ಹಿಂಡೆನ್‌ಬರ್ಗ್ ಆರೋಪದಲ್ಲಿ ಅದಾನಿ ಗ್ರೂಪ್‌ಗೆ ಕ್ಲೀನ್‌ಚಿಟ್ ನೀಡಿದ ಸುಪ್ರೀಂ ಕೋರ್ಟ್‌ ಸಮಿತಿ : ದರ ತಿರುಚಿರುವಿಕೆ ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದ ಸಮಿತಿ

ನವದೆಹಲಿ: ಅದಾನಿ ಸಮೂಹವು ಅಕ್ರಮ ಕೈವಾಡದ ಮೂಲಕ ಷೇರು ದರ ತಿರುಚಿರುವ ಮತ್ತು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಷೇರು ನಿಯಂತ್ರಣ ಮಂಡಳಿ – ಸೆಬಿ ಪ್ರಮಾದ ಎಸಗಿರುವುದು ಕಂಡು ಬಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ಅವರ ನೇತೃತ್ವದ ಸಮಿತಿ ಹೇಳಿದೆ.
ಅದಾನಿ ಹಗರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ವರದಿ ಬಿಡುಗಡೆ ಮಾಡಿದ ಬಳಿಕ ಸರ್ವೋಚ್ಚ ನ್ಯಾಯಾಲಯುವು ನ್ಯಾ. ಸಪ್ರೆ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.
“ಈ ಹಂತದಲ್ಲಿ ಸೆಬಿ ನೀಡಿರುವ ವಿವರಣೆ ಮತ್ತು ಅದಕ್ಕೆ ಪೂರಕವಾದ ಪ್ರಾಯೋಗಿಕ ದತ್ತಾಂಶ ಪರಿಗಣಿಸಿದರೆ ಮೇಲ್ನೋಟಕ್ಕೆ ದರ ತಿರುಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೆಬಿಯ ನಿಯಂತ್ರಣದಲ್ಲಿ ವೈಫಲ್ಯ ಇದೆ ಎಂದು ಸಮಿತಿಗೆ ಹೇಳಲು ಸಾಧ್ಯವಿಲ್ಲ” ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅದಾನಿ ಸಮೂಹದ ಪ್ರವರ್ತಕರ ಜೊತೆ ಶಂಕಿತ ಸಂಪರ್ಕ ಹೊಂದಿರುವ 13 ವಿದೇಶಿ ಸಂಸ್ಥೆಗಳು ಫಲಾನುಭವಿ ಮಾಲೀಕರ ಮಾಹಿತಿ ನೀಡಿವೆ;

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   'ಮೂಢನಂಬಿಕೆ' ...: ಒಡಿಶಾದ ರೈಲು ಅಪಘಾತದಲ್ಲಿ ಮೃತಪಟ್ಟವರ ಶವ ಇಟ್ಟ ಶಾಲಾ ಕಟ್ಟಡ ನೆಲಸಮ ಮಾಡುತ್ತಿರುವ ಆಡಳಿತ....!

ಅದಾನಿ ಎನರ್ಜಿಯ ದರ ಹೆಚ್ಚಳಕ್ಕೆ ತಿರುಚುವಿಕೆ ಕೊಡುಗೆ ಹೆಚ್ಚಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟವಾಗಿ ಕಂಡುಬರುವ ಮಾದರಿ ಇಲ್ಲ ಅದಾನಿ ಸಮೂಹಕ್ಕೆ ಸೇರಿದ ಎಲ್ಲಾ ಷೇರುಗಳನ್ನು ದತ್ತಾಂಶ ಒಳಗೊಂಡ ಚಾರ್ಟ್‌ಗಳನ್ನು ವಿಶ್ಲೇಷಣೆಗೋಸ್ಕರ ಸೆಬಿ ಸಿದ್ಧಪಡಿಸಬೇಕು ಎಂದು ಸಮಿತಿ ಹೇಳಿದೆ.
ಅದಾನಿ ಸಮೂಹದ ಕಂಪೆನಿಗಳು ತನ್ನ ಷೇರು ಬೆಲೆಯನ್ನು ತಿರುಚಿದ್ದು, ಸಂಬಂಧಪಟ್ಟ ಪಕ್ಷಕಾರರು ನಡೆಸಿರುವ ವರ್ಗಾವಣೆ ಮಾಹಿತಿ ಬಹಿರಂಗಪಡಿಸಲು ವಿಫಲವಾಗಿದೆ. ಇದು ಸೆಬಿ ರೂಪಿಸಿರುವ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹಿಂಡೆನ್‌ಬರ್ಗ್‌ ಜನವರಿ 24ರಂದು ಪ್ರಕಟಿಸಿದ ವರದಿಯಲ್ಲಿ ಹೇಳಿತ್ತು. ಅದಾನಿ ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹಿಂಡನ್‌ಬರ್ಗ್‌ ವರದಿ ಪ್ರಕಟವಾಗುತ್ತಿದ್ದಂತೆ ಸುಮಾರು 100 ಬಿಲಿಯನ್‌ ಡಾಲರ್‌ಗೂ ಹೆಚ್ಚು ನಷ್ಟಕ್ಕೆ ಅದಾನಿ ಸಮೂಹ ಸಂಸ್ಥೆ ಒಳಗಾಗಿತ್ತು. ಇದರ ಬೆನ್ನಿಗೇ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ ಈ ಸಂಬಂಧ ತನಿಖೆ ನಡೆಸಲು ಆರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಸೆಬಿಯು ತನ್ನದೇ ಆದ ತನಿಖೆಯನ್ನು ನಡೆಸುತ್ತಿರುವುದರ ಜೊತೆಗೆ ಸಮಿತಿಯ ತನಿಖೆಯಲ್ಲೂ ಸಹಕರಿಸುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಇಂದಿನ ಪ್ರಮುಖ ಸುದ್ದಿ :-   2000 ನೋಟುಗಳ ವಿನಿಮಯ: ಆರ್‌ಬಿಐ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್‌

4 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement