ಶೀಘ್ರದಲ್ಲೇ ಟ್ವಿಟರಿನಲ್ಲಿ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಬಹುದು…!

ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ಶೀಘ್ರದಲ್ಲೇ ಹೊಸ ಫೀಚರ್‌ಗಳನ್ನು ಪರಿಚಯಿಸಲಿದೆ. ಟ್ವಿಟರ್ ಶೀಘ್ರದಲ್ಲೇ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮತ್ತು ಎನ್‌ಕ್ರಿಪ್ಟ್ ಮಾಡಿದ ಸಂದೇಶವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಟರ್‌ ಅನುಮತಿಸುತ್ತದೆ ಎಂದು ಎಲೋನ್ ಮಸ್ಕ್ ಪ್ರಕಟಿಸಿದ್ದಾರೆ. ಕೆಲವೇ ದಿನಗಳಲ್ಲಿ ನಿಮ್ಮ ಮೊಬೈಲ್‌ ನಂಬರ್‌ ಕೊಡದೆಯೇ ವೀಡಿಯೊ ಕಾಲ್ ಹಾಗೂ ವಾಯ್ಸ್ ಕರೆಗಳನ್ನು ಮಾಡಬಹುದು ಎಂದು ಮಸ್ಕ್‌ ತಿಳಿಸಿದ್ದಾರೆ.
ಈ ಬಗ್ಗೆ ಟ್ವಟರ್‌ ಮುಖ್ಯಸ್ಥ ಎಲೋನ್‌ ಮಸ್ಕ್‌ ಟ್ವೀಟ್‌ ಮಾಡಿದ್ದು, ಟ್ವಿಟರ್‌ ಹ್ಯಾಂಡಲ್‌ ಹೊಂದಿರುವ ಖಾತೆದಾರರು ಮೊಬೈಲ್‌ ನಂಬರ್‌ ನೀಡಿದೆಯೇ ವಿಶ್ವದ ಯಾವುದೇ ಪ್ರದೇಶಗಳಿಗೆ ವಾಯ್ಸ್ ಹಾಗೂ ವೀಡಿಯೊ ಕರೆಗಳನ್ನು ಮಾಡಬಹುದು ಎಂದು ತಿಳಿಸಿದ್ದಾರೆ.
ಇತರ ಸಾಮಾಜಿಕ ಮಾಧ್ಯಮಗಳಾದ ವಾಟ್ಸ್‌ಆ್ಯಪ್‌, ಫೇಸ್‌ಬುಕ್ ಹಾಗೂ ಇನ್‍ಸ್ಟಾ ಗ್ರಾಮ್‌ಗೆ ಸಮಾನವಾದ ವೈಶಿಷ್ಟ್ಯ ಗಳನ್ನು ಪರಿಚಯಿಸುವ ಸಲುವಾಗಿ ಟ್ವಟರಿನಲ್ಲಿ ನೂತನ ಫೀಚರ್‌ಗಳನ್ನು ಪರಿಚಯಿಸಲಾಗುತ್ತಿದೆ.

ಇದಲ್ಲದೆ, ಎನ್‍ಕ್ರಿಪ್ಟ್ ಮಾಡಿದ ನೇರ ಸಂದೇಶಗಳ ಆವೃತ್ತಿಯು ಇಂದಿನಿಂದ ಟ್ವಿಟರ್‌ನಲ್ಲಿ ಲಭ್ಯವಿರುತ್ತದೆ. ಆದರೆ ಕರೆಗಳನ್ನು ಎನ್‍ಕ್ರಿಪ್ಟ್ ಮಾಡಲಾಗುತ್ತದೆಯೇ ಎಂಬ ಬಗ್ಗೆ ತಿಳಿಸಲಾಗಿಲ್ಲ. ಟ್ವಿಟರ್‌ ಹಲವು ವರ್ಷಗಳಿಂದ ನಿಷ್ಕ್ರಿಯವಾಗಿರುವ ಖಾತೆಗಳನ್ನು ರದ್ದುಗೊಳಿಸಲಿದ್ದು, ಟ್ವಿಟರ್‌ ಖಾತೆ ರದ್ದುಗೊಳ್ಳುವುದನ್ನು ತಡೆಯಲು ಬಳಕೆದಾರರು ಕನಿಷ್ಠ 30 ದಿನಗಳಿಗೊಮ್ಮೆ ತಮ್ಮ ಖಾತೆಗೆ ಲಾಗ್ ಇನ್‌ ಮಾಡಬೇಕು ಎಂದು ಮಸ್ಕ್‌ ಕೆಲವು ದಿನಗಳ ಹಿಂದೆ ತಿಳಿಸಿದ್ದರು.

ಎಲೋನ್ ಮಸ್ಕ್‌ ಟ್ವಿಟರ್‌ ಖರೀದಿಸಿದ ನಂತರ ಹಲವು ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಖ್ಯಾತನಾಮರ ಅಧಿಕೃತ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ತೆಗೆದು ಹಾಕುವುದರ ಮೂಲಕ ತಿಂಗಳಿಗೆ 8 ಡಾಲರ್ ಪಾವತಿಸಿದರೆ ಮಾತ್ರ ಬ್ಲೂಟಿಕ್ ಕೊಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿತ್ತು.

ಪ್ರಮುಖ ಸುದ್ದಿ :-   ಅನ್ಯಗ್ರಹದ ಲೋಹಗಳಿಂದ ತಯಾರಿಸಲಾದ 3000 ವರ್ಷಗಳಷ್ಟು ಪುರಾತನ ಚಿನ್ನದ ಕಲಾಕೃತಿಗಳು ಪತ್ತೆ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement