ಪಾಕ್ ಸುಪ್ರೀಂ ಕೋರ್ಟ್ ಬಂಧನ “ಅಕ್ರಮ” ಎಂದ ಮರುದಿನ ಇಮ್ರಾನ್ ಖಾನಗೆ ಎರಡು ವಾರಗಳ ಜಾಮೀನು

ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ಎರಡು ವಾರಗಳ ಜಾಮೀನು ಮಂಜೂರು ಮಾಡಿದೆ.
ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್‌ ಖಾನ್ ಅವರ ಬಂಧನವನ್ನು ಎತ್ತಿಹಿಡಿದಿತ್ತು. ಆದರೆ ಗುರುವಾರ ಮೂವರು ಸದಸ್ಯರ ಸುಪ್ರೀಂ ಕೋರ್ಟ್ ಪೀಠವು ಅವರ ಬಂಧನವನ್ನು “ಕಾನೂನುಬಾಹಿರ” ಎಂದು ಹೇಳಿತು ಮತ್ತು ತಕ್ಷಣ ಅವರನ್ನು ಬಿಡುಗಡೆ ಮಾಡಲು ಆದೇಶಿಸಿತು.
ಭದ್ರತಾ ಕಾರಣಗಳಿಂದ ಶುಕ್ರವಾರದ ವಿಚಾರಣೆಯು ಸುಮಾರು ಎರಡು ಗಂಟೆಗಳ ಕಾಲ ವಿಳಂಬವಾಯಿತು. ಇಮ್ರಾನ್‌ ಖಾನ್‌ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಸುರಕ್ಷಿತ ಬೆಂಗಾವಲು ಪಡೆ ರಕ್ಷಣೆಯಲ್ಲಿ ಬಂದರು.
ನ್ಯಾಯಾಲಯವು ಇಮ್ರಾನ್ ಖಾನ್‌ಗೆ ಎರಡು ವಾರಗಳ ಮಧ್ಯಂತರ ಜಾಮೀನು ನೀಡಿದೆ ಮತ್ತು ಪ್ರಕರಣದಲ್ಲಿ ಅವರನ್ನು ಬಂಧಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ” ಎಂದು ಇಮ್ರಾನ್‌ ಖಾನ್ ಅವರ ವಕೀಲ ಖವಾಜಾ ಹ್ಯಾರಿಸ್ ಸುದ್ದಿ ಸಂಸ್ಥೆ AFPಗೆ ತಿಳಿಸಿದ್ದಾರೆ.

ಹಲವಾರು ಕಾನೂನು ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಖಾನ್ ಅವರನ್ನು ಮತ್ತೆ ಬಂಧಿಸಲು ಆಂತರಿಕ ಸಚಿವರು ವಾಗ್ದಾನ ಮಾಡಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಪ್ರಧಾನಿ ಹುದ್ದೆಯಿಂದ ಪದಚ್ಯುತಗೊಂಡಿದ್ದ ಇಮ್ರಾನ್‌ ಖಾನ್ ಅವರನ್ನು ಮಂಗಳವಾರ ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಲಾಯಿತು, ದೇಶದ ಉನ್ನತ ಭ್ರಷ್ಟಾಚಾರ ವಿರೋಧಿ ಸಂಸ್ಥೆಯಾದ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) ಅವರನ್ನು ಬಂಧಿಸಿತು.
ಬಂಧನವು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಯಿತು. ಹಲವೆಡೆ ಸೇನೆಯ ನಿಯೋಜನೆ ಮಾಡಲಾಯಿತು. ಅಶಾಂತಿಯಲ್ಲಿ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮತ್ತು ಆಸ್ಪತ್ರೆಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

ಇಮ್ರಾನ್‌ ಖಾನ್ ಅವರು ಹಿರಿಯ ಮಿಲಿಟರಿ ಮತ್ತು ಸರ್ಕಾರಿ ಅಧಿಕಾರಿಗಳು ನವೆಂಬರ್ ಹತ್ಯೆಯ ಯತ್ನದ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಗಳು ಅಕ್ಟೋಬರ್‌ನ ನಂತರ ನಡೆಯಲಿವೆ. ಇಮ್ರಾನ್‌ ಖಾನ್ ಅವರನ್ನು ಪದಚ್ಯುತಗೊಳಿಸಿದಾಗಿನಿಂದ ಅವರು ಹೆಚ್ಚು ಜನಪ್ರಿಯವಾಗಿದ್ದಾರೆ.
ತಮ್ಮ ಹತ್ಯೆಯ ಯತ್ನದಲ್ಲಿ ಸೇನೆಯ ಹಿರಿಯ ಅಧಿಕಾರಿ ಭಾಗಿಯಾಗಿದ್ದಾರೆ ಎಂದು ಪುನರಾವರ್ತಿತ ಆರೋಪಗಳನ್ನು ಸೇನೆಯು ಖಂಡಿಸಿದ ನಂತರ ಈ ವಾರ ಅವರ ಬಂಧನವು ಸಂಭವಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement