ಐರ್ಲೆಂಡ್‌ನ ನಾಯಿಯೊಂದು ತನ್ನ ಹೊಸ ಮಾಲೀಕನಿಂದ ತಪ್ಪಿಸಿಕೊಂಡು ತನ್ನ ಹಿಂದಿನ ಮಾಲೀಕನ ಮನೆಗೆ 64 ಕಿಮೀ ನಡೆದುಕೊಂಡು ಬಂದು ತಲುಪಿದ ನಂತರ ಸುದ್ದಿಯಲ್ಲಿದೆ…!
ಕೂಪರ್ ಎಂಬ ಹೆಸರಿನ ಈ ಗೋಲ್ಡನ್ ರಿಟ್ರಿವರ್ ನಾಯಿಯನ್ನು ಉತ್ತರ ಐರ್ಲೆಂಡ್‌ನ ಕೌಂಟಿ ಟೈರೋನ್‌ನ ಡಂಗನ್ನನ್‌ನಲ್ಲಿರುವ ಕುಟುಂಬವು ದತ್ತು ತೆಗೆದುಕೊಂಡಿತ್ತು; ಆದಾಗ್ಯೂ, ಆ ಗಂಡು ನಾಯಿ ತನ್ನ ಹೊಸ ಮಾಲೀಕನ ಮನೆಯಲ್ಲಿ ಸಂತೋಷವಾಗಿರಲಿಲ್ಲ. ನಂತರ ಆ ನಾಯಿ ತಮ್ಮ ಮೂಲ ಮನೆಗೆ ಹೋಗಲು ಅನುಸರಿಸಿದ್ದು ಮಾತ್ರ ಅಪಾಯಕಾರಿ ಮಾರ್ಗವನ್ನು. ಮಾಧ್ಯಮ ವರದಿಗಳ ಪ್ರಕಾರ, ನಾಯಿಯ ಹಿಂದಿನ ಮಾಲೀಕರು ನಾಯಿಯನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದ ಕಾರಣ ಅವರು ನಾಯಿಯನ್ನು ಬೇರೆಯವರಿಗೆ ದತ್ತು ನೀಡಿದ್ದರು.
25 ದಿನಗಳ ಕಾಲ ಹುಡುಕಾಟದ ತಂಡದಿಂದ ತಪ್ಪಿಸಿಕೊಂಡು ಮೂಲ ಮನೆ ತಲುಪಿತ್ತು…!
ವರದಿಯ ಪ್ರಕಾರ, ನಾಯಿಯು ತನ್ನ ಹೊಸ ಸ್ಥಳದಲ್ಲಿ ಕೆಲವೇ ಗಂಟೆಗಳನ್ನು ಕಳೆದಿದೆ, ಅಲ್ಲಿ ತನ್ನ ತನ್ನ ಹೊಸ ರೂಮ್‌ಮೇಟ್ ‘ಮೊಲಿ’ ಯೊಂದಿಗೆ ಅದು ವಾಸಿಸಬೇಕಾಗಿತ್ತು. ಆದರೆ, ನಾಯಿ ಕೆಲವೇ ಗಂಟೆಗಳಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹೊಸ ಮಾಲೀಕರಿಗೆ ಕಾಣೆಯಾದ ಸಾಕುಪ್ರಾಣಿಗಳ ಚಾರಿಟಿ, ಲಾಸ್ಟ್ ಪಾವ್ಸ್ ಎನ್‌ಐ ಸಂಸ್ಥೆ ಈ ನಾಯಿ ಹುಡುಕಾಟದ ಪ್ರಯತ್ನಗಳಲ್ಲಿ ಸಹಾಯ ಮಾಡಿತು. ಆದಾಗ್ಯೂ, ಗೋಲ್ಡನ್ ರಿಟ್ರಿವರ್ 25 ದಿನಗಳವರೆಗೆ ಇವರ ಹುಡುಕಾಟದ ತಂಡದಿಂದ ತಪ್ಪಿಸಿಕೊಂಡು ತಿರುಗುತ್ತಿತ್ತು ಹಾಗೂ ಮೂಲ ಮಾಲೀಕನ ಮನೆಗೆ ಹೋಗಲು ತನಗೆ ಗೊತ್ತಿರದ ದಾರಿಗಾಗಿ ಹುಡುಕಾಟ ನಡೆಸಿತ್ತು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಏಪ್ರಿಲ್ 22 ರಂದು, ಚಾರಿಟಿಯು ಇತರ ಸಾಕುಪ್ರಾಣಿ ಮಾಲೀಕರಿಂದ ನಾಯಿ ಕೂಪರ್ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ಅವರು ಸ್ಥಳೀಯ ಹೊಲಗಳ ಸುತ್ತ ಈ ನಾಯಿ ತಿರುಗಾಡುತ್ತಿರುವುದನ್ನು ಕಂಡಿದ್ದರು. ನಂತರ ಏಪ್ರಿಲ್ 27 ರಂದು, ಗೋಲ್ಡನ್ ರಿಟ್ರಿವರ್ ನಾಯಿ ತನ್ನ ಮೂಲ ಮನೆಗೆ ಓಡಿಹೋಗುತ್ತಿರುವುದನ್ನು ಗುರುತಿಸಿದ ಸ್ಥಳೀಯರು ಚಾರಿಟಿಗೆ ಮಾಹಿತಿ ನೀಡಿದ್ದರು.
27 ದಿನಗಳ ದೀರ್ಘ ಪ್ರಯಾಣದ ನಂತರ ಮೂಲ ಮನೆಗೆ….
ಲಾಸ್ಟ್ ಪಾವ್ಸ್ ಎನ್‌ಐ ಯ ಹೇಳಿಕೆಯ ಪ್ರಕಾರ, ನಾಯಿಯು ತನ್ನ ಹಿಂದಿನ ಮನೆಗೆ ಹಿಂದಿರುಗುವ ದಾರಿಯಲ್ಲಿ 27 ದಿನಗಳ ಓಡಾಟ ಮತ್ತು ದಾರಿಗಾಗಿ ಹುಡುಕಾಟ ನಡೆಸಿತ್ತು. ಟ್ರಾಫಿಕ್ ಮತ್ತು ಮಾನವ ಸಂಪರ್ಕವನ್ನು ತಪ್ಪಿಸಿಕೊಂಡು ತಿರುಗುತ್ತಿತ್ತು. ಲಾಸ್ಟ್ ಪಾವ್ಸ್ ಎನ್‌ಐ ತನ್ನ ಹೇಳಿಕೆಯಲ್ಲಿ, “ನಾವು ಅದರ ಹೊಸ ಮಾಲೀಕರಾದ ನಿಗೆಲ್ ಅವರನ್ನು ತಕ್ಷಣವೇ ಸಂಪರ್ಕಿಸಿದ್ದೇವೆ ಮತ್ತು ಸುಮಾರು 20 ನಿಮಿಷಗಳ ನಂತರ ನಮ್ಮ ಇನ್‌ಬಾಕ್ಸ್‌ಗೆ ತೊಂದರೆ ಸ್ಥಿತಿಯಲ್ಲಿದ್ದ ಆದರೆ ಉಸಿರಾಡುತ್ತಿರುವ ಕೂಪರ್‌ನ ಫೋಟೋ ಬಂದಿತು, ಅದನ್ನು ನೋಡಲು ನಾವು ಸಂಪೂರ್ಣವಾಗಿ ಉತ್ಸುಕರಾಗಿದ್ದೆವು ಎಂದು ತಿಳಿಸಿದೆ.
ನಾಯಿಯು ತಾನು ಮೂಲತಃ ತನ್ನ ಮನೆಯೆಂದು ಭಾವಿಸಿದ ಸ್ಥಳಕ್ಕೆ ಹೋಗಲು ಅದಕ್ಕೆ ತನ್ನ ಮೂಗಿನ ವಾಸನಾ ಶಕ್ತಿ ಬಿಟ್ಟರೆ ಬೇರೆ ಯಾವುದೇ ದಾರಿ ಇರಲಿಲ್ಲ, ಹಾಗೂ ಸಹಾಯವೂ ಇರಲಿಲ್ಲ. ನಾಯಿ ಡುಂಗನ್ನನ್‌ನಿಂದ ಕುಕ್ಸ್‌ಟೌನ್‌ಗೆ ಮಾಘೆರಾಫೆಲ್ಟ್‌ಗೆ ಮತ್ತು ಅಂತಿಮವಾಗಿ ಟೋಬರ್‌ಮೋರ್‌ಗೆ ಯಾವುದೇ ಮಾನವ ಸಹಾಯವಿಲ್ಲದೆ ಮತ್ತು ಯಾವುದೇ ಆಹಾರವಿಲ್ಲದೆ ತನ್ನ ಮೂಲ ಮಾಲೀಕನನ್ನು ಹುಡುಕುತ್ತ ಸಾಗಿದೆ.
“ಕೂಪರ್ ತಾನು ಹಿಂದೆಂದೂ ನೋಡಿರದ ಪ್ರದೇಶದಿಂದ ಮನೆಗೆ ಹಿಂದಿರುಗಲು 27 ದಿನಗಳ ಕಾಲ ಪ್ರಮುಖ ರಸ್ತೆಗಳು, ನಗರಗಳು. ಕಾಡುಗಳು, ಹೊಲಗಳು, ಹಳ್ಳಿಗಾಡಿನ ರಸ್ತೆಗಳನ್ನು ದಾಟುತ್ತ ಸಾಗಿದೆ. ಅದರ ರಕ್ಷಣೆ ಮತ್ತು ಕಥೆಯ ಭಾಗವಾಗಿರುವುದಕ್ಕೆ ನಾವು ಸಂಪೂರ್ಣವಾಗಿ ಸಂತೋಷಪಡುತ್ತೇವೆ ಎಂದು ಲಾಸ್ಟ್ ಪಾವ್ಸ್ ಎನ್ಐನ ವಕ್ತಾರರು ಹೇಳಿದ್ದಾರೆ.
ಲಾಸ್ಟ್ ಪಾವ್ಸ್ ಎನ್ಐನ ವಕ್ತಾರರು, ”ಕೂಪರ್ ಒಂದು ಬುದ್ಧಿವಂತ ಗಂಡು ನಾಯಿ. ಸಹಜತೆ ಅದನ್ನು ಮತ್ತೆ ತನಗೆ ಪರಿಚಯವಿದ್ದ ಜಾಗಕ್ಕೆ ಕರೆದೊಯ್ದಿತು. ಅದನ್ನು ನಾಯಿ ಹೇಗೆ ಮಾಡಿತು ಎಂಬುದು ನನಗೆ ಗೊತ್ತಿಲ್ಲ ಆದರೆ ನಾಯಿ ಅದನ್ನು ನಿರ್ವಹಿಸಿತು. ಆಹಾರವಿಲ್ಲ, ಆಶ್ರಯವಿಲ್ಲ, ಸಹಾಯವಿಲ್ಲ, ಕೇವಲ ದೃಢನಿಶ್ಚಯ ಮತ್ತು ತನ್ನ ಮೂಲ ಮಾಲೀಕನ ಮೇಲಿನ ಪ್ರೀತಿ ಅದನ್ನು ಅಲ್ಲಿಗೆ ಕೊಂಡೊಯ್ದಿದೆ ಎಂದು ಹೇಳಿದ್ದಾರೆ.
ನಾವು ನಾಯಿಯನ್ನು ಮತ್ತೆ ಹೊಸ ಮಾಲೀಕನಿಗೆ ಹಿಂತಿರುಗಿಸಿದ್ದೇವೆ. ಈಗ ಕೂಪರ್ ತನ್ನ ಸಹೋದರಿಯೊಂದಿಗೆ ತನ್ನ ಹೊಸ ಮನೆಯ ಜೀವನದಲ್ಲಿ ಚೆನ್ನಾಗಿ ನೆಲೆಸಿದೆ. ಅದರ ಹೊಸ ಮಾಲೀಕ ನಿಗೆಲ್ ಈ ನಾಯಿಗಾಗಿ ಹುಡುಕುವುದನ್ನು ಕೊನೆಯ ವರೆಗೂ ನಿಲ್ಲಿಸಲಿಲ್ಲ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ