ಪ್ರಾಣಿಗಳು ಇತರ ಪ್ರಭೇದದ ಪ್ರಾಣಿಗಳೊಂದಿಗೆ ಆಟವಾಡುವುದಕ್ಕಿಂತ ಜಗಳವಾಡುವುದೇ ಹೆಚ್ಚು. ಕೆಲವು ಪ್ರಾಣಿಗಳು ಮಾತ್ರ ಇತರ ಪ್ರಾಣಿಗಳನ್ನು ಸ್ನೇಹಮಯವಾಗಿ ಇರುತ್ತವೆ, ಅವುಗಳೊಂದಿಗೆ ಆಟವಾಡುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ನಾಯಿ ಮರಿ ಆಮೆಯೊಂದಿಗೆ ಸೇರಿಕೊಂಡು ಫುಟ್ಬಾಲ್ ಆಟವಾಡುತ್ತಿದೆ. ಈ ನಾಯಿ ಮತ್ತು ಆಮೆ ಆಟವಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಆಮೆ ಹಾಗೂ ನಾಯಿ ಮರಿ ಹಾಗೂ ಅವುಗಳ ಪಕ್ಕದಲ್ಲೇ ದೊಡ್ಡ ಚೆಂಡೊಂದು ಕಾಣುತ್ತದೆ. ಅದನ್ನು ನಾಯಿ ಕಾಲಿನಿಂದ ದೂಡುತ್ತದೆ. ಇದನ್ನು ಕಂಡ ಆಮೆ ಬೇಗ ಓಡಿಹೋಗಿ ತನ್ನ ತಲೆಯ ಸಹಾಯದಿಂದ ಫುಟ್ಬಾಲ್ನ್ನು ತಳ್ಳುತ್ತದೆ. ಇದನ್ನು ಕಂಡು ನಾಯಿ ಮರಿಯೂ ಕೂಡ ಸಂತೋಷದಿಂದ ಜಿಗಿಯುತ್ತಾ ಚೆಂಡಿನೊಂಡಿಗೆ ಆಟವಾಡಲು ಪ್ರಾರಂಭಿಸುತ್ತದೆ. ನಾಯಿ ಮರಿ ಒಮ್ಮೆ ಚೆಂಡನ್ನು ತಳ್ಳುತ್ತಾ ಆಮೆಯಿಂದ ದೂರ ಮಾಡಿದರೆ, ಇನ್ನೊಮ್ಮೆ ಆಮೆಯ ಹಿಂದೆ ಮುಂದೆ ಕುಣಿದಾಡುತ್ತಾ ಆಟವಾಡುತ್ತದೆ.
ಈ ವಿಡಿಯೋವನ್ನು ಗೇಬ್ರಿಯೆಲ್ ಕಾರ್ನೋ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಈವರೆಗೆ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಅನೇಕರು ಈ ಮುದ್ದಾದ ವಿಡಿಯೋಗೆ ಮನಸೋತು ಕಮೆಂಟ್ ಗಳನ್ನು ಮಾಡಿದ್ದಾರೆ.
https://twitter.com/Gabriele_Corno/status/1651147867019522050?ref_src=twsrc%5Etfw%7Ctwcamp%5Etweetembed%7Ctwterm%5E1651147867019522050%7Ctwgr%5E5d60d09c86f5fc203a1abdb5c3d8742670c383a9%7Ctwcon%5Es1_&ref_url=https%3A%2F%2Fwww.dnaindia.com%2Fviral%2Freport-this-video-of-turtle-playing-football-with-dog-is-totally-aww-dorable-viral-video-3038992
ಒಬ್ಬ ಬಳಕೆದಾದರು ಅತೀ ವೇಗದ ಆಮೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ಸುಂದರವಾದ ವೀಡಿಯೊ ನನ್ನ ದಿನವನ್ನು ಸಂಪೂರ್ಣಗೊಳಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.
“ಆಮೆ ಪ್ರಪಂಚದ ಪೀಲೆ ವರ್ಸಸ್ ರೊನಾಲ್ಡೊ ಆಫ್ ದಿ ಡಾಗ್ ವರ್ಲ್ಡ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕಾಂಬಿನೇಷನ್ ಒಟ್ಟಿಗೆ ಆಡುವುದನ್ನು ಹಿಂದೆಂದೂ ನೋಡಿರಲಿಲ್ಲ. ನಾನು ಬಹಳಷ್ಟು ಅಂತರ ಪ್ರಭೇದದ ಸ್ನೇಹವನ್ನು ನೋಡುತ್ತೇನೆ. ಅದು ಅದ್ಭುತವಾಗಿದೆ! ಎಂದು ನಾಲ್ಕನೆಯವರು ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ