ವೀಡಿಯೊ..: ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡುತ್ತಿರುವ ನಾಯಿ : “ಇದು ಮನುಷ್ಯರಿಗೆ ಪಾಠ” ಎಂದ ನೆಟ್ಟಿಗರು | ವೀಕ್ಷಿಸಿ

ಬೈಕಿನಲ್ಲಿ ಸವಾರ ಮತ್ತು ಹಿಂಬದಿಯ ಸವಾರ ಹೆಲ್ಮೆಟ್ ಧರಿಸುವುದು ದಿನನಿತ್ಯದ ಟ್ರಾಫಿಕ್‌ನಲ್ಲಿ ಸಾಮಾನ್ಯ ದೃಶ್ಯವಾಗಿದೆ, ಆದರೆ ಒಬ್ಬ ವ್ಯಕ್ತಿಯೊಬ್ಬರು ಹಿಂಬದಿಯ ಸೀಟಿನಲ್ಲಿ ಸವಾರನಂತೆ ಹೆಲ್ಮೆಟ್‌ ಧರಿಸಿ ಕುಳಿತ ನಾಯಿಯ ಜೊತೆ ಬೈಕ್ ಚಲಾಯಿಸುವುದು ಅಸಾಮಾನ್ಯ ಸಂಗತಿಯಾಗಿದೆ.
@PMN2463 ಎಂಬ ಟ್ವಿಟ್ಟರ್ ಖಾತೆಯಿಂದ ಮಂಗಳವಾರ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಪ್ರಯಾಣಿಕರಂತೆ ನಾಯಿಯೊಂದು ಬೈಕ್ ಮೇಲೆ ಹೆಲ್ಮೆಟ್‌ ಧರಿಸಿ ಕುಳಿತು ಹೋಗುವುದನ್ನು ನೋಡಬಹುದು. ಈ ಹಳೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಗಮನ ಸೆಳೆಯುತ್ತಿದೆ. “ನಿಯಮವೆಂದರೆ ನಿಯಮ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿ ಬೈಕ್ ಓಡಿಸುತ್ತಿರುವುದನ್ನು ಹಾಗೂ ಆತನ ಹಿಂದೆ ಕಪ್ಪು ಬಣ್ಣದ ಲ್ಯಾಬ್ರಡಾರ್ ನಾಯಿ ಕೂಡ ಹೆಲ್ಮೆಟ್ ಹಾಕಿಕೊಂಡು ಕುಳಿತಿರುವುದನ್ನು ವೀಡಿಯೊದಲ್ಲಿ ನೋಡಬಹುದು. ಬೈಕ್‌ನ ಹಿಂಬದಿಯ ಸೀಟಿನಲ್ಲಿ ನಾಯಿಯು ತನ್ನ ಮುಂಭಾಗದ ಎರಡು ಕಾಲುಗಳನ್ನು ಸವಾರನ ಹೆಗಲ ಮೇಲೆ ಇಟ್ಟು ನೇರವಾಗಿ ಕುಳಿತಿದೆ. ನಾಯಿಯ ಭಂಗಿಯು ನಾಯಿಗಿಂತ ಮನುಷ್ಯ ಕುಳಿತಿರುವಂತೆ ತೋರುತ್ತದೆ.

ಈ ವೀಡಿಯೊಗೆ ವೀಕ್ಷಕರ ಪ್ರತಿಕ್ರಿಯೆಗಳು ಮಿಶ್ರವಾಗಿವೆ; ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ, ಇತರರು ನಾಯಿಯನ್ನು ಚೆನ್ನಾಗಿ ಕಾಳಜಿ ವಹಿಸಿದ್ದಕ್ಕಾಗಿ ವ್ಯಕ್ತಿಗೆ ಧನ್ಯವಾದ ಸಲ್ಲಿಸುತ್ತಿದ್ದಾರೆ. “ಬೈಕರ್ ಸಮೀಪ ಹೋಗುವವರೆಗೂ ಇದು ಯಾರೋ ಉದ್ದನೆಯ ಕೂದಲಿನ ಮಹಿಳೆ ಎಂದು ನಾನು ಭಾವಿಸಿದೆ” ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. “ನೀವು ಯಾರನ್ನಾದರೂ ಪ್ರೀತಿಸಿದರೆ, ನೀವು ಅವರ ಬಗ್ಗೆ ಕಾಳಜಿ ವಹಿಸುತ್ತೀರಿ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಹಿರಿಯ ನಟಿ ಸುಲೋಚನಾ ಲಾಟ್ಕರ್ ಮುಂಬೈನಲ್ಲಿ ನಿಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement