ಅದಾನಿ ವಿರುದ್ಧ ಹಿಂಡೆನ್‌ಬರ್ಗ್‌ ವರದಿ : ತಜ್ಞರ ಸಮಿತಿ ವರದಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಉದ್ಯಮಿ ಗೌತಮ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಗೆ ಸಂಬಂಧಿಸಿದ ತನಿಖೆ ಪೂರ್ಣಗೊಳಿಸಲು ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮೂರು ತಿಂಗಳು ಮಾತ್ರ ಕಾಲಾವಕಾಶ ನೀಡಲು ಸಾಧ್ಯ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಹೇಳಿದೆ. ತನಿಖಾ ವರದಿ ಸಲ್ಲಿಸಲು ಆರು ತಿಂಗಳು ಕಾಲಾವಕಾಶ ನೀಡುವಂತೆ ಕೋರಿ ಸೆಬಿ ಸಲ್ಲಿಸಿದ್ದ … Continued

ಜ್ಞಾನವಾಪಿ ಮಸೀದಿಯಲ್ಲಿನ ‘ಶಿವಲಿಂಗ’ ರಚನೆಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ಆದೇಶ

ಪ್ರಯಾಗರಾಜ್: ವಾರಾಣಸಿಯ ಜ್ಞಾನವಾಪಿ ಮಸೀದಿಯೊಳಗೆ ಹಿಂದೂ ಅರ್ಜಿದಾರರು “ಶಿವಲಿಂಗ” ಎಂದು ಹೇಳುವ ರಚನೆಯ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಿದೆ. ವಾರಾಣಸಿ ಜಿಲ್ಲಾ ನ್ಯಾಯಾಲಯವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮೀಕ್ಷೆಗಾಗಿ ಅರ್ಜಿದಾರರ ಮನವಿಯನ್ನು ನಿರಾಕರಿಸಿತ್ತು. ಗುರುವಾರದ ಆದೇಶದಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ರಚನೆಯ ಸಮೀಕ್ಷೆಯಲ್ಲಿ … Continued

ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್ ಬಂಧಿಸಿದ ಅಧಿಕಾರಿ ವಿರುದ್ಧ ಸಿಬಿಐನಿಂದ ಭ್ರಷ್ಟಾಚಾರ ಪ್ರಕರಣ ದಾಖಲು

ನವದೆಹಲಿ: ಎರಡು ವರ್ಷಗಳ ಹಿಂದೆ ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ ಬಂಧಿಸಿದ್ದ ಮಾದಕ ದ್ರವ್ಯ ನಿಗ್ರಹ (ಎನ್‌ಸಿಬಿ) ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ. ಸಮೀರ್‌ ವಾಂಖೆಡೆ ಮತ್ತು ಇತರರು ಆಪಾದಿತ ಮಾದಕವಸ್ತು ದಂಧೆಯಲ್ಲಿ ಆರ್ಯನ್ ಖಾನ್ ಅವರನ್ನು … Continued

ಪತ್ನಿಯ ಶೋಕಿಗೆ ಮನನೊಂದು ಇಬ್ಬರು ಮಕ್ಕಳನ್ನು ಕೊಂದು ತಾನೂ ನೇಣಿಗೆ ಶರಣು

posted in: ರಾಜ್ಯ | 0

ಬೆಂಗಳೂರು : ಇಬ್ಬರು ಮಕ್ಕಳನ್ನು ಕೊಂದು ತಂದೆ ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್​​ನಲ್ಲಿ ನಡೆದ ವರದಿಯಾಗಿದೆ. ಆನೇಕಲ್​​ನ ಕೊಪ್ಪ ಸಮೀಪದ ನಿರ್ಮಾಣ ಬಡಾವಣೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಮೃತರನ್ನು ಬಿಟಿಎಂ ಬಡಾವಣೆ ನಿವಾಸಿ ಹರೀಶ್ ( 35) ಮಕ್ಕಳಾದ ಪ್ರಜ್ವಲ (6) ರಿಷಬ್(4) ಎಂದು ಗುರುತಿಸಲಾಗಿದೆ. ಮೇ 10ರಂದು … Continued

ಬಿಯರಿನಿಂದ ಓಡುವ ಮೋಟಾರ್‌ ಸೈಕಲ್ ತಯಾರಿಸಿದ ವ್ಯಕ್ತಿ…! ಗಂಟೆಗೆ 240 ಕಿಮೀ ವೇಗದ ವರೆಗೆ ಹೋಗಬಹುದಂತೆ | ವೀಕ್ಷಿಸಿ

ರಾಕೆಟ್-ಚಾಲಿತ ಶೌಚಾಲಯ ಮತ್ತು ಜೆಟ್-ಚಾಲಿತ ಕಾಫಿ ಪಾಟ್‌ನಂತಹ ಅಸಾಮಾನ್ಯ ಆವಿಷ್ಕಾರಗಳನ್ನು ಮಾಡಿ ಪ್ರಸಿದ್ಧವಾದ ಅಮೆರಿಕದ ಕೇಯ್‌ ಮೈಕೆಲ್ಸನ್, ಈಗ ಮತ್ತೊಂದು ಆವಿಷ್ಕಾರ ಮಾಡಿದ್ದಾರೆ. ಅವರು  ಬಿಯರ್-ಚಾಲಿತ ಮೋಟಾರ್‌ ಸೈಕಲ್ ಮಾಡಿ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿದ್ದು, ಇದು ಗಂಟೆಗೆ ಗರಿಷ್ಠ 240 ಕಿ.ಮೀ ವೇಗದಲ್ಲಿ ಓಡುತ್ತದೆ ಎಂದು ಹೇಳಿಕೊಂಡಿದ್ದಾರೆ. Fox9 ನೊಂದಿಗೆ ಮಾತನಾಡಿದ ಮೈಕೆಲ್ಸನ್ ಅವರು, ಮೋಟಾರ್‌ಸೈಕಲ್ಲಿಗೆ ತಾನು … Continued

ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮಪಟ್ಟಿದ್ದೇನೆ, ಎಲ್ಲರೂ ನನಗೆ ಸಹಕಾರ ಕೊಟ್ಟು, ಆಶೀರ್ವಾದ ಮಾಡ್ತಾರೆ : ಡಿಕೆ ಶಿವಕುಮಾರ ಹೇಳಿಕೆಯ ಮರ್ಮವೇನು..?

posted in: ರಾಜ್ಯ | 0

ಬೆಂಗಳೂರು: ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ದಿನದಿಂದಲೇ ನಿದ್ದೆ ಮಾಡದೆ ಕಾಂಗ್ರೆಸ್‌ ಪಕ್ಷಕ್ಕಾಗಿ ಶ್ರಮ ಪಟ್ಟು ಕೆಲಸ ಮಾಡಿದ್ದೇನೆ. ಅದಕ್ಕಾಗಿ ಹಿರಿಯರು-ಕಿರಿಯರು ಸೇರಿದಂತೆ ಎಲ್ಲರೂ ನನಗೆ ಆಶೀರ್ವಾದ ಮಾಡುತ್ತಾರೆ, ಕಾಂಗ್ರೆಸ್ ಉತ್ತಮ ಸರ್ಕಾರ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾರ್ಮಿಕವಾಗಿ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದೆ ಅಧ್ಯಕ್ಷರಾಗಿದ್ದ ದಿನೇಶ … Continued

ಕಾಕ್‌ಪಿಟ್‌ಗೆ ಬರಲು ಸ್ನೇಹಿತೆಗೆ ಅವಕಾಶ ನೀಡಿದ ಏರ್ ಇಂಡಿಯಾ ಪೈಲಟ್ ಅಮಾನತು : ಏರ್‌ಲೈನ್ಸ್‌ ಸಂಸ್ಥೆಗೆ 30 ಲಕ್ಷ ರೂ. ದಂಡ

ನವದೆಹಲಿ: ಫೆಬ್ರವರಿಯಲ್ಲಿ ದುಬೈನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವಿಮಾನದ ವೇಳೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಮಹಿಳಾ ಸ್ನೇಹಿತೆಗೆ ಕಾಕ್‌ಪಿಟ್‌ಗೆ ಪ್ರವೇಶಿಸಲು ಮತ್ತು ಅಲ್ಲೇ ಇರಲು ಅವಕಾಶ ಮಾಡಿಕೊಟ್ಟ ಏರ್ ಇಂಡಿಯಾ ಪೈಲಟ್‌ ಒಬ್ಬರಿಗೆ ಮೂರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಮತ್ತು ವಿಮಾನಯಾನ ಸಂಸ್ಥೆಗೆ ₹ 30 ಲಕ್ಷ ದಂಡ ವಿಧಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ತಿಳಿಸಿದೆ. “ವಿಮಾನದ … Continued

ತನ್ನ ಯೂಟ್ಯೂಬ್‌ ವೀಕ್ಷಣೆ ಹೆಚ್ಚಿಸಲು ವಿಮಾನವನ್ನೇ ಅಪಘಾತ ಮಾಡಿದ ಯೂಟ್ಯೂಬರ್‌ಗೆ 20 ವರ್ಷದ ವರೆಗೆ ಜೈಲು ಶಿಕ್ಷೆ ಸಾಧ್ಯತೆ | ವೀಕ್ಷಿಸಿ

ತನ್ನ ಯೂಟ್ಯೂಬ್‌ ಚಾನೆಲ್‌ ವೀಕ್ಷಣೆ ಹೆಚ್ಚಿಸಲು ಉದ್ದೇಶಪೂರ್ವಕವಾಗಿ ತನ್ನ ವಿಮಾನವನ್ನು ನೆಲಕ್ಕೆ ಅಪ್ಪಳಿಸುವಂತೆ ಮಾಡಿದ ಯೂಟ್ಯೂಬರ್‌ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಅಮೆರಿಕದ ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಟ್ರೆವರ್ ಜಾಕೋಬ್ ಎಂಬಾತ ಫೆಡರಲ್ ತನಿಖೆಯನ್ನು ತಡೆಯುವ ಉದ್ದೇಶದಿಂದ ಸಾಕ್ಷ್ಯ ನಾಶ ಮಾಡಿದ್ದು, ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಅಪರಾಧವು ಫೆಡರಲ್ … Continued

ಪಾಕ್ ಸುಪ್ರೀಂ ಕೋರ್ಟ್ ಬಂಧನ “ಅಕ್ರಮ” ಎಂದ ಮರುದಿನ ಇಮ್ರಾನ್ ಖಾನಗೆ ಎರಡು ವಾರಗಳ ಜಾಮೀನು

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಎರಡು ವಾರಗಳ ಜಾಮೀನು ಮಂಜೂರು ಮಾಡಿದೆ. ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್‌ ಖಾನ್ ಅವರ ಬಂಧನವನ್ನು ಎತ್ತಿಹಿಡಿದಿತ್ತು. ಆದರೆ ಗುರುವಾರ ಮೂವರು ಸದಸ್ಯರ ಸುಪ್ರೀಂ ಕೋರ್ಟ್ ಪೀಠವು ಅವರ ಬಂಧನವನ್ನು “ಕಾನೂನುಬಾಹಿರ” ಎಂದು ಹೇಳಿತು ಮತ್ತು ತಕ್ಷಣ ಅವರನ್ನು ಬಿಡುಗಡೆ … Continued

ʼಕೇರಳ ಸ್ಟೋರಿʼ ಸಿನೆಮಾ ಬೇರೆಡೆ ಬಿಡುಗಡೆಯಾಗಿದೆ; ಪಶ್ಚಿಮ ಬಂಗಾಳ ಭಿನ್ನವಾಗಿಲ್ಲ: ಸಿನಿಮಾ ನಿಷೇಧದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

ನವದೆಹಲಿ: ರಾಜ್ಯದಲ್ಲಿ ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸುವ ನಿರ್ಧಾರದ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. “ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ಏಕೆ ಬಿಡುಗಡೆ ಮಾಡಬಾರದು? ಚಿತ್ರವು ದೇಶದ ಉಳಿದ ಭಾಗಗಳಲ್ಲಿ ಓಡುತ್ತಿದೆ” ಎಂದು ನ್ಯಾಯಾಲಯವು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಮೌಖಿಕವಾಗಿ ಟೀಕಿಸಿತು. “ಪಶ್ಚಿಮ … Continued