯಿತು, ಯಾರಿಗೂ ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಿಳಿಸಿದೆ, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅದು ಹೇಳಿದೆ.
ಭಾನುವಾರ ಬೆಳಿಗ್ಗೆ CMH ನಲ್ಲಿ ಸಂಭವಿಸಿದ ವಿಮಾನ ಎಂಜಿನ್ ಬೆಂಕಿ ಹೊತ್ತಿಕೊಂಡ ಘಟನೆಗೆ ತುರ್ತು ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯಿಸಿದರು. ವಿಮಾನವು ಸುರಕ್ಷಿತವಾಗಿ ಇಳಿಯಿತು ಎಂದು ಜಾನ್ ಗ್ಲೆನ್ ಕೊಲಂಬಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು NBC 4 ಗೆ ಘಟನೆಯ ಬಗ್ಗೆ ಮಾತನಾಡಿ, ತಾವು ಮತ್ತು ವಿಮಾನದಲ್ಲಿದ್ದ ಇತರರು ವಿಮಾನದಲ್ಲಿ ದೊಡ್ಡ ಶಬ್ದವನ್ನು ಕೇಳಿದೆವು, ಪೈಲಟ್ ಅವರು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹೆಬ್ಬಾತುಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದೇವೆ ಎಂದು ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ವರ್ಗೀಕೃತ ದಾಖಲೆಗಳ ತನಿಖೆ : 7 ಆರೋಪಗಳ ಮೇಲೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ

ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಿದ ನಂತರ, ಅವರೆಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಮತ್ತು ಬೆಳಿಗ್ಗೆ ಹೊರಡುವ ಮತ್ತೊಂದು ವಿಮಾನಕ್ಕೆ ಕರೆದೊಯ್ಯಲಾಯಿತು ಎಂದು ಪ್ರಯಾಣಿಕರು ಹೇಳಿದರು.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಉತ್ತರ ಕೆರೊಲಿನಾದ ಚಾರ್ಲೊಟ್ ಡೌಗ್ಲಾಸ್ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆಗುವ ಸಮಯದಲ್ಲಿ ಮತ್ತೊಂದು ವಿಮಾನ ಎಂಜಿನ್ ಬೆಂಕಿಗೆ ಆಹುತಿಯಾದ ಕೆಲವೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಆ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿತ್ತು, ನಂತರ ಇದು ಎಂಜಿನ್‌ನಲ್ಲಿ ಯಾಂತ್ರಿಕ ವೈಫಲ್ಯ ಎಂದು ವರದಿಯಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement