ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಚಾಟ್‌ ಜಿಪಿಟಿ ಬಳಸಿ ಒಂದು ವರ್ಷದೊಳಗೆ 100ಕ್ಕೂ ಹೆಚ್ಚು ಕಾದಂಬರಿ ಬರೆದ ಲೇಖಕ…! ಲಕ್ಷಾಂತರ ಹಣವೂ ಬಂತು…!!

ಕೃತಕ ಬುದ್ಧಿಮತ್ತೆ (Artifical Intelligence) ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಕೃತಕಬುದ್ಧಿಮತ್ತೆ (AI) ಮುಂಬರುವ ದಿನಗಳಲ್ಲಿ ದೊಡ್ಡ ಬದಲಾವಣೆಗಳನ್ನು ಸಾಬೀತುಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಈಗಾಗಲೇ ಅದರ ಮುನ್ಸೂಚನೆ ಸಿಕ್ಕಿದೆ. ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಸಹಾಯದಿಂದ ಓಪನ್‌ ಎಐ ಚಾಟ್ ಜಿಪಿಟಿ (Open AI ChatGPT)ಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ ನಂತರ, ಜನರು ತಮ್ಮ ಕೆಲಸವನ್ನು ಸರಳಗೊಳಿಸಲು ಅದನ್ನು ಬಳಸುತ್ತಿದ್ದಾರೆ. ಇದೇ ವೇಳೆ ಚಾಟ್ ಜಿಪಿಟಿಗೆ ಸಂಬಂಧಿಸಿದಂತೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಲೇಖಕರೊಬ್ಬರು ಈ ಆರ್ಟಿಫಿಶಿಯಲ್‌ ಇಂಟೆಲಿಗಜೆನ್ಸ್‌ (AI) ಟೂಲ್ಸ್‌ ಬಳಸಿಕೊಂಡು ಒಂದು ವರ್ಷದೊಳಗೆ 100 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ ಮತ್ತು ಅವುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ಗಳಿಸಿದ್ದಾರೆ ಎಂಬುದು ಈಗ ಭಾರೀ ಸುದ್ದಿಯಲ್ಲಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಟಿಮ್ ಬೌಚರ್ ಎಂಬ ಲೇಖಕರು ಚಾಟ್ ಜಿಪಿಟಿ (Chat GPT) ಮತ್ತು ಆಂಥ್ರೊಪಿಕ್ ಕ್ಲೌಡ್‌ನಂತಹ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಟೂಲ್ಸ್‌ ಸಹಾಯದಿಂದ ಒಂದು ವರ್ಷದೊಳಗೆ 100 ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ, ಅದರಲ್ಲಿ ಚಿತ್ರಗಳನ್ನು ಸಹ ಬಳಸಲಾಗಿದೆ. AI ಜೊತೆಗೆ ವೈಜ್ಞಾನಿಕ ಕಾದಂಬರಿಯನ್ನು ಸಂಯೋಜಿಸುವ ಇಂತಹ ಇ-ಪುಸ್ತಕಗಳನ್ನು ರಚಿಸುವುದು ಲೇಖಕರ ಉದ್ದೇಶವಾಗಿತ್ತು. ಟಿಮ್ ಬೌಚರ್ “ಎಐ ಲೋರ್ ಸರಣಿ (AI Lore series)ಗೆ ವೈಜ್ಞಾನಿಕ ಕಾಲ್ಪನಿಕ ಕಾದಂಬರಿಗಳನ್ನು ಬರೆಯುತ್ತಾರೆ ಮತ್ತು ಈ ಪುಸ್ತಕಗಳು ಮಾನವ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI)ನ ಅದ್ಭುತ ಸಾಧ್ಯತೆಗಳನ್ನು ಪ್ರದರ್ಶಿಸುತ್ತವೆ ಎಂದು ಅವರು ನಂಬುತ್ತಾರೆ. 5000ಕ್ಕೂ ಹೆಚ್ಚು ಶಬ್ದಗಳು ಮತ್ತು ಡಜನ್‌ಗಟ್ಟಲೆ ಚಿತ್ರಗಳನ್ನು ಒಳಗೊಂಡಿರುವ ಓಪನ್ ಎಐನ ಚಾಟ್ ಜಿಪಿಟಿ ( Open AI’s Chat GPT) ಮತ್ತು ಇಮೇಜ್ ಜನರೇಷನ್ ಟೂಲ್ಸ್‌ ಸಹಾಯದಿಂದ ಲೇಖಕರು ಈ ಪುಸ್ತಕಗಳನ್ನು ಬರೆದಿದ್ದಾರೆ.

ಟಿಮ್ ಬೌಚರ್ ಅವರು AI ಸಹಾಯವನ್ನು ತೆಗೆದುಕೊಂಡು ಕಡಿಮೆ ಸಮಯದಲ್ಲಿ ಅನೇಕ ಪುಸ್ತಕಗಳನ್ನು ಬರೆದಿರುವುದಾಗಿ ಹೇಳಿದ್ದಾರೆ. ಅವರು ಆಶ್ಚರ್ಯಕರ ಘಟನೆಯನ್ನು ಹೇಳಿದರು ಮತ್ತು ಅವರು ಕೇವಲ ಮೂರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತಮ್ಮ ಕಾದಂಬರಿಯನ್ನು ಪೂರ್ಣಗೊಳಿಸಿದರು ಮತ್ತು ಆಗಸ್ಟ್ ಮತ್ತು ಮೇ ನಡುವೆ ಈ ಕಾದಂಬರಿಯ 500 ಪ್ರತಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕುಳಿತಲ್ಲೇ ಲೇಖಕರು ಕಾದಂಬರಿಗಳನ್ನು ಮಾರಾಟ ಮಾಡಿ $2,000 ಅಂದರೆ 1,65,536 ರೂ.ಗಳನ್ನು ಗಳಿಸಿದರು.
ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಅನ್ನು ಸರಿಯಾಗಿ ಬಳಸಿದರೆ, ಒಬ್ಬ ವ್ಯಕ್ತಿಯು ತನ್ನ ಸೃಜನಶೀಲತೆಯನ್ನು ಹೆಚ್ಚಿಸಬಹುದು ಮತ್ತು ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ಮಾಡಬಹುದು ಎಂದು ಅವರು ಹೇಳುತ್ತಾರೆ. ಓದುಗರು ಮತ್ತಷ್ಟು ಕಾದಂಬರಿಗಳನ್ನು ಓದಲು ಆಸಕ್ತಿ ತೋರುವಂತೆ ಟಿಮ್ ಈ ಕಾದಂಬರಿಗಳನ್ನು ಸರಣಿಗಾಗಿ ಸಿದ್ಧಪಡಿಸಿದ್ದಾರೆ. AI ಸಹಾಯದಿಂದ ಬರೆಯುವುದರಿಂದ ಕಾದಂಬರಿಯ ವೆಚ್ಚ ಬಹಳ ಕಡಿಮಯೆಯಾಯಿತು. ಮತ್ತು ಪ್ರತಿ ಕಾದಂಬರಿಯು $ 2 ರಿಂದ $ 4 ರ ನಡುವೆ ಲಭ್ಯವಿತ್ತು. ಈ ಕಾದಂಬರಿಗಳ ವೆಚ್ಚವು ತುಂಬಾ ಪಾಕೆಟ್ ಸ್ನೇಹಿಯಾಗಿತ್ತು ಎಂದು ಟಿಮ್‌ ಬೌಚರ್‌ ಹೇಳಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement