ದೇವಸ್ಥಾನದಿಂದ ಕದ್ದ ಎಲ್ಲ ಆಭರಣಗಳನ್ನು 9 ವರ್ಷಗಳ ಬಳಿಕ ಹಿಂದಿರುಗಿಸಿದ ಕಳ್ಳ…ಕ್ಷಮೆಯಾಚನೆ ಪತ್ರದ ಜೊತೆಗೆ ಪ್ರಾಯಶ್ಚಿತಕ್ಕೆ ದಂಡದ ಹಣವನ್ನೂ ಇಟ್ಟುಹೋದ..!

ಭುವನೇಶ್ವರ : ದೇವಸ್ಥಾನದಿಂದ ಕಳ್ಳತನ ಮಾಡಿದ್ದ ಆಭರಣಗಳನ್ನು ಅನಾಮಧೇಯ ಕಳ್ಳನೊಬ್ಬ 9 ವರ್ಷಗಳ ಬಳಿಕ ಅದನ್ನು ಹಿಂತಿರುಗಿಸಿದ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ರಾಜಧಾನಿ ಭುವನೇಶ್ವರದ ಧೌಲಿ ಪ್ರದೇಶದಲ್ಲಿರುವ ಗೋಪಿನಾಥಪುರದ ಗೋಪಿನಾಥ ದೇವಸ್ಥಾನದಿಂದ 2014ರ ಮೇ ತಿಂಗಳಿನಲ್ಲಿ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಕಿವಿಯೋಲೆ, ಬಳೆಗಳು, ಕೊಳಲು ಮತ್ತು ತಲೆಯ ಕವಚ ಸೇರಿದಂತೆ ಒಟ್ಟು ₹4 ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು.
ಆದರೆ ಬರೋಬ್ಬರಿ 9 ವರ್ಷಗಳ ಬಳಿಕ ಕಳ್ಳತನ ಮಾಡಿದ್ದ ಎಲ್ಲ ಆಭರಣಗಳನ್ನು ದೇವಸ್ಥಾನಕ್ಕೆ ಹಿಂತಿರುಗಿಸಿರುವ ಕಳ್ಳ, ಆಭರಣಗಳ ಬ್ಯಾಗ್‌ ಜೊತೆಗೆ ಕ್ಷಮಾಪಣಾ ಪತ್ರವನ್ನೂ ಬರೆದಿಟ್ಟು ತೆರಳಿದ್ದಾನೆ. ಆ ವ್ಯಕ್ತಿ ಇತ್ತೀಚೆಗೆ ತಾನು ಭಗವದ್ಗೀತೆ ಓದಿರುವುದಾಗಿ ಹೇಳಿದ್ದಾನೆ ಮತ್ತು ಅದನ್ನು ಓದಿದ ನಂತರ ತಾನು ತಪ್ಪು ದಾರಿಯಲ್ಲಿ ಸಾಗಿರುವುದನ್ನು ಅರಿತುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ʻದೇವಸ್ಥಾನದಲ್ಲಿ ಯಜ್ಞ ನಡೆಯುತ್ತಿದ್ದಾಗ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದೆ. ಆದರೆ ನಂತರದ ದಿನಗಳಲ್ಲಿ ನಾನು ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಆದ್ದರಿಂದ, 9 ವರ್ಷಗಳ ನಂತರ ನಾನು ದೇವರ ಮುಂದೆ ಶರಣಾಗಲು ಮತ್ತು ಆಭರಣಗಳನ್ನು ಹಿಂದಿರುಗಿಸಲು ನಿರ್ಧರಿಸಿದೆ. ನಾನು ಹೆಸರು, ವಿಳಾಸ ಅಥವಾ ಗ್ರಾಮವನ್ನು ಉಲ್ಲೇಖಿಸುತ್ತಿಲ್ಲ. ನನ್ನ ಕೃತ್ಯಕ್ಕೆ ವಿಷಾದಿಸುತ್ತೇನೆ, ಕ್ಷಮಿಸಿʼ ಎಂದು ಆತ ಪತ್ರದಲ್ಲಿ ಬರೆದಿದ್ದಾನೆ.

ಇಂದಿನ ಪ್ರಮುಖ ಸುದ್ದಿ :-   ಜೂನ್ 23 ರಂದು ನಿತೀಶ್ ಕುಮಾರ್ ಕರೆದ ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವೆ: ಶರದ್ ಪವಾರ್

ಬೆಳ್ಳಿ ಆಭರಣಗಳಿದ್ದ ಬ್ಯಾಗ್‌ ಜೊತೆಗೆ ದೇವಸ್ಥಾನಕ್ಕೆ ದೇಣಿಗೆಯಾಗಿ 201 ರೂಪಾಯಿ ಮತ್ತು ಕಳ್ಳತನಕ್ಕೆ ಪ್ರಾಯಶ್ಚಿತವಾಗಿ 100 ದಂಡ ಸೇರಿದಂತೆ ಒಟ್ಟು 301 ರೂಪಾಯಿಯನ್ನು ʻಅನಾಮಧೇಯ ಕಳ್ಳʼ ಪತ್ರದ ಜೊತೆಗಿರಿಸಿದ್ದಾನೆ ಎಂದು ದೇವಸ್ಥಾನದ ಅರ್ಚಕ ಕೈಲಾಶ ಪಾಂಡಾ ತಿಳಿಸಿದ್ದಾರೆ. ಘಟನೆ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಯುತ್ತಿದೆ.
ಕಳ್ಳತನವಾದ ಚಿನ್ನಾಭರಣಗಳು ವಾಪಸ್ ಬಂದಿರುವುದು ದೇವಸ್ಥಾನದ ಅಧಿಕಾರಿಗಳು ಹಾಗೂ ಭಕ್ತರಲ್ಲಿ ಸಂತಸ ತಂದಿದೆ. ಪಶ್ಚಾತ್ತಾಪ ಪಡುವ ಕಳ್ಳನ ಕೃತ್ಯ ಮತ್ತು ಶ್ರೀಕೃಷ್ಣನ ಬೋಧನೆಗಳ ಮಹತ್ವವನ್ನು ಆತ ಅರಿತುಕೊಂಡಿರುವುದು ಭಗವದ್ಗೀತೆಯ ಶಕ್ತಿಗೆ ಸಾಕ್ಷಿಯಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 6

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement