ಅಮೆರಿಕ ನಿರ್ಬಂಧಗಳಿಗೆ ಪ್ರತೀಕಾರವಾಗಿ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರನ್ನು ನಿಷೇಧಿಸಿದ ರಷ್ಯಾ

ಮಾಸ್ಕೋ: ವಾಷಿಂಗ್ಟನ್ ವಿಧಿಸಿರುವ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾವು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿಷೇಧಿಸಿದೆ.
“ಅಮೆರಿಕದ ಅಧ್ಯಕ್ಷ ಬೈಡನ್‌ ಆಡಳಿತವು ನಿಯಮಿತವಾಗಿ ವಿಧಿಸುವ ರಷ್ಯಾದ ವಿರೋಧಿ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ … ರಷ್ಯಾದ ಒಕ್ಕೂಟದ ಪ್ರವೇಶವನ್ನು 500 ಅಮೆರಿಕನ್ನರಿಗೆ ನಿರ್ಬಂಧಿಸಲಾಗಿದೆ, ಈ ಪಟ್ಟಿಯಲ್ಲಿ ಒಬಾಮಾ ಕೂಡ ಸೇರಿದ್ದಾರೆ” ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
ಶುಕ್ರವಾರ, ಅಮೆರಿಕ ತನ್ನ ನಿರ್ಬಂಧಗಳ ಕಪ್ಪುಪಟ್ಟಿಗೆ ನೂರಾರು ಕಂಪನಿಗಳು ಮತ್ತು ವ್ಯಕ್ತಿಗಳನ್ನು ಸೇರಿಸಿತು. “ರಷ್ಯಾ ವಿರುದ್ಧ ಯಾವುದೇ ಪ್ರತಿಕೂಲ ಹೆಜ್ಜೆಗೆ ಉತ್ತರಿಸದೆ ಬಿಡುವುದಿಲ್ಲ ಎಂದು ವಾಷಿಂಗ್ಟನ್ ಬಹಳ ಹಿಂದೆಯೇ ಕಲಿತಿರಬೇಕು” ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಹೇಳಿದೆ. ಪಟ್ಟಿ ಮಾಡಲಾದವರಲ್ಲಿ ದೂರದರ್ಶನ ನಿರೂಪಕರಾದ ಸ್ಟೀಫನ್ ಕೋಲ್ಬರ್ಟ್, ಜಿಮ್ಮಿ ಕಿಮ್ಮೆಲ್ ಮತ್ತು ಸೇಥ್ ಮೇಯರ್ಸ್ ಸೇರಿದ್ದಾರೆ.
ಸಿಎನ್‌ಎನ್‌ (CNN) ಆಂಕರ್ ಎರಿನ್ ಬರ್ನೆಟ್ ಮತ್ತು ಎಂಎಸ್‌ಎನ್‌ಬಿಸಿ(MSNBC) ನಿರೂಪಕರಾದ ರಾಚೆಲ್ ಮ್ಯಾಡೋ ಮತ್ತು ಜೋ ಸ್ಕಾರ್ಬರೋ ಕೂಡ ಸೇರಿದ್ದಾರೆ.ಅಮೆರಿಕ ನಿರ್ಬಂಧಗಳಿಗೆ ಪ್ರತೀಕಾರವಾಗಿ 500 ಅಮೆರಿಕನ್ನರನ್ನು ರಷ್ಯಾ ನಿಷೇಧಿಸಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   2023ಕ್ಕೆ ಭಯಾನಕ ಪರಮಾಣು ದುರಂತ, ಸೌರ ಚಂಡಮಾರುತದಿಂದ ಹಾನಿ, ವಿನಾಶಕಾರಿ ಜೈವಿಕ ಶಸ್ತ್ರಾಸ್ತ್ರ ಬಳಕೆ...: ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯ...!

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement