ಕೇರಳ : ದೇವಾಲಯಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸಿದ ಸುಮಾರು 1200 ದೇವಾಲಯ ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ

ತಿರುವನಂತಪುರಂ : ದೇವಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ (TDB) ತನ್ನ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ ಹೊಸ ಸುತ್ತೋಲೆ ಹೊರಡಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿ ದಕ್ಷಿಣ ಭಾರತದಲ್ಲಿ ಸುಮಾರು 1,200 ದೇವಾಲಯಗಳನ್ನು ನಿರ್ವಹಿಸುವ ಸಂಸ್ಥೆಯಾಗಿದೆ.
ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಆಯೋಜಿಸುವ ಸಾಮೂಹಿಕ ಕಸರತ್ತು ಮತ್ತು ಇತರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಮೇ 18 ರಂದು ತಮ್ಮ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಾಲಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ದೇವಾಲಯದ ಸಂಕೀರ್ಣಗಳಲ್ಲಿ TDB ಇಂಥ ಕ್ರಮಗಳನ್ನು ಕೈಗೊಂಡಿರುವುದು ಇದೇ ಮೊದಲಲ್ಲ. 2016 ರಲ್ಲಿ, ಮಂಡಳಿಯು ಆರ್‌ಎಸ್‌ಎಸ್‌ ನಿಂದ ಎಲ್ಲಾ ರೀತಿಯ ಶಸ್ತ್ರಾಸ್ತ್ರ ತರಬೇತಿಯನ್ನು ನಿಷೇಧಿಸುವ ಸುತ್ತೋಲೆ ಹೊರಡಿಸಿತು.
ತಿರುವಾಂಕೂರು ದೇವಸ್ವಂ ಮಂಡಳಿಯು ಮಾರ್ಚ್ 30, 2021 ರಂದು ಆದೇಶವನ್ನು ಮರು ಹೊರಡಿಸಿದ್ದು, ದೇವಾಲಯದ ಆವರಣವನ್ನು ದೇವಾಲಯದ ಆಚರಣೆಗಳು ಮತ್ತು ಉತ್ಸವಗಳಿಗೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಬಾರದು ಎಂದು ಹೇಳಿದೆ. ಟಿಡಿಬಿಯ ಹೊಸ ಸುತ್ತೋಲೆಯಲ್ಲಿ ನಿಷೇಧವನ್ನು ಅನುಸರಿಸಲು ವಿಫಲರಾದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಕಾಂಗ್ರೆಸ್ ಟಿಡಿಬಿ ಸುತ್ತೋಲೆಯನ್ನು ಬೆಂಬಲಿಸಿದೆ ಮತ್ತು ಆರ್‌ಎಸ್‌ಎಸ್ ಜನರ ನಡುವೆ ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸಿದೆ. ಕಾಂಗ್ರೆಸ್ ನಾಯಕ ವಿಡಿ ಸತೀಶನ್ ಅವರು, “ನಾನು ಆ ಸುತ್ತೋಲೆಯನ್ನು ಬೆಂಬಲಿಸುತ್ತಿದ್ದೇನೆ, ಅವರು 2021 ರಲ್ಲಿ ಸುತ್ತೋಲೆ ಹೊರಡಿಸಿದ್ದರೂ ಅದನ್ನು ಆರ್‌ಎಸ್‌ಎಸ್ ಉಲ್ಲಂಘಿಸಿದೆ. ಆರ್‌ಎಸ್‌ಎಸ್ ಜನರ ನಡುವೆ ದ್ವೇಷ ಹರಡುತ್ತಿದೆ, ಜನರ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದೆ. ದೇವಾಲಯದ ಆವರಣವನ್ನು ಅಂತಹ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ, ಇದು ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement