ಪೊಲೀಸರು ಬಂಧಿಸುವುದನ್ನು ತಪ್ಪಿಸಿಕೊಳ್ಳಲು ನ್ಯಾಯಾಲಯದೊಳಕ್ಕೆ ಓಡಿಹೋದ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ | ವೀಕ್ಷಿಸಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಮಾಹಿತಿ ಖಾತೆ ಸಚಿವ ಫವಾದ್ ಚೌಧರಿ ಅವರು ಮರು ಬಂಧನದಿಂದ ತಪ್ಪಿಸಿಕೊಳ್ಳಲು ಮಂಗಳವಾರ ಕಾರಿನಿಂದ ಇಳಿದು ಹೈಕೋರ್ಟ್ ಕಟ್ಟಡದೊಳಕ್ಕೆ ಅಕ್ಷರಶಃ ಓಡಿ ಹೋಗಿದ್ದಾರೆ.
ಕಳೆದ ವಾರ ಇಮ್ರಾನ್ ಖಾನ್ ಅವರ ಬಂಧನದ ನಂತರ ಅವರ ಪಕ್ಷದ ಬೆಂಬಲಿಗರು ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್‌ ಪಕ್ಷದ ಫವಾದ್ ಚೌಧರಿ ಅವರನ್ನು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ ಕಾನೂನು ಅಡಿಯಲ್ಲಿ ಬಂಧಿಸಲಾಗಿದ್ದು, ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಖುಲಾಸೆಗಾಗಿ ಅವರು ಅರ್ಜಿ ಸಲ್ಲಿಸಿದ್ದರು,
ಜಸ್ಟಿಸ್ ಮಿಯಾಂಗುಲ್ ಹಸನ್ ಔರಂಗಜೇಬ್ ಅವರು ಫವಾದ್‌ ಚೌಧರಿ ಅವರ ಮನವಿಯನ್ನು ಆಲಿಸಿದ ನಂತರ ಅವರು ಯಾವುದೇ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಪ್ರಚೋದಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಪ್ರತಿಜ್ಞೆ ಸಲ್ಲಿಸಿದ ನಂತರ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಅವರು ನ್ಯಾಯಾಲಯದ ಆವರಣದಿಂದ ಹೊರಬರುತ್ತಿದ್ದಂತೆ ಹೈಡ್ರಾಮಾ ನಡೆಯಿತು. ಸಾಂಪ್ರದಾಯಿಕ ಸಲ್ವಾರ್-ಕಮೀಜ್ ಧರಿಸಿದ ಮಾಜಿ ಸಚಿವರು ಮನೆಗೆ ಹೋಗಲು ಹೊರಗಡೆ ನಿಂತಿದ್ದ ತಮ್ಮ ಬಿಳಿ ಎಸ್‌ಯುವಿ ಕಾರಿನಲ್ಲಿ ಕುಳಿತರು. ನಂತರ, ಪೊಲೀಸ್ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಅವರು ಗ್ರಹಿಸಿದರು. ತಕ್ಷಣವೇ ಚೌಧರಿ ವಾಹನದಿಂದ ಹೊರಬಂದು ನ್ಯಾಯಾಲಯದ ಕಟ್ಟಡದ ಪ್ರವೇಶದ್ವಾರದ ಕಡೆಗೆ ಓಡುತ್ತಿರುವುದನ್ನು ಟಿವಿ ದೃಶ್ಯಾವಳಿಗಳು ತೋರಿಸಿವೆ. ವಕೀಲರೊಬ್ಬರು ಸಹಾಯಕ್ಕೆ ಬಂದರು. ಹಿನ್ನೆಲೆಯಲ್ಲಿ ಯಾರೋ “ನೀರು ತನ್ನಿ” ಎಂದು ಹೇಳುವುದು ಕೇಳಿಸುತ್ತದೆ ಮತ್ತು ಅವರು “ಹೊರಹೋಗಲು ಹೊರಟಿದ್ದರು” ಎಂದು ಮತ್ತೊಂದು ಧ್ವನಿ ವ್ಯಂಗ್ಯವಾಡುತ್ತದೆ.

ಇಂದಿನ ಪ್ರಮುಖ ಸುದ್ದಿ :-   ತನ್ನ ಕೆಲಸ ಬಿಟ್ಟ ಪೋಷಕರಿಗೆ ಪೂರ್ಣ ಸಮಯದ ಮಗಳಾದ ಚೀನಾ ಮಹಿಳೆ, ಅವಳಿಗೆ ತಿಂಗಳಿಗೆ 47,000 ರೂ. ಸಂಬಳ...!

https://twitter.com/i/status/1658413161945649152

“ಪೊಲೀಸರು ಮತ್ತೆ ಬಂಧಿಸಲು ಪ್ರಯತ್ನಿಸಿದರು” ಎಂದು ಫವಾದ್‌ ಚೌಧರಿ ಪತ್ನಿ ಹಿಬಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯವು ಜಾಮೀನು ನೀಡಿದ ಹೊರತಾಗಿಯೂ ಪೊಲೀಸರು ತಮ್ಮನ್ನು ಬಂಧಿಸಲು ಪ್ರಯತ್ನಿಸಿದರು ಎಂದು ನಂತರ ಚೌಧರಿ ಅವರು ನ್ಯಾಯಮೂರ್ತಿ ಔರಂಗಜೇಬ್ ಅವರಿಗೆ ತಿಳಿಸಿದರು. ನ್ಯಾಯಾಧೀಶರು ಪ್ರತಿಕ್ರಿಯೆಯಾಗಿ “ನೀವು ಸ್ವತಃ ವಕೀಲರು ಎಂಬುದನ್ನು ಪರಿಗಣಿಸಿ ಲಿಖಿತ ಆದೇಶಕ್ಕಾಗಿ ಕಾಯಬೇಕಿತ್ತು” ಎಂದು ನ್ಯಾಯಾಧೀಶರು ಹೇಳಿದರು.
ಸಂಜೆಯ ವೇಳೆಗೆ ಅದೇ ನ್ಯಾಯಾಧೀಶರು ಯಾವುದೇ ಪ್ರಕರಣದಲ್ಲಿ ಚೌಧರಿ ಅವರನ್ನು ಬಂಧಿಸದಂತೆ ನಿರ್ಬಂಧಿಸಿ ಅಧಿಕಾರಿಗಳಿಗೆ ಆದೇಶ ನೀಡಿದಾಗ ಅಂತಿಮವಾಗಿ ಸಚಿವರಿಗೆ ದೊಡ್ಡ ಪರಿಹಾರ ಸಿಕ್ಕಿತು.

ಇಂದಿನ ಪ್ರಮುಖ ಸುದ್ದಿ :-   ತನ್ನ ಕೆಲಸ ಬಿಟ್ಟ ಪೋಷಕರಿಗೆ ಪೂರ್ಣ ಸಮಯದ ಮಗಳಾದ ಚೀನಾ ಮಹಿಳೆ, ಅವಳಿಗೆ ತಿಂಗಳಿಗೆ 47,000 ರೂ. ಸಂಬಳ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement